ಕಲ್ಪ ಮೀಡಿಯಾ ಹೌಸ್
ಬೈಂದೂರು: ಕಳೆದ ಆರೇಳು ದಶಕಗಳಿಂದ ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಬಿಯರ್ ಜಡ್ಡು ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಆರು ಕುಟುಂಬಗಳು ವಾಸವಾಗಿದ್ದಾರೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗ ಎಂಬ ಕಾರಣಕ್ಕೆ ಅವರಿಗೆ ಯಾವುದೇ ಹಕ್ಕು ಪತ್ರ ಇರಲಿಲ್ಲ. ಆ ಸ್ಥಳಕ್ಕೆ ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರು, ಸಹಾಯಕ ಕಮಿಷನರ್ ರಾಜು, ತಹಶೀಲ್ದಾರ್ ಕಿರಣ್ ಗೋರಯ್ಯ, ಕಂದಾಯ ನಿರೀಕ್ಷಕ ರಾಘವೇಂದ್ರ, ಗ್ರಾಮ ಲೆಕ್ಕಾಧಿಕಾರಿ ಪರಸಪ್ಪ ಹಾಗೂ ಸ್ಥಳಿಯ ಮುಖಂಡರೊಂದಿಗೆ ಭೇಟಿ ನೀಡಿದರು.
ಅವರಿಗೆ ಹಕ್ಕುಪತ್ರ ಕಲ್ಪಿಸುವ ಕುರಿತು ಚರ್ಚಿಸಿದರು. ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಮಾತುಕತೆ ಮಾಡುವುದಾಗಿ ತಿಳಿಸಿದರು. ಒಂದು ವೇಳೆ ಕಾನೂನು ತೊಡುಕು ಉಂಟಾದರೆ, ಬೇರೆ ಜಾಗವನ್ನು ನೀಡುವ ಸಂಪೂರ್ಣ ಭರವಸೆಯನ್ನು ಶಾಸಕರು ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಭಾರತೀ ಶೇಟ್, ಪಂಚಾಯತ್ ಸದಸ್ಯರುಗಳಾದ ಅಶೋಕ್ ನಾಯ್ಕ್, ನವೀನ್ ಶೆಟ್ಟಿ, ಗೋಪಾಲಕೃಷ್ಣ ಕಿಣಿ, ನಂದಿನಿ, ಅರುಣ್ ಶೆಟ್ಟಿ ಅಂಪಾರು ಮತ್ತಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post