ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚಂದ್ರಗುