ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಹೈಕಮಾಂಡ್’ಗೆ 1800 ಕೋಟಿ ರೂ.ಕಪ್ಪ ನೀಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು, ಆರೋಪಕ್ಕೆ ಪೂರಕವಾಗಿ ಡೈರಿಯೊಂದನ್ನು ಬಿಡುಗಡೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿಂದು ಆರೋಪ ಮಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸರ್ಜಿವಾಲಾ, ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್’ಗೆ ಲಂಚ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆ. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರಿಗೆ 1800 ಕೋಟಿ ರೂ. ಕಪ್ಪ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
Our website is up and running again.
Subscribe now to read @nileenams and @aathira_vk's report on the Yeddy Diaries: Pages with IT dept note that #Yeddyurappa paid Rs 1,800 crore to BJP and its leaders, and judges and advocates. https://t.co/BVlNGt8bRq pic.twitter.com/P4IRlL7P57
— The Caravan (@thecaravanindia) March 22, 2019
ಕಾರವಾನ್ ಮ್ಯಾಗಜಿನ್ ವರದಿಯನ್ನು ಆಧಾರಿಸಿ ಆರೋಪ ಮಾಡಿರುವ ಅವರು, ಈ ಡೈರಿಯ ಪ್ರತಿ ಪುಟದಲ್ಲಿ ಯಡಿಯೂರಪ್ಪ ಅವರ ಹಸ್ತ ಬರಹದ ಜೊತೆ ಸಹಿ ಇದೆ. ಅಷ್ಟೇ ಅಲ್ಲದೇ ಈ ಪ್ರಕರಣ ವಿಚಾರಣೆಗೆ ಯೋಗ್ಯವಾಗಿದ್ದು, ಹೊಸದಾಗಿ ನೇಮಕಗೊಂಡಿರುವ ಲೋಕಪಾಲರು ಈ ಡೈರಿಯ ಬಗ್ಗೆ ತನಿಖೆ ನಡೆಸಲು ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ 1 ಸಾವಿರ ಕೋಟಿ, ಅರುಣ್ ಜೇಟ್ಲಿ ಮತ್ತು ಗಡ್ಕರಿ ಅವರಿಗೆ 150 ಕೋಟಿ, ರಾಜನಾಥ್ ಸಿಂಗ್ ಅವರಿಗೆ 100 ಕೋಟಿ, ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ 50 ಕೋಟಿ ರೂ. ನೀಡಿದ್ದಾರೆ ಎಂದವರು ಆರೋಪಿಸಿದ್ದಾರೆ.
Discussion about this post