No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
  • Advertise With Us
  • Grievances
  • About Us
  • Contact Us
Friday, August 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ದಕ್ಷ

ಬುಲೆಟ್ ಸವಾರಿ-3: ಮೊಟ್ಟ ಮೊದಲ ಎನ್‌ಕೌಂಟರ್-1

kalpa News by kalpa News
January 2, 2018
in ದಕ್ಷ
0
Share on FacebookShare on TwitterShare on WhatsApp

1989
ಗೇಟು ಟನ್ ಎಂದು ಸದ್ದು ಮಾಡಿದ್ದೇ ತಡ, ಎರಡು ಡಾಬರ್‌ಮನ್ ನಾಯಿಗಳು ವಿಕಾರವಾಗಿ ಬೊಗಳುತ್ತ ನಮ್ಮತ್ತ ನೆಗೆಯಲಾರಂಭಿಸಿದವು. ಉಪಾಯವಾಗಿ ಆ ನಾಯಿಗಳ ಬಾಯಿ ಮುಚ್ಚಿಸಿದೆವು. ಅದು ಓಲ್ಡ್ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿ ಬಳಿಯ ಕಚ್ಚಾ ಮಾರ್ಗ, ಖಚಿತ ಮಾಹಿತಿ ಆಧರಿಸಿ ಆ ಮನೆಯ ಆವರಣಕ್ಕೆ ಲಗ್ಗೆ ಹಾಕಿದ್ದೆವು. ಮೊದಲೇ ಪ್ಲ್ಯಾನ್ ಮಾಡಿಕೊಂಡಂತೆ ಆ ಮನೆಯ ಬಾಗಿಲನ್ನು ಒಂದೇ ಏಟಿಗೆ ಒಡೆದು ಒಳ ನುಗ್ಗಿದೆವು. ನಮಗೆ ಬೇಕಾದ ವ್ಯಕ್ತಿ ಒಳ ಕೋಣೆಯ ಮುರುಕು ಮಂಚದ ಮೇಲೆ ಯಾವುದರ ಪರಿವೆಯೇ ಇಲ್ಲವೆಂಬಂತೆ ಅರೆನಗ್ನವಾಗಿ ಅಂಗಾತ ಬಿದ್ದುಕೊಂಡಿದ್ದ. ಸುತ್ತಲೂ ಗವ್ವೆನ್ನುವ ಕತ್ತಲು. ಕರ‌್ರಗೆ ಡಾಮರಿನಂತಹ ಮೈಬಣ್ಣ, ಸಾಲದೆಂಬಂತೆ ಅದೇ ಬಣ್ಣದ ಒಳ ಉಡುಪು! ಹಾಸಿಗೆಯ ಮೇಲೆ ಕಪ್ಪು ಬಣ್ಣದ ಹೆಬ್ಬಾವು ಬಿದ್ದುಕೊಂಡಿದೆಯೇನೋ ಎಂಬಂತೆ ಭಾಸವಾಯಿತು. ಮಿಸುಕಾಡಲೂ ಬಿಡದಂತೆ ಆತನಿಗೆ ಕೈಕೋಳ ಹಾಕಿ ನಮ್ಮ ವಾಹನದೊಳಕ್ಕೆ ಕೂರಿಸಿಕೊಂಡೆವು. ಆತ ಗಣೇಶ್ ಅಲಿಯಾಸ್ ಕಾಲಾ ಪತ್ಥರ್. ‘ಮೋಸ್ಟ್ ವಾಂಟೆಂಡ್’ ಆರೋಪಿಯ ಬಗ್ಗೆ ಆತನಿಂದ ಮಾಹಿತಿ ಬಯಸಿದೆವು. ತನಗೆ ಗೊತ್ತೇ ಇಲ್ಲ ಎಂದು ವಾದಿಸತೊಡಗಿದ. ಸೂಕ್ತ ‘ಉಪಚಾರ’ ಸಿಕ್ಕ ಮೇಲೆ ಕುಂಯೋಮುರ‌್ರೊ ಎನ್ನುತ್ತ ಬಾಯಿ ಬಿಟ್ಟ. ಆದರೆ ಒಂದು ಕೋರಿಕೆ ಸಲ್ಲಿಸಿದ. ‘ಆತನ ಅಡ್ಡಾ ಎಲ್ಲಿದೆ ಎನ್ನುವುದನ್ನು ಪೊಲೀಸರಿಗೆ ಹೇಳಿದ್ದು ಗೊತ್ತಾದರೆ, ಜೈಲಿನಿಂದ ಹೊರ ಬಂದ ತಕ್ಷಣ ನನ್ನನ್ನು ಮುಗಿಸಿ ಬಿಡುತ್ತಾನೆ. ಹಾಗಾಗಿ ನಿಮ್ಮಲ್ಲಿಬ್ಬರು ನನ್ನ ಜತೆ ಬರಲಿ. ಆ ಮನೆ ತೋರಿಸುತ್ತೇನೆ. ನಾನು ವಾಪಸ್ ಈ ಸ್ಥಳಕ್ಕೆ ಬಂದ ಬಳಿಕವೇ ನೀವು ಅಲ್ಲಿ ರೈಡ್ ಮಾಡಿ ಸರ್; ಎಂದ. ನಾವು ಯಸ್ ಅಂದೆವು. ಆ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕುಖ್ಯಾತ ರೌಡಿಯೊಬ್ಬನ ಸೆರೆಗಾಗಿ ನಾವು ಕೈಗೊಂಡಿದ್ದ ಮಧ್ಯರಾತ್ರಿ ಕಾರ್ಯಾಚರಣೆ ಆಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿತು. ಬಾಣಸವಾಡಿ ಠಾಣೆ ವ್ಯಾಪ್ತಿಯ ಕಮ್ಮನಹಳ್ಳಿಯ ಮುನೇಗೌಡ ರಸ್ತೆಯಲ್ಲಿರುವ ಒಂದು ಅಂತಸ್ತಿನ ಪುಟ್ಟ ಮನೆಯಲ್ಲಿ ಆತ ಇರುವುದು ಪಕ್ಕಾ ಆಯಿತು. ಆತನ ಹೆಸರು ಶೇಖರ್ ಅಲಿಯಾಸ್ ಸ್ಟೇಷನ್ ಶೇಖರ್, ಭೂಗತ ಜಗತ್ತಿನ ಕುಖ್ಯಾತ ಡಾನ್ ಎಂ.ಪಿ. ಜಯರಾನ್‌ನ ಬಲಗೈ ಬಂಟ ಆತ. ಚಿತ್ತೂರಿನಿಂದ ನಾಡ ಪಿಸ್ತೂಲು ಮತ್ತು ಕಚ್ಚಾ ಬಾಂಬ್‌ಗಳನ್ನು ತಂದು ಬೆಂಗಳೂರಿಗೆ ಪರಿಚಯಿಸಿದ್ದೇ ಆತನ. ಅಲ್ಲಿಯವರೆಗೆ ಮಚ್ಚು, ಲಾಂಗ್ ಹಿಡಿದು ಬಡಿದಾಡುತ್ತಿದ್ದ ರೌಡಿಗಳು ಪಿಸ್ತೂಲ್ ಜಳಪಿಸಲು ಶುರು ಮಾಡಿದ್ದೇ ಈತನಿಂದಾಗಿ.
ಶೇಖರ್ ಅಪ್ಪ ಪಿ.ನಾಗರಾಜ್ ಅಲಿಯಾಸ್ ಆಚಾರಪ್ಪ ಎಂಬುವರು ಸಿಟಿ ರೈಲ್ವೆ ಸ್ಟೇಷನ್ ಬಳಿ ‘ಸೀಗಲ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ನಡೆಸುತ್ತಿದ್ದ. ಅದು ಟ್ರಾವೆಲ್ಸ್ ಮಾಫಿಯಾದ ಪರ್ವ ಕಾಲ. ಅಂಡರ್‌ವರ್ಲ್ಡ್ ಡಾನ್‌ಗಳ ಕೃಪಾಕಟಾಕ್ಷವಿಲ್ಲದೆ ಮೆಜೆಸ್ಟಿಕ್ ಸುತ್ತಮುತ್ತ ಟ್ರಾವೆಲ್ಸ್ ವ್ಯವಹಾರ ನಡೆಸುವಂತೆಯೇ ಇರಲಿಲ್ಲ. ಇದೇ ವ್ಯವಹಾರಕ್ಕೆ ಸಂಬಂಧಿಸಿ ಶ್ರೀರಾಂಪುರದ ಕುಖ್ಯಾತ ರೌಡಿ ರಾಜೇಂದ್ರ ಎಂಬಾತನನ್ನು ಶೇಖರ್ ಹಾಡಹಗಲೇ, ನೂರಾರು ಜನರ ಸಮ್ಮುಖದಲ್ಲಿ ಕೊಚ್ಚಿ ಕೊಂದಿದ್ದ. ಇಷ್ಟೇ ಅಲ್ಲ, ರೈಲು ನಿಲ್ದಾಣದ ಮುಂಭಾಗದಲ್ಲಿದ್ದ ಕಾರಂಜಿಯ ನೀರಿನಲ್ಲಿ ರಕ್ತಸಿಕ್ತ ಮಚ್ಚನ್ನು ಶುಚಿಗೊಳಿಸಿ ಆಟೊ ಹಿಡಿದು ಮನೆಗೆ ಹೋಗಿದ್ದ! ಅಲ್ಲೇ ಒಂದು ಟ್ರಾಫಕ್ ಪೊಲೀಸ್ ಚೌಕಿ ಇತ್ತು. ಪೊಲೀಸರೆಲ್ಲ ಈ ದೃಶ್ಯವನ್ನು ನಿಸ್ಸಹಾಯಕರಾಗಿ ನಿಂತು ನೋಡಿದ್ದರು. ಈ ಘಟನೆ ಆಗ ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣದ ಬಳಿಕ ಶೇಖರ್, ಸ್ಟೇಷನ್ ಶೇಖರ್ ಎಂಬ ‘ಬಿರುದಾವಳಿ’ಯೊಂದಿಗೆ ಕೆನೆದಾಡತೊಡಗಿದೆ.

(ಭಾಗ ಮುಂದುವರೆಯುವುದು)

Tags: BangaloreBangalore PolicePolice EncounterTiger BB Ashok Kumar
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಉತ್ತರ ಕೊರಿಯಾ ಎಂಬ ನರಕ-5: ಇಲ್ಲಿ ಇಂಟರ್‌ನೆಟ್ ಬಗ್ಗೆ ಕೇಳಲೇಬೇಡಿ

Next Post

ಉತ್ತರ ಕೊರಿಯಾ ಎಂಬ ನರಕ-6: ಉಡುಗೆ-ತೊಡುಗೆ ಫ್ಯಾಷನ್

kalpa News

kalpa News

Next Post

ಉತ್ತರ ಕೊರಿಯಾ ಎಂಬ ನರಕ-6: ಉಡುಗೆ-ತೊಡುಗೆ ಫ್ಯಾಷನ್

Leave a Reply Cancel reply

Your email address will not be published. Required fields are marked *

No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL