ನವದೆಹಲಿ: ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕ್ರಮಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ತೈಲ ಉತ್ಪನ್ನದ ಮೇಲಿನ ತೆರಿಗೆ ಕಡಿತಗೊಳಿಸಿದ್ದು, ಇದರಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ತಲಾ 2.50 ರೂ. ಇಳಿಕೆಯಾಗಿದೆ.
ಈ ಕುರಿತಂತೆ ಮಾತನಾಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಕೇಂದ್ರ ಸರ್ಕಾರ ರೂ. 1.50 ಅಬಕಾರಿ ಸುಂಕವನ್ನು ಕಡಿತ ಮಾಡಿದ್ದು, ತೈಲ ಕಂಪೆನಿಗಳು ರೂ.1 ಇಳಕೆ ಮಾಡಿವೆ. ಇದರ ಪರಿಣಾಮ ಒಟ್ಟಾರೆಯಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ರೂ.2.50 ಇಳಿಕೆಯಾಗಿದ್ದು, ಇದು ತತಕ್ಷಣವೇ ಜಾರಿಗೆ ಬರಲಿದೆ ಎಂದಿದ್ದಾರೆ.
Govt has decided that revenue dept will absorb Rs 1.50 per litre while OMCs will absorb the other Rs 1.00; will request to state govts to reduce VAT on fuel by Rs 2.50 as well: Union Minister @arunjaitley #fuelprices pic.twitter.com/ByaN8etLdR
— PIB India (@PIB_India) October 4, 2018
ತೈಲದ ಮೇಲಿನ ಅಬಕಾರಿ ಸುಂಕ ಇಳಿಕೆಯಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ರೂ.10.500 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ರೂ.2.50ರವರೆಗೂ ಕಡಿತಗೊಳಿಸುವ ಕುರಿಸು ಎಲ್ಲಾ ರಾಜ್ಯಗಳಿಗೂ ಪತ್ರ ಬರೆಯಲಾಗುತ್ತದೆ ಎಂದಿರುವ ಅವರು, ಆಯಾ ರಾಜ್ಯಗಳೂ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಲಿ. ಹವಾರು ಬೃಹತ್ ಆರ್ಥಿಕ ದತ್ತಾಂಶಗಳು ಸ್ಥಿರ ಕ್ರಮಗಳನ್ನು ಸೂಚಿಸುತ್ತಿವೆ. ಮೊದಲ ತ್ರೈಮಾಸಿಕ ಫಲಿತಾಂಶಗಳು ಶೇ.8.2ರಷ್ಟು ಬೆಳವಣಿಗೆಯನ್ನು ತೋರಿಸಿದ್ದರೆ, ಹಣದುಬ್ಬರವು ಶೇ.4ಕ್ಕಿಂತಲೂ ಕಡಿಮೆಯಿದೆ ಎಂದು ತಿಳಿಸಿದ್ದಾರೆ.
Discussion about this post