No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
  • Advertise With Us
  • Grievances
  • About Us
  • Contact Us
Tuesday, July 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ದಕ್ಷ

ಬುಲೆಟ್ ಸವಾರಿ-5: ಅಟ್ಟಿಸಿಕೊಂಡು ಬಂದಿದ್ದ ರಾಜೀವ್ ಗಾಂಧಿ!-1

kalpa News by kalpa News
January 18, 2018
in ದಕ್ಷ
0
Share on FacebookShare on TwitterShare on WhatsApp

1989
ಮಿತಿ ಮೀರಿದ ವೇಗದಿಂದಾಗಿ ನನ್ನ ಬುಲೆಟ್ ಮೋಟಾರ್ ಬೈಕ್ ನಡುಗಲು ಶುರುವಾಯಿತು. ಸ್ಪೀಡೋಮೀಟರ್ ಮೇಲೆ ನನ್ನ ಕಣ್ಣು ಹಾಯಿಸಿದೆ. 120 ಕಿ.ಮೀ. ತೋರಿಸುತ್ತಿತ್ತು. ಹಿಂದುಗಡೆಯಿಂದ ಆ ಹಳದಿ ಬಣ್ಣದ ಜೀಪು ಮತ್ತಷ್ಟು ವೇಗದಿಂದ ತೀರ ಸಮೀಪವೇ ಬಂದು ಬಿಟ್ಟಿತು. ಇನ್ನೇನು ಗುದ್ದಿಯೇ ಬಿಡುತ್ತದೆ ಎನ್ನುವಷ್ಟು ಹತ್ತಿರ ಜೀಪಿನ ಚಕ್ರ ಕಾಣಿಸಿತು. ಅನಿವಾರ್ಯವಾಗಿ ಬ್ರೇಕ್ ಒತ್ತಲಾರಂಭಿಸಿದೆ. ಫುಟ್‌ಪಾತ್ ಅಂಚಿಗೆ ನನ್ನನ್ನು ಕಾರ್ನರ್ ಮಾಡಿ. ಜೀಪು ಅಡ್ಡವಾಗಿ ನಿಂತಿತು.
ಡ್ರೈವಿಂಗ್ ಸೀಟಿನಲ್ಲಿ ಕೂತಿದ್ದವರು ನನ್ನ ಕಡೆ ಬೆರಳು ತೋರಿಸುತ್ತ ದೊಡ್ಡ ದನಿಯಲ್ಲಿ ಅಬ್ಬರಿಸಿದರು.

ಹೂ ಆರ್ ಯು?

ಹಿಡಿದು ಎರಡು ಬಾರಿಸಿಯೇ ಬಿಡುತ್ತೇನೆ ಎನ್ನುವಂಥ ಸಿಟ್ಟು ಅವರ ಮುಖಭಾವದಲ್ಲಿ ಎದ್ದು ಕಾಣುತ್ತಿತ್ತು.
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸರ್… ಎಂದೆ ನಾನು. ಶಿಸ್ತಾಗಿ ಸೆಲ್ಯೂಟ್ ಹೊಡೆದು, ಬಿಳಿ ಪ್ಯಾಂಟ್, ಶರ್ಟು, ಗ್ಲೌಸ್, ಕ್ಯಾನ್ವಾಸ್ ಶೂ, ಬಿಳಿ ಬಣ್ಣದ ಬೈಕ್, ಹೆಲ್ಮಟ್ ಕಂಡು ಅವರಿಗೆ ಎನನ್ನಿಸಿತೋ ಏನೋ.
ವಾಟ್ ಇಸ್ ಯುವರ್ ನೇಮ್, ವಾಟ್ ಆರ್ ಯೂ ಡೂಯಿಂಗ್ ಹಿಯರ್? ಎಂದು ಮತ್ತೆ ಗದರಿ ಕೇಳಿದರು.
ಐಯೆಮ್ ಅಶೋಕ್ ಕುಮಾರ್, ಐಯೆಮ್ ಪೈಲಟಿಂಗ್ ಯುವರ್ ವೆಹಿಕಲ್ ಸರ್ ಎಂದೆ.
ಹೂ ಟೋಲ್‌ಡ್ ಯೂ ಡು ದಟ್ ಎಂದು ಅವರು ಸಿಟ್ಟಿನಿಂದ ಪ್ರಶ್ನಿಸಿದರು.
ಮೈ ಪೊಲೀಸ್ ಕಮಿಷನರ್ ಸರ್ ಎಂದೆ.
ಯೂ ಸ್ಟೇ ಬ್ಯಾಕ್, ಐ ಡೋಂಟ್ ವಾಂಟ್ ಎನಿ ಪೈಲಟ್ ಎಂದು ಅವರು ಕೈಯಾಡಿಸಿದರು.

