ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆರು ತಿಂಗಳ ಸಾಧನೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಾಪಿ ಪೇಸ್ಟ್ ಸಾಧನೆ ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು… ರಾಜ್ಯ ಸರ್ಕಾರದ ವತಿಯಿಂದ ಸರ್ಕಾರದ ಸಾಧನೆಯ ಪ್ರಚಾರದ ಭಾಗವಾಗಿ ಸರ್ಕಾರಿ ಬಸ್’ಗಳ ಮೇಲೆ ಪೋಸ್ಟರ್’ಗಳನ್ನು ಹಾಕಲಾಗಿದೆ. ಈ ರೀತಿ ಹಾಕಿರುವ ಪೋಸ್ಟರ್’ವೊಂದು ಈಗ ವೈರಲ್ ಆಗಿರುವುದು.
ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ನೀಡಿದ ಮಹತ್ವದ ಯೋಜನೆಗಳಲ್ಲಿ ಆಯುಷ್ಮಾನ್ ಭಾರತ್ ಅತ್ಯಂತ ಪ್ರಮುಖವಾದುದಾಗಿದ್ದು, 2018ರ ಸೆ.23ರಂದು ಪ್ರಧಾನಿಯವರು ಈ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಪ್ರಕಾರ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಆರೋಗ್ಯ ವಿಮೆ ದೊರೆಯಲಿದೆ. ಈ ಯೋಜನೆಯ ಲಾಭಗಳು ದೇಶದಾದ್ಯಂತ ಪೋರ್ಟಬಲ್ ಆಗಿರುತ್ತವೆ ಮತ್ತು ಈ ಯೋಜನೆಗೆ ಒಳಪಡುವ ಫಲಾನುಭವಿಗೆ ದೇಶದಾದ್ಯಂತ ಯಾವುದೇ ಸಾರ್ವಜನಿಕ / ಖಾಸಗಿ ಎಂಪನೇಲ್ ಆಸ್ಪತ್ರೆಗಳಿಂದ ಹಣವಿಲ್ಲದ ಪ್ರಯೋಜನಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಫಲಾನುಭವಿಗಳು ಸಾರ್ವಜನಿಕ ಮತ್ತು ಎಂಪನೇಲ್ ಖಾಸಗಿ ಸೌಲಭ್ಯಗಳಲ್ಲಿ ಪ್ರಯೋಜನ ಪಡೆಯಲೂ ಸಹ ಅವಕಾಶವನ್ನು ಕಲ್ಪಿಸಲಾಗಿದೆ.
ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆಯ ಅಡಿಯಲ್ಲಿ ಈಗಾಗಲೇ 16,227 ಆಸ್ಪತ್ರೆಗಳಲ್ಲಿ ಸುಮಾರು 7,24,901 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೇ, 4,51,1770 ಇ-ಕಾರ್ಡ್’ಗಳನ್ನು ವಿತರಣೆ ಮಾಡಲಾಗಿದೆ.
ಆದರೆ, ರಾಜ್ಯ ಸರ್ಕಾರದ ವತಿಯಿಂದ ಬಿಡುಗಡೆ ಮಾಡಿರುವ ಜಾಹೀರಾತು ಪೋಸ್ಟರ್’ಗಳಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಲಾಭವನ್ನು ಕುಮಾರಸ್ವಾಮಿ ಸರ್ಕಾರ ತೆಗೆದುಕೊಳ್ಳಲು ಯತ್ನಿಸಿದೆ ಎನ್ನುವುದು ತಿಳಿಯುತ್ತದೆ.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ
ಬಡವರಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ
ತಿಂಗಳು ಆರು, ಸಾಧನೆಗಳು ನೂರಾರು
ಎಂದು ಪ್ರಕಟಿಸಲಾಗಿದ್ದು, ಕೇಂದ್ರ ಸರ್ಕಾರದ ಯೋಜನೆ ಯಶಸ್ಸಿನ ಲಾಭವನ್ನು ರಾಜ್ಯ ಸರ್ಕಾರ ಕದಿಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಲಾಗುತ್ತಿದೆ. ಪ್ರಮುಖವಾಗಿ, ಕುಮಾರಣ್ಣನ ಕಾಪಿ ಪೇಸ್ಟ್ ಸಾಧನೆ ಎಂದು ಕಿಚಾಯಿಸಿಲಾಗಿದೆ.
ಅಲ್ಲದೇ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗಿದ್ದು, ಸಾವಿರಾರು ಮಂದಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
Discussion about this post