ಕಲ್ಪ ಮೀಡಿಯಾ ಹೌಸ್ | ಬೈಂದೂರು |
ಶ್ರೀ ಕ್ಷೇತ್ರ ಕೊಲ್ಲೂರಿನಲ್ಲಿ ಲೋಕಕಲ್ಯಾಣಾರ್ಥವಾಗಿ ನಾಲ್ಕು ದಿನಗಳ ಕಾಲ ಶತ ಚಂಡಿಕಾಯಾಗ ನಡೆಸಲಾಗುತ್ತಿದ್ದು, ಶಾಸಕ ಸುಕುಮಾರ ಶೆಟ್ಟಿ MLA Sukumar Shetty ಭಾಗವಹಿಸಿ ಪೂರ್ಣಾಹುತಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶತ ಚಂಡಿಕಾ ಯಾಗ ಕ್ಷೇತ್ರದಲ್ಲಿ ನಡೆಯುವ ದೊಡ್ಡ ಸೇವೆಯಾಗಿದೆ. ನಾಡಿಗೆ ಹಾಗೂ ರಾಷ್ಟ್ರಕ್ಕೆ ಸುಭೀಕ್ಷವಾಗಲಿ ಎನ್ನುವ ನಿಟ್ಟಿನಲ್ಲಿ ಸಂಕಲ್ಪದೊಂದಿಗೆ ನಡೆಸಲಾಗಿದೆ. ಈ ಹಿಂದೆಯೂ ಹೇಳಿದಂತೆ ಯಾವುದೇ ಅಧಿಕಾರಕ್ಕಿಂತಲೂ ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ಮಾಡುವ ಸೇವೆ ಪರಮಾಧಿಕಾರ ಎನ್ನುವ ಸಂತೃಪ್ತಿ ಇದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post