ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ಲೀಡರ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಎನ್.ಎಂ. ಮಲೈಕ ಈ ಬಾರಿಯ ಸಿಬಿಎಸ್ಇ ಪಠ್ಯಕ್ರಮದ 10 ನೇ ತರಗತಿಯ ಫಲಿತಾಂಶದಲ್ಲಿ 600 ಅಂಕಗಳಿಗೆ 575 (ಶೇ.96) ಅಂಕಗಳನ್ನು ಪಡೆದು ಶಾಲೆ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ವಿದ್ಯಾರ್ಥಿನಿಯು ನಗರದ ಶ್ರೀ ಬಾಲಾಜಿ ಕಾಫಿ ವಕ್ಸ್ ನ ಮಾಲೀಕರಾದ ಮಂಜುನಾಥ್ ರವರ ಮಗಳಾಗಿದ್ದು, ಇಡೀ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆ ಮಾಡಿ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಶಾಲೆಯಲ್ಲಿ ಈ ಬಾರಿ ಶೇ. 100 ರಷ್ಟು ಫಲಿತಾಂಶ ಬಂದಿದ್ದು ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂಧಿಸಿದ್ದಾರೆ.
ಈ ಬಾರಿ 72 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 26 ಉನ್ನತ ಶ್ರೇಣಿಯಲ್ಲಿ, ಉಳಿದ 46 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಸತತ 8 ವರ್ಷದಿಂದ ಸಿಬಿಎಸ್ಇ ಪಠ್ಯಕ್ರಮದ 10 ನೇ ತರಗತಿಯ ಫಲಿತಾಂಶವು ಶೇ 100 ರಷ್ಟು ಪಡೆದಿದ್ದಾರೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get In Touch With Us info@kalpa.news Whatsapp: 9481252093
Discussion about this post