No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Monday, April 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ದಕ್ಷ

ಬುಲೆಟ್ ಸವಾರಿ-16: ಬಂಗಾರಪ್ಪ ಮಗನಿಗೆ ಸ್ಪಾಟ್ ಫೈನ್-1

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 28, 2018
in ದಕ್ಷ
0
Share on FacebookShare on TwitterShare on WhatsApp

1983
ಕೊನೆಗೂ ಆ ಕಾರನ್ನು ಚೇಸ್ ಮಾಡಿ ಹಿಡಿದೆ. ಸಿಟ್ಟಿನಿಂದ ಕುದಿಯುತ್ತಿದ್ದ ನಾನು ಕಾರಿನ ಮುಂದಿನ ಬಾಗಿಲು ಓಪನ್ ಮಾಡಿ ಚಾಲಕನ ಕತ್ತಿನ ಪಟ್ಟಿ ಹಿಡಿದು ಹೊರಗೆಳೆದೆ. ಇನ್ನೇನು ಕಪಾಳಕ್ಕೆ ಬಿಗಿಯಬೇಕು ಎನ್ನುವಷ್ಟರಲ್ಲಿ ‘ಸರ್ ಸರ್… ನಾನು ಬಂಗಾರಪ್ಪನವರ ಮಗ ಸರ್,’ ಎಂದವರು ಕೂಗಿಕೊಂಡರು! ಅದೇ ಹೊತ್ತಿಗೆ ಅಂದಿನ ಪೊಲೀಸ್ ಕಮಿಷನರ್ ಪಿ.ಜಿ. ಹರ್ಲಂಕರ್ ಅವರು ವೈರ್‌ಲೆಸ್ ಮೂಲಕ ಆ ಕಾರಿನ ಬಗ್ಗೆ ಮಾಹಿತಿ ಕೇಳಿದರು. ಆ ಕಾರು ಚಲಾಯಿಸುತ್ತಿದ್ದಾತನ ಕುರಿತು ಅವರು ಕಿಡಿಕಿಡಿಯಾಗಿದ್ದರು. ನಾನು ಅದು ಯಾರ ಕಾರೆಂಬುದನ್ನು ಅವರಿಗೆ ಹೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ‘ಬಂಗಾರಪ್ಪನವರ ಮಗ ಆಗಿರಲಿ, ಯಾರದೇ ಮಗ ಆಗಿರಲಿ ನಿಯಮ ಎಲ್ಲರಿಗೂ ಒಂದೇ, ಕಾರಣಕ್ಕೂ ಬಿಡಬೇಡಿ. ಸ್ಥಳದಲ್ಲೇ ದಂಡ ವಸೂಲು ಮಾಡಿಕೊಂಡು ಬನ್ನಿ.’ ಎಂದು ಆದೇಶ ನೀಡಿದರು.

ಅವರೇ ಮಾತು ಮುಂದುವರಿಸಿ ‘ಕಾರನ್ನು ಅತೀ ವೇಗವಾಗಿ ಚಲಾಯಿಸಿದ್ದು, ಅಜಾಗರೂಕತೆಯಿಂದ ಕಾರು ಓಡಿಸಿದ್ದು, ಸಿಗ್ನಲ್ ಜಂಪ್ ಮಾಡಿದ್ದು, ಟ್ರಾಫಿಕ್ ಪೊಲೀಶರ ಸೂಚನೆ ಧಿಕ್ಕರಿಸಿ ಹೋಗಿದ್ದು… ಹೀಗೆ ನಾಲ್ಕು ಪ್ರಕರಣಗಳನ್ನು ದಾಖಲಿಸಿ ಫೈನ್ ಹಾಕಿ,’ ಎಂದರು! ನಾನು ಇವಿಷ್ಟೂ ಉಲ್ಲಂಘನೆಯ ವಿವರ ದಾಖಲಿಸಿ ನೋಟಿಸ್ ನೀಡಿದೆ. ದಂಡದ ಮೊತ್ತ ಒಟ್ಟು ಒಂದು ಸಾವಿರ ರೂ. ಆಯಿತು.
ಬಂಗಾರಪ್ಪ ತಮ್ಮ ಮನೆಯ ಹೊರಗೆ ಏನೋ ಗಲಾಟೆ ನಡೆಯುತ್ತಿದೆಯಲ್ಲ ಎಂದುಕೊಂಡು ಹೊರಗೆ ಬಂದರು. ನನ್ನ ಬಳಿ ಬಂದು ಏನೆಂದು ವಿಚಾರಿಸಿದರು. ವಿಷಯ ತಿಳಿಯುತ್ತಿದ್ದಂತೆ ಮಗನ ಕಡೆ ತಿರುಗಿ ‘ನಾನು ಎಷ್ಟು ಸಲ ಹೇಳಿದ್ದೇನೆ ಓವರ್ ಸ್ಪೀಡ್ ಡ್ರೈವಿಂಗ್ ಮಾಡಬೇಡಾ ಅಂತ. ನನಗೆ ಗೊತ್ತಿಲ್ಲ, ನೀನೇ ಈಗ ದಂಡ ಕಟ್ಟು,’ ಎಂದು ಗದರಿದರು. ಸ್ವಲ್ಪ ಹೊತ್ತಿನ ಬಳಿಕ ಬಂಗಾರಪ್ಪನವರ ಪತ್ನಿ ಅಲ್ಲಿಗೆ ಬಂದರು, ಆಗ ಬಂಗಾರಪ್ಪನವರು ಅವರನ್ನುದ್ದೇಶಿಸಿ ‘ನೋಡೆ ನಿನ್ನ ಮಾಡಿರುವ ಘನಂದಾರಿ ಕೆಲಸ. ನಾನು ಎಷ್ಟು ಬಾರಿ ಹೇಳಿದರೂ ನಿನ್ನ ಮಗ ಕೇಳಿಸಿಕೊಳ್ಳುತ್ತಿಲ್ಲ. ನನಗೆ ಗೊತ್ತಿಲ್ಲ. ಈಗ ಅಮ್ಮ ಮತ್ತು ಮಗ ಸೇರಿ ಫೈನ್ ಕಟ್ಟಿ,’ ಎಂದು ಹೇಳಿ ಮನೆಯೊಳಗೆ ಹೋದರು!

ಸ್ವಲ್ಪ ಹೊತ್ತಿನ ಬಳಿಕ ಹಿಂತಿರುಗಿ ಬಂದು ‘ಏನಪ್ಪ… ಇದೊಂದು ಬಾರಿ ವಾರ್ನಿಂಗ್ ಕೊಟ್ಟು ಬಿಡಲಾಗುವುದಿಲ್ಲವೇ,’ ಎಂದು ವಿನಮ್ರತೆಯಿಂದ ಕೋರಿದರು. ‘ಸಾಧ್ಯ ಇಲ್ಲ ಸರ್, ಸ್ಪಾಟ್ ಫೈನ್ ಕಟ್ಟಲೇಬೇಕು,’ ಎಂದು ನಾನು ಗೌರವದಿಂದಲೇ ಹೇಳಿದೆ. ಆಗ ಬಂಗಾರಪ್ಪನವರು ಯಾವ ಊರಿನವರು,’ ಎಂದು ಕೇಳಿದರು. ‘ನಾನು ಕೊಡಗಿನವನು,’ ಎಂದೆ. ‘ಆಯ್ತು ಬಿಡಪ್ಪ,’ ಎಂದು ಹೊರಟು ಹೋದರು. ಅವರ ಪತ್ನಿ ಮನೆಯೊಳಗಿನಿಂದ ನೂರು ರೂ.ನ ಹತ್ತು ನೋಟುಗಳನ್ನು ಎಣಿಸುತ್ತ ಬಂದು ಮೌನವಾಗಿ ನನ್ನ ಕೈಗಿಟ್ಟರು. ನಾನು ರಶೀದಿ ಹರಿದು ಅವರ ಮಗನಿಗೆ ಕೊಟ್ಟೆ. ಅವರು ತಲೆ ತಗ್ಗಿಸಿಕೊಂಡು ಅಮ್ಮನನ್ನು ಹಿಂಬಾಲಿಸುತ್ತ ಮನೆಯೊಳಗೆ ಹೋದರು. ಅವರು ಕುಮಾರ್ ಬಂಗಾರಪ್ಪ!

ಬಂಗಾರಪ್ಪ ಅವರು ಆಗ ಕಾಂಗ್ರೆಸ್ ತೊರೆದು ಕ್ರಾಂತಿ ರಂಗ ಪಕ್ಷ ಕಟ್ಟಿದ್ದರು. ಕಾಂಗ್ರೆಸ್ ವಿರೋಧಿ ಅಲೆ ಎದ್ದಿತ್ತು. ಜನತಾ ಪಕ್ಷ ಮತ್ತು ಕ್ರಾಂತಿರಂಗ ಮೈತ್ರಿಕೂಟ ಅಧಿಕಾರಕ್ಕೇರುವ ಕ್ಷಣಗಣನೆ ಆರಂಭವಾಗಿತ್ತು. ಬಂಗಾರಪ್ಪ ಅವರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಅವರು ಆ ಹೊತ್ತಿಗಾಗಲೇ ರಾಜ್ಯದ ಪ್ರಭಾವಿ ನಾಯಕರೆನಿಸಿದ್ದರು. ಹಲವಾರು ಐಎಎಸ್, ಐಪಿಎಸ್ ಅಧಿಕಾರಿಗಳು ಅವರಿಗೆ ಪರಮಾಪ್ತರಾಗಿದ್ದರು. ಅವರು ನೇರವಾಗಿ ಅಲ್ಲ, ಅವರ ಸಹಾಯಕರಿಂದ ಕಮಿಷನರ್‌ಗೆ ಫೋನ್ ಮಾಡಿಸಿದ್ದರೂ ದಂಡದಿಂದ ವಿನಾಯಿತಿ ಸಿಗುತ್ತಿತ್ತೇನೋ, ಹೀಗಿರುವಾಗ, ನಾನು ಅವರ ಮಗನನ್ನು ಮನೆ ಬಾಗಿಲವರೆಗೆ ಅಟ್ಟಾಡಿಸಿಕೊಂಡು ಹೋಗಿ ಹಾಕಿದರೂ ಬಂಗಾರಪ್ಪ ಸಿಡುಕಲಿಲ್ಲ. ತಮ್ಮ ಪ್ರಭಾವ ಬೀರಲು ಯತ್ನಿಸಲಿಲ್ಲ. ಅವರ ಈ ನಡೆ ನನಗೆ ಅಚ್ಚರಿಯುಂಟು ಮಾಡಿತು. ಫೈನ್ ಹಾಕಿ ಹಿಂತಿರುಗಿದ ಸಂಗತಿಯನ್ನು ನಾನು ಕಮಿಷನರ್‌ಗೆ ಹೇಳಿದೆ. ಅವರು ‘ಶಹಬ್ಬಾಸ್’ ಎಂದು ನನ್ನ ಬೆನ್ನು ತಟ್ಟಿದರು.

ಇಷ್ಟಕ್ಕೂ ಆಗಿದ್ದೇನೆಂದರೆ ಆಗ ನಾನು ಹಲಸೂರು ಸಬ್ ಡಿವಿಷನ್‌ನಲ್ಲಿ ಟ್ರಾಫಿಕ್ ಎಸ್‌ಐ ಆಗಿದ್ದೆ. ಸಂಚಾರ ನಿಯಮಗಳ ವಿಚಾರದಲ್ಲಿ ನಾನು ಬಹಳ ಕಟ್ಟುನಿಟ್ಟಾಗಿದ್ದೆ. ರೂಲ್ಸ್ ಬ್ರೇಕ್ ಮಾಡಿದವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಮುಲಾಜಿಲ್ಲದೆ ಹಾಕುತ್ತಿದ್ದೆ. ನನ್ನ ಸೂಚನೆ ಧಿಕ್ಕರಿಸಿ ಯಾರಾದರೂ ಪರಾರಿಯಾದರೆ, ಅಂಥವರನ್ನು ನನ್ನ ಬುಲೆಟ್ ಬೈಕ್‌ನಲ್ಲಿ ಹತ್ತಾರು ಕಿ.ಮೀ. ದೂರದವರೆಗೆ ಚೇಸ್ ಮಾಡಿಕೊಂಡು ಹೋಗಿ ಹಿಡಿದು ತದಕುತ್ತಿದ್ದೆ. ನನಗೆ ಆ ದಿನಗಳಲ್ಲಿ ಹಾಗೆ ಚೇಸ್ ಮಾಡಿಕೊಂಡು ಹೋಗುವುದೆಂದರೆ ಭಾರೀ ಥ್ರಿಲ್ ಕೊಡುವ ಸಂಗತಿಯಾಗಿತ್ತು. ಅಂದಿನ ಕಮಿಷನರ್ ಹರ್ಲಂಕರ್ ಅವರ ಖಾಸಗಿ ಮನೆ ಇಂದಿರಾನಗರದಲ್ಲಿತ್ತು. ಅವರು ಆ ದಿನ ಬೆಳಗ್ಗೆ 9.30ಕ್ಕೆ ಇಂದಿರಾನಗರದಿಂದ ಕಮಿಷನರ್ ಆಫೀಸಿಗೆ ಬರುವಾಗ ನಾನು ಹಳೆಯ ವಿಮಾನ ನಿಲ್ದಾಣ ಕಾನ್‌ಸ್ಟೇಬಲ್ ಗೋಪಾಲ್ ಎಂಬುವರ ಜತೆ ಗಸ್ತಿನಲ್ಲಿದ್ದೆ.

ಕಮಿಷನರ್ ಕಾರು ಎಂ.ಜಿ.ರಸ್ತೆಯ ಟ್ರಿನಿಟಿ ಚರ್ಚ್ ಜಂಕ್ಷನ್‌ನಲ್ಲಿ ದಾಟುವಾಗ, ಸ್ಪರದ್ರೂಪಿ ಯುವಕನೊಬ್ಬ ಹೊಚ್ಚ ಹೊಸ ಮಾರುತಿ-800 ಕಾರನ್ನು ಮಿತಿ ಮೀರಿದ ವೇಗದಲ್ಲಿ ಚಲಾಯಿಸುತ್ತ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ. ಆ ಕಾರು ಕಮಿಷನರ್ ಕಾರಿಗೆ ಡಿಕ್ಕಿ ಹೊಡೆಯುವುದು ಕೂದಲೆಳೆಯ ಅಂತರದಲ್ಲಿ ತಪ್ಪಿತು! ಟ್ರಾಫಿಕ್ ಪೊಲೀಸರು ಕೈ ಅಡ್ಡ ಹಾಕಿದರೂ ಚಮಕಾಯಿಸಿಕೊಂಡು ಪರಾರಿಯಾದ. ಈ ಘಟನೆಯಿಂದ ಗಾಬರಿಗೊಂಡ ಕಮಿಷನರ್ ಕೋಪಗೊಂಡರು. ಆ ಕಾರಿನ ನಂ. ನೋಟ್ ಮಾಡಿಕೊಂಡು, ತಕ್ಷಣ ಆತನನ್ನು ಹಿಡಿದು ದಂಡ ಹಾಕುವಂತೆ ವೈರ್‌ಲೆಸ್‌ನಲ್ಲಿ ಆದೇಶ ನೀಡಿದರು.
(ಮುಂದೇನಾಯ್ತು? ನಾಳೆ ಓದಿ)

Tags: Bangalore PoliceBangarappaBullet SavariDakshaDavanagereKalpa NewsKumar BangarappaTiger BB Ashok Kumar
Share196Tweet123Send
Previous Post

ಇದೊಂದು ಜಗತ್ತು: ಕೆರೆಬಿಯನ್ನಲ್ಲಿ ಭಾರತೀಯರು-1

Next Post

ಇದೊಂದು ಜಗತ್ತು: ಕೆರೆಬಿಯನ್ನಲ್ಲಿ ಭಾರತೀಯರು-2

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇದೊಂದು ಜಗತ್ತು: ಕೆರೆಬಿಯನ್ನಲ್ಲಿ ಭಾರತೀಯರು-2

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
SWR to run special trains for Good Friday, Easter rush

ಬೆಂಗಳೂರು – ಅಲಿಪುರ್ದ್ವಾರ್ ಒಂದು ಟ್ರಿಪ್ ವಿಶೇಷ ರೈಲು ಸೇವೆ

April 20, 2026
ಜಪಾನ್‌ | 7.5 ತೀವ್ರತೆಯ ಪ್ರಬಲ ಭೂಕಂಪ | ಸುನಾಮಿ ಸಾಧ್ಯತೆ: ಎಚ್ಚರಿಕೆ

ಜಪಾನ್‌ | 7.5 ತೀವ್ರತೆಯ ಪ್ರಬಲ ಭೂಕಂಪ | ಸುನಾಮಿ ಸಾಧ್ಯತೆ: ಎಚ್ಚರಿಕೆ

April 20, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

 ಹುಬ್ಬಳ್ಳಿ – ಅಲಿಪುರ್ ದ್ವಾರ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆ 

April 20, 2026
ವೀಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ: ಅರ್ಜಿ ಆಹ್ವಾನ

ವೀಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ: ಅರ್ಜಿ ಆಹ್ವಾನ

April 20, 2026
ಏ.21 ರಿಂದ 25ರವರೆಗೆ ಶ್ರೀನಿವಾಸ ಕಲ್ಯಾಣ ಪ್ರವಚನ – ಕಲ್ಯಾಣೋತ್ಸವ

ಏ.21 ರಿಂದ 25ರವರೆಗೆ ಶ್ರೀನಿವಾಸ ಕಲ್ಯಾಣ ಪ್ರವಚನ – ಕಲ್ಯಾಣೋತ್ಸವ

April 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL