2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದಾಗಿನಿಂದ ಇಂದಿನವರೆಗೂ ಅವರ ವಿರುದ್ಧ ಸೀಳುನಾಯಿಗಳಂತೆ ಮುಗಿಬೀಳುತ್ತಾ, ಸೋಲನ್ನು ಅನುಭವಿಸುತ್ತಾ, ಕಂಡ ಕಂಡಲ್ಲಿ ಮೋದಿ ವಿರುದ್ಧ ಬಾಯಿಗೆ ಬಂದಂತೆ ಹರಟುವ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಡಪಕ್ಷಗಳ ನಾಯಕರು ಈಗೆಲ್ಲಿ ಸತ್ತಿದ್ದಾರೆ?
ಒಂದೆಡೆ ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇವುಗಳ ಮೇಲಿನ ದರ ಇಳಿಕೆಗೆ ಕ್ರಮ ಕೈಗೊಂಡಿದೆ. ಆದರೆ, ಇಲ್ಲಿ, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮಾತ್ರ ತೈಲ ಬೆಲೆ ಏರಿಕೆ ಮಾಡುವ ಮೂಲಕ ಕರುನಾಡಿಗರಿಗೆ ಹೊಸ ವರ್ಷದ ಉಡುಗೊರೆ(?) ನೀಡಿದೆ.
ನಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಜೆಡಿಎಸ್, ನಾವೂ ಜನಪರ ಎಂದು ಬೀಗುವ ಕಾಂಗ್ರೆಸ್ ಎರಡೂ ಸೇರಿಕೊಂಡು ಕರುನಾಡಿಗರಿಗೆ ಬರೆ ಎಳೆದಿದ್ದು, ಇದಾವ ರೀತಿಯ ಆಡಳಿತ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.
ಇಷ್ಟಕ್ಕೂ ಮೀರಿ, ದರ ಏರಿಕೆಯನ್ನು ಭಂಡತನದಿಂದ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ತೆರಿಗೆ ಏರಿಕೆ ಮಾಡಿದ್ದರೂ ಬೇರೆ ರಾಜ್ಯಗಳಿಗಿಂತಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆಯಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ನಾಚಿಕೆಯಾಗಬೇಕು ನಿಮಗೆ! ತಾವು ಜನಪ್ರಿಯ, ಜನಪರ, ಬಡವರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಆಡುವ ಮಾತೇ ಇದು.
ಆಯಿತು ನೀವು ಹೇಳುವಂತೆ ಇತರೆ ರಾಜ್ಯಗಳಿಗಿಂತಲೂ ನಮ್ಮಲ್ಲಿ ಕೊಂಚ ಕಡಿಮೆಯಿದೆ ಎಂದುಕೊಳ್ಳೋಣ. ಆದರೆ, ದರ ಏರಿಕೆಗೆ ಮಾತ್ರ ಇತರ ರಾಜ್ಯಗಳಿಗೆ ಹೋಲಿಕೆ ಮಾಡುವ ನೀವು ದರ ಕಡಿಮೆ ಇರುವ ರಾಜ್ಯಗಳಿಗೆ ಏಕೆ ಹೋಲಿಕೆ ಮಾಡಿಕೊಳ್ಳುವುದಿಲ್ಲ?
ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಎರಡನೆಯ ದಿಟಿವೂ ಕಡಿತಗೊಂಡಿದ್ದು, ದರ ಪರಿಷ್ಕರಣೆ ನಂತರ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ 15-16 ಪೈಸೆ ಕಡಿಮೆಯಾಗಿದ್ದರೆ, ಡೀಸೆಲ್ 18-20 ಪೈಸೆ ಅಗ್ಗವಾಗಿದೆ.
ಆದರೆ, ಬೆಂಗಳೂರಿನಲ್ಲಿ ಇಂಧನ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದರೂ ಕೂಡ ರಾಜ್ಯ ಸರ್ಕಾರವು ತೆರಿಗೆ ಏರಿಸಿರುವುದರ ಪರಿಣಾಮವಾಗಿ ಲೀಟರ್ ಪೆಟ್ರೋಲ್‌ಗೆ 1.52 ರೂ. ಏರಿಕೆಯಾಗಿ 70.53 ರೂ.ಗಳಷ್ಟಿದೆ. ಇನ್ನು ಡೀಸೆಲ್ ಬೆಲೆಯಲ್ಲೂ 1.50 ರೂ. ಏರಿಕೆಯಾಗಿ 64.30 ರೂ.ಗೆ ಮಾರಾಟವಾಗುತ್ತಿದೆ.
ಇನ್ನು ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್‌ಗೆ 15 ಪೈಸೆ ಕಡಿಮೆಯಾಗುವ ಮೂಲಕ 68.29 ರೂ.ಗಳಷ್ಟಿದ್ದರೆ, ಡೀಸೆಲ್ 18 ಪೈಸೆ ಇಳಿಕೆಯಾಗಿ 62.86 ರೂ.ಗಳಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್ 73.59 ರೂ.ಗೆ ಮಾರಾಟವಾಗುತ್ತಿದ್ದು, 15 ಪೈಸೆ ಕಡಿಮೆಯಾಗಿದೆ. ಇನ್ನು ಡೀಸೆಲ್ ಲೀ.ಗೆ 20 ಪೈಸೆ ಕಡಿಮೆಯಾಗಿ 65.14 ರೂ.ಗಳಷ್ಟಿದೆ. ಚೆನ್ನೆನಲ್ಲಿ ಪೆಟ್ರೋಲ್ ಲೀ.ಗೆ 16 ಪೈಸೆ ಕಡಿಮೆಯಾಗಿ 70.85. ರೂ.ಗಳಿದ್ದರೆ, ಲೀಟರ್ ಡೀಸೆಲ್ 65.72 ರೂ.ಗಳಿಗೆ ಮಾರಾಟವಾಗುವ ಮೂಲಕ 19 ಪೈಸೆ ಇಳಿಕೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿಯೂ 15 ಪೈಸೆ ಕಡಿಮೆಯಾಗಿ 70.43 ರೂ.ಗೆ ಪೆಟ್ರೋಲ್ ಮಾರಾಟವಾಗುತ್ತಿದ್ದು, ಡೀಸೆಲ್ ಪ್ರತಿ ಲೀಟರ್‌ಗೆ 18 ಪೈಸೆ ಕಡಿಮೆಯಾಗಿ 64.03 ರೂ.ಗಳಷ್ಟಿದೆ.
ಒಟ್ಟಾರೆಯಾಗಿ ನೋಡುವುದಾದರೆ ರಾಷ್ಟçದಾದ್ಯಂತ ಪ್ರಸ್ತುತ ತೈಲ ಬೆಲೆ ಎಷ್ಟಿದೆಯೋ ರಾಜ್ಯದಲ್ಲೂ ಬಹುತೇಕ ಅಷ್ಟೇ ಇದೆಯೇ ಹೊರತು, ತೆರಿಗೆ ಏರಿಕೆ ಮಾಡಿದರೂ ಬೇರೆ ರಾಜ್ಯಗಳಿಗಿಂತಲೂ ಕಡಿಮೆ ಎಂದು ಮುಖ್ಯಮಂತ್ರಿಗಳು ಬೀಗುವಂತಹ ಸಾಧನೆಯೇನೂ ಇಲ್ಲ ಎಂಬುದು ಸತ್ಯ.
ಈ ವಿಚಾರವನ್ನು ಹೊರತುಪಡಿಸಿ ನೋಡುವುದಾದರೆ, ತೈಲ ಬೆಲೆ ಏರಿಕೆಯಾಯಿತು ಎಂಬ ನೆಪವೊಡ್ಡಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಡಪಕ್ಷಗಳೆಲ್ಲಾ ಸೇರಿಕೊಂಡು ಭಾರತ್ ಬಂದ್ ಮಾಡಿ ಕೋಟ್ಯಂತರ ರೂ. ನಷ್ಟ ಮಾಡಿದ್ದವು. ಆದರೆ, ಇದೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಈಗ ರಾಜ್ಯದಲ್ಲಿ ತೆರಿಗೆ ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆಯಲ್ಲಾ ಈ ಸರ್ಕಾರವನ್ನು ಯಾವ ಪದಗಳಿಂದ ಜರಿಯಬೇಕು?
ಅಂದು ಪುಂಖಾನುಪುಂಖವಾಗಿ ಮೋದಿ ಸರ್ಕಾರದ ವಿರುದ್ದ ಮಾತನಾಡಿದ್ದ ರಾಹುಲ್ ಗಾಂಧಿ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ದೋಸ್ತಿ ಪಕ್ಷದ ಮುಂದಾಳುಗಳು ಈಗ ಏನು ಹೇಳುತ್ತಾರೆ?
ಭಾರತ್ ಬಂದ್ ನೆಪ ಮಾಡಿಕೊಂಡು ಕೋಟ್ಯಂತರ ರೂ. ಬೆಲೆಯ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ ಹಾಗೂ ಅದಕ್ಕೆ ಕಾರಣವಾದ ಮುಖಂಡ ಪಾಷಂಡಿಗಳು ಈಗೆಲ್ಲಿ ಸತ್ತಿದ್ದಾರೆ?
ಪ್ರಮುಖವಾಗಿ ತೈಲ ಬೆಲೆಗಳು ಜಾಗತಿಕ ಮಾರುಕಟ್ಟೆಯ ಏರಿಳಿತದ ಮೇಲೆ ಅವಲಂಬನೆಯಾಗಿರುತ್ತದೆ. ಅಲ್ಲಿ, ಹೆಚ್ಚಾದರೆ ಇಲ್ಲೂ ಹೆಚ್ಚಾಗುತ್ತದೆ. ಅಲ್ಲಿ ಕಡಿಮೆಯಾದರೆ, ಇಲ್ಲೂ ಕಡಿಮೆಯಾಗುತ್ತದೆ. ಆದರೆ, ಪ್ರಜಾಹಿತವನ್ನು ಬಯಸುವ ಯಾವುದೇ ಸರ್ಕಾರ ಬೆಲೆ ಹೆಚ್ಚಾದಾಗ ಅದರ ಮೇಲಿನ ತೆರಿಗೆ ಕಡಿಮೆ ಮಾಡುವ ಮೂಲಕ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಬೇಕು. ಅದೂ, ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ತೊಂದರೆಯಾಗದಂತೆ.
ಹೀಗಿರುವಾಗ, ಅಂದು ಮೋದಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ, ತಾವೊಬ್ಬ ಜನಹಿತಕ್ಕಾಗಿಯೇ ಉದಯಿಸಿದ ಅವತಾರ ಪುರುಷ ಎಂಬಂತೆ ಬೀಗುವ ಕುಮಾರಸ್ವಾಮಿ, ಈಗ ಜನಹಿತವನ್ನು ಕಡೆಗಣಿಸಿ ತೆರಿಗೆ ಏರಿಕೆ ಮಾಡಿರುವುದು ಯಾವ ಪುರುಷಾರ್ಥಕ್ಕೆ. ನೀವು ಹೀಗೆ ಏರಿಕೆ ಮಾಡಿ, ಅದನ್ನು ಸಮರ್ಥಿಸಿಕೊಳ್ಳುತ್ತೀರ ಎಂದರೆ, ಅಂದು ದರ ಏರಿಕೆಯಾದಾಗ ಮೋದಿ ಅವರಿಗೂ ನೂರೊಂದು ಸಮರ್ಥನೆಗಳಿತ್ತು. ಆಗ ಯಾವ ನೈತಿಕತೆಯಿಟ್ಟುಕೊಂಡು ಪ್ರಧಾನಿಯವರ ವಿರುದ್ಧ ಮಾತನಾಡಿದಿರಿ ಕುಮಾರಸ್ವಾಮಿಯವರೇ? ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಕೇಳಿ. ಅದೂ ಇದ್ದರೆ…!
-ವಷಿಷ್ಠ
Discussion about this post