ಹೀಗೆ, ಜೀಪೊಂದನ್ನು ಚಲಾಯಿಸುತ್ತ, ನನ್ನನ್ನು ಅಟ್ಟಾಡಿಸಿಕೊಂಡು ಬಂದು ಅಬ್ಬರಿಸಿದವರು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ! ಅವರ ಜತೆ ಕೂತಿದ್ದ ಅಂದಿನ ಕೇಂದ್ರ ಸಚಿವ ಬೂಟಾ ಸಿಂಗ್, ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಮತ್ತು ಆಗ ಸಂಸದರಾಗಿದ್ದ ಎಫ್.ಎಂ.ಖಾನ್ ಅವರು ಈ ಸನ್ನಿವೇಶ ಕಂಡು ನಿಬ್ಬೆರಗಾಗಿ ಬಿಟ್ಟಿದ್ದರು. ಆ ಜೀಪಿನ ಹಿಂದೆ ಎದ್ದುಬಿದ್ದು ಎಂಬಂತೆ ದೌಡಾಯಿಸಿ ಬಂದಿದ್ದ ಅಂದಿನ ಬೆಂಗಳೂರು ಪೊಲೀಸ್ ಆಯುಕ್ತ ಎ.ಆರ್. ನಿಜಾಮುದ್ದೀನ್, ಡಿಸಿಪಿ ನಾಗರಾಜ್ ಮತ್ತು ಗುಪ್ತಚರ ದಳ ಡಿಸಿಪಿ ಸೋಮಶೇಖರ್ ಅವರು ಪಿಳಿಪಿಳಿ ಕಣ್ಣ ಬಿಡುತ್ತ ಆತಂಕಿತರಾಗಿ ನಿಂತಿದ್ದರು!

1980ರಿಂದ 83ರ ಅವಧಿಯಲ್ಲಿ ನಾನು ಬೆಂಗಳೂರಿನ ಚಾಮರಾಜಪೇಟೆ ಉಪ ವಿಭಾಗದಲ್ಲಿ ಟ್ರಾಫಿಕ್ ಎಸ್‌ಐ ಆಗಿದ್ದೆ. ಅದು, ರಾಜ್ಯದೆಲ್ಲೆಡೆ ರೈತ ಸಂಘ ಪ್ರಬಲವಾಗುತ್ತಿದ್ದ ಕಾಲ. ರೈತ ಬಂಡಾಯದ ಬಿಡಿಯಲ್ಲಿ ಸಿಲುಕಿ ಆಗಿನ ಕಾಂಗ್ರೆಸ್ ಸರಕಾರ ಮೊದಲ ಬಾರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿತ್ತು. ಚುನಾವಣೆ ಸಮೀಪಿಸುತ್ತಿತ್ತು. ಆಗಷ್ಟೇ ರಾಜೀವ್ ಗಾಂಧಿ ಅವರು ಪೈಲಟ್ ವೃತ್ತಿ ತೊರೆದು ರಾಜಕಾರಣದತ್ತ ವಾಲಿದ್ದರು. ಅದೊಂದು ದಿನ ಕಮಿಷನರ್ ನಿಜಾಮುದ್ದೀನ್ ಅವರು ಪೊಲೀಸ್ ಅದಿಕಾರಿಗಳ ಸಭೆ ಕರೆದು, ಬೆಂಗಳೂರಿಗೆ ರಾಜೀವ್ ಬರುವ ವಿಷಯ ಪ್ರಸ್ತಾಪಿಸಿದರು. ರಾಜೀವ್ ಆಗ ಯಾವುದೇ ಹುದ್ದೆಯಲ್ಲಿ ಇರದೆ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಹಾಗಾಗಿ ಅವರಿಗ ಶಿಷ್ಟಾಚಾರದ ಪ್ರಕಾರ ಭದ್ರತೆ ಕಲ್ಪಿಸಿ, ಅವರಿಗಾಗಿ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಟು ಮಾಡಲು ಅವಕಾಶ ಇರಲಿಲ್ಲ. ಹಾಗೇನಾದರೂ ಮಾಡಿದರೆ ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಗದ್ದಲ ಎಬ್ಬಿಸುವುದು ಖಚಿತವಾಗಿತ್ತು. ಹಾಗಾಗಿ ಕಮಿಷನರ್ ಒಂದು ಉಪಾಯ ಮಾಡಿದರು. ಬಿಳಿ ಬಣ್ಣದ ಬುಲೆಟ್ ಮೇಲೆ ಒಬ್ಬ ಎಸ್‌ಐ ವೈಟ್ ಡ್ರೆಸ್‌ನಲ್ಲಿ ರಾಜೀವ್ ಸಂಚರಿಸುವ ಹಾದಿಯುದ್ದಕ್ಕೂ ಅವರ ವಾಹನಕ್ಕಿಂತ 10-15 ಮೀಟರ್ ಮುಂದೆ ಸಾಗಬೇಕು. ಆ ಬೈಕ್ ನೋಡಿಯೇ ಎಲ್ಲ ಸರ್ಕಲ್‌ಗಳಲ್ಲಿ ಪೊಲೀಸ್ ಅಧಿಕಾರಿಗಳು ಹಾದಿ ಸುಗಮಗೊಳಿಸಬೇಕು ಎನ್ನುವುದು ಅವರ ಪ್ಲ್ಯಾನ್. ಆ ಕಾರ್ಯಕ್ಕೆ ನಾನು ಆಯ್ಕೆಯಾದೆ.

ಅಂದು ನಾನು ಬೆಳಗ್ಗೆ 7 ಗಂಟೆಗೇ ವಿಮಾನ ನಿಲ್ದಾಣ ತಲುಪಿದೆ. ನನ್ನ ಜತೆ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಮಪ್ತಿಯಲ್ಲಿದ್ದರು.
ವಿಮಾನದಿಂದಿಳಿದ ರಾಜೀವ್‌ರನ್ನು ಅಂದಿನ ಸಿಎಂ ಗುಂಡೂರಾವ್ ಮತ್ತು ಇತರ ಹಿರಿಯ ಸಚಿವರು ಭಯಭಕ್ತಿಯಿಂದ ಸ್ವಾಗತಿಸಿದರು. ಮಿರಮಿರನೆ ಮಿಂಚುವ ಉಡುಪಿನೊಂದಿಗೆ ಕೆಂಪಗೆ ಹೊಳೆಯುತ್ತಿದ್ದ ರಾಜೀವ್‌ರನ್ನು ನಾನು ಕಂಡು. ಅಬ್ಬಾ ಎಂಥ ಸುರಸುದಂರಾಂಗ ಎಂದುಕೊಂಡೆ. ಆಗ ಅವರಿಗೆ 38 ವರ್ಷ. ರಾಜೀವ್ ಇದ್ದ ಕಾರಿನ ಮುಂಭಾಗದಲ್ಲಿ ನಾನು ಪೈಲಟ್ ಮಾಡಿಕೊಂಡು ಮುನ್ನಡೆದೆ.

ಹೋಟೆಲ್ ಅಶೋಕದಿಂದ 10 ಗಂಟೆ ಸುಮಾರಿಗೆ ಕಾಂಗ್ರೆಸ್ ಮುಖಂಡರೊಂದಿಗೆ ಅವರು ಜೆ.ಸಿ. ರಸ್ತೆ ಕಡೆ ಹೊರಟರು. ಯಥಾಪ್ರಕಾರ ನಾನು ಪೈಲಟ್ ಮಾಡಿದೆ. ಜೆ.ಸಿ.ರಸ್ತೆಯ ಮಿನರ್ವ ಸರ್ಕಲ್ ಬಳಿಯ ಮೈದಾನದಲ್ಲಿ ಸಭೆ ಏರ್ಪಾಟಾಗಿತ್ತು. ಅಲ್ಲಿ ರಾಜೀವ್ ಭಾಷಣ ಮಾಡಬೇಕಿತ್ತು. ವೇದಿಕೆಯ ಮುಂದೆ ಕೇವಲ 20-30 ಮಂದಿಯಷ್ಟೇ ಇದ್ದದನ್ನು ಕಂಡು ಮುನಿಸಿಕೊಂಡ ಅವರು ಅಲ್ಲಿ ಭಾಷಣ ಮಾಡಲು ನಿರಾಕರಿಸಿದರು. ಕೆಂಗೇರಿಯಲ್ಲಿ ಮತ್ತೊಂದು ಕಾರ್ಯಕ್ರಮ ಏರ್ಪಡಿಸಿದ್ದೇವೆ. ಅಲ್ಲಿ ಸಾವಿರಾರು ಜನ ಸೇರಲಿದ್ದಾರೆ ಎಂದು ಅವರ ಮನವೊಲಿಸಿ ಕಾಂಗ್ರೆಸ್ ಮುಖಂಡರು ಕರೆದುಕೊಂಡು ಹೋದರು. ಅಲ್ಲೂ ಜನ ಬಾರದೆ, ಒಂದಿಷ್ಟು ಶಾಲಾ ಮಕ್ಕಳನ್ನು ಕರೆಸಿ ಬಿಸಿಲಿನಲ್ಲಿ ಕೂರಿಸಲಾಗಿತ್ತು. ಇದನ್ನು ಕಂಡು ಕಿಡಿಕಿಡಿಯಾದ ರಾಜೀವ್, ‘ಲೆಕ್ಕ ಹಾಕಿದರೆ ನಾಲ್ಕು ತಲೆ ಕಾಣಿಸುತ್ತಿಲ್ಲ. ಇಂಥ ಜಾಗದಲ್ಲಿ ಭಾಷಣ ಬೇರೆ ಕೇಡು’ ಎಂದು ಪುಢಾರಿಗಳಿಗೆ ಬೆವರಿಳಿಸಿ ರೇಸ್ ಕೋರ್ಸ್‌ಗೆ ಬಂದರು. ಅಲ್ಲಿ ಅವರಿಗಾಗಿ ಹೆಲಿಕ್ಯಾಪ್ಟರ್ ಕಾಯುತ್ತಿತ್ತು. ಕೆಲ ಕಾಂಗ್ರೆಸ್ ಮುಖಂಡರೊಂದಿಗೆ ತುಮಕೂರಿಗೆ ಹೊರಟರು.

ಮಧ್ಯಾಹ್ನ 3 ಗಂಟೆಗೆ ವಾಪಸಾಗಿ ಹೋಟೆಲ್ ಅಶೋಕಾಗೆ ತೆರಳಿದರು. ಸಂಜೆ 5 ಗಂಟೆಯ ಏರ್ ಇಂಡಿಯಾ ವಿಮಾನದಲ್ಲಿ ದಿಲ್ಲಿಗೆ ತೆರಳಲು 4.15ಕ್ಕೆ ಅವರು ಹೋಟೆಲ್‌ನಿಂದ ನಿರ್ಗಮಿಸಲಿದ್ದಾರೆ ಎಂಬ ಮಾಹಿತಿ ನಮಗೆ ನೀಡಲಾಯಿತು.

(ಮುಂದುವರೆಯುವುದು)

Tags: Bangalore PoliceRajiv GandhiTiger BB Ashok Kumar
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಉತ್ತರ ಕೊರಿಯಾ ಎಂಬ ನರಕ-11: ಆತನನ್ನು ಹಸಿದ ನಾಯಿಗಳ ಬಾಯಿಗೆ ತಳ್ಳಲಾಯಿತು

Next Post

ಬುಲೆಟ್ ಸವಾರಿ-5: ಅಟ್ಟಿಸಿಕೊಂಡು ಬಂದಿದ್ದ ರಾಜೀವ್ ಗಾಂಧಿ-2

kalpa News

kalpa News

Next Post

ಬುಲೆಟ್ ಸವಾರಿ-5: ಅಟ್ಟಿಸಿಕೊಂಡು ಬಂದಿದ್ದ ರಾಜೀವ್ ಗಾಂಧಿ-2

Leave a Reply Cancel reply

Your email address will not be published. Required fields are marked *

No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL