ಕಲ್ಪ ಮೀಡಿಯಾ ಹೌಸ್ | ಬೈಂದೂರು |
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಮಹತ್ವದ ಹೆಜ್ಜೆಯಿಟ್ಟಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಬೈಂದೂರು ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ ನಡೆಸಿ ಹಲವು ವಿಷಯಗಳ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಆರ್‌ರಒ. ಬ್ರಹ್ಮಣರ್ಕ, ಹೆದ್ದಾರಿ ವಿಭಾಗದ ಸಿ.ಇ. ಜಗದೀಶ್, ಇಇ ದಿವಾಕರ್ ಇದ್ದರು.
Also read: ಮಲೆನಾಡು ಕರಾವಳಿ ರೈಲ್ವೆ ಸಂಪರ್ಕಕ್ಕೆ ಯೋಜನೆ | ಮಾರ್ಗ ಹೇಗೆ? ಸಂಸದರು ಹೇಳಿದ್ದೇನು?
ಇಲ್ಲಿವೆ 8 ಪ್ರಮುಖಾಂಶಗಳು:
- ಮಲೆನಾಡು ಹಾಗೂ ಕರಾವಳಿ ಸಂಪರ್ಕಿಸುವ ಆಗುಂಬೆ ಟನೆಲ್ ಪ್ರಸ್ತಾವನೆ
- ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣ
- ಎನ್’ಎಚ್ 66ರಲ್ಲಿ ಬೈಂದೂರು ವಿಧಾಸಭಾ ಕ್ಷೇತ್ರದ ಹೆಮ್ಮಾಡಿ, ತಲ್ಲೂರು, ಮುಳ್ಳಿಕಟ್ಟೆ, ತ್ರಾಸಿ, ಯಡ್ತರೆ ಜಂಕ್ಷನ್ , ಹಾಗೂ ಬೈಂದೂರು ತಾಲೂಕು ಕಚೇರಿ ಬಳಿ ಅಂಡರ್ ಪಾಸ್ ನಿರ್ಮಾಣ
- ಎನ್’ಎಚ್ 66ರಲ್ಲಿ ಅರಾಟೆ, ಮುಳ್ಳಿಕಟ್ಟೆ, ಯಡ್ತರೆ ಜಂಕ್ಷನ್ ಹಾಗೂ ಶಿರೂರು ನೀರ್ಗದ್ದೆ ಬಳಿ ಸರ್ವಿಸ್ ರಸ್ತೆ
- ಎನ್’ಎಚ್ 66ರಲ್ಲಿ ತ್ರಾಸಿ ಜಂಕ್ಷನ್ ಇಂದ ಮರವಂತೆ ಬೀಚ್ ವರೆಗೆ ಬೀದಿ ದೀಪ
- ಎನ್’ಎಚ್ 66ರಲ್ಲಿ ಮರವಂತೆ ಬಳಿ ರಸ್ತೆ ಸುರಕ್ಷತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ
- ಬೈಂದೂರು-ರಾಣೆಬೆನ್ನೂರು ಎನ್’ಎಚ್ -766(ಸಿ ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆ
- ಎನ್’ಎಚ್ 766(ಸಿ) ರಲ್ಲಿ ಕೊಲ್ಲೂರು ಬೈಪಾಸ್ ನಿರ್ಮಾಣ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post