ನವದೆಹಲಿ: ನೀರವ್ ಮೋದಿ ಸಹೋದರ ನಿಶಾಲ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡುವಂತೆ ಇಂಟರ್ ಪೋಲ್ ಅಧಿಕಾರಿಗಳಿಗೆ ಸಿಬಿಐ ಕೋರಿದೆ.
ಮಾತ್ರವಲ್ಲದೇ ನಿಶಾಲ್ ಮೋದಿ ಸಿಬ್ಬಂದಿ ಸುರೇಶ್ ಶಂಕರ್ ಪರಬ್ ಅವರ ವಿರುದ್ಧವೂ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡುವಂತೆ ಕೇಳಿದೆ.
ಇನ್ನು, ಭಾರತದಿಂದ ಪರಾರಿಯಾಗಿರುವ ನೀರವ್ ಮೋದಿ ಯುನೈಟೆಡ್ ಕಿಂಗ್‌ಡಮ್ ನಲ್ಲಿರುವುದಾಗಿ ಹಾಗೂ ಅಲ್ಲಿ ಅವರ ವ್ಯವಹಾರಗಳು ಇರುವುದಾಗಿ ಸಿಬಿಐಗೆ ಮಾಹಿತಿ ತಿಳಿದುಬಂದಿದೆ ಎನ್ನಲಾಗಿದೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಪ್ರಕರಣ ದಾಖಲಾಗಿದ್ದು, ಈ ಕುರಿತಂತೆ ನೀರವ್ ಮೋದಿ ಹಾಗೂ ಅವರ ಸಂಬಂಧಿ-ವ್ಯಾವಹಾರಿಕ ಪಾಲುದಾರ ಮೆಹುಲ್ ಚೋಕ್ಸಿ ಪ್ರಮುಖ ಆರೋಪಿಗಳಾಗಿದ್ದಾರೆ.
Discussion about this post