ನವದೆಹಲಿ: ವೀಡಿಯೋಕಾನ್ ಗ್ರೂಪ್’ಗೆ ಐಸಿಐಸಿಐ ಬ್ಯಾಂಕ್, ಅದರ ಸಿಇಒ ಚಂದ್ ಕೊಚಾರ್ ಹಾಗೂ ಕುಟುಂಬಸ್ಥರು ಸಾಲ ಮಂಜೂರು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್’ಐಆರ್ ದಾಖಲಿಸಿದೆ.
ಮುಂಬೈನಲ್ಲಿರುವ ವೀಡಿಯೋಕಾನ್ ಕೇಂದ್ರ ಕಚೇರಿ ಹಾಗೂ ಔರಂಗಾಬಾದ್’ನಲ್ಲಿರುವ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಅಲ್ಲದೇ, ಚಂದ್ ಕೊಚಾರ್ ಅವರ ಪತಿ ದೀಪಕ್ ಕೊಚಾರ್ ಒಡೆತನದ ನುಪುವರ್ ಎಂಬ ಕಂಪೆನಿಯ ಕಚೇರಿಯ ಮೇಲೂ ಸಿಬಿಐ ದಾಳಿ ನಡೆಸಿದ್ದು, ದಾಖಲೆಗಳ ಹುಡುಕಾಟದಲ್ಲಿದೆ.
ಐಸಿಐಸಿಐ ಬ್ಯಾಂಕ್-ವೀಡಿಯೋಕಾನ್ ಸಾಲದ ಪ್ರಕರಣ 3,250 ಕೋಟಿ ರೂಪಾಯಿಗಳಿಗೆ ಅಕ್ರಮವೆಂದು ಆರೋಪಿಸಲಾಗಿದೆ. ವೀಡಿಯೋಕಾನ್ ಪ್ರವರ್ತಕ ವೇಣುಗೋಪಾಲ್ ಧೂತ್ ಅವರು 2012 ರಲ್ಲಿ ಐಸಿಐಸಿಐ ಬ್ಯಾಂಕ್’ನಿಂದ ವೀಡಿಯೊಕಾನ್ ಗುಂಪಿನಿಂದ 3,250 ಕೋಟಿ ರೂ. ಸಾಲ ಪಡೆದ ನಂತರ ನುಪವರ್ ತಿಂಗಳಲ್ಲಿ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಈ ಹಿಂದೆ ಸೆಬಿ ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ದೀಪಕ್ ಕೋಚಾರ್ ಕಳೆದ ಹಲವಾರು ವರ್ಷಗಳಿಂದ ವಿಡಿಯೋಕಾನ್ ಗುಂಪಿನೊಂದಿಗೆ ಅನೇಕ ವ್ಯಾಪಾರ ವ್ಯವಹಾರಗಳನ್ನು ಹೊಂದಿದ್ದರು ಎಂದು ದೂರಲಾಗಿದೆ.
Discussion about this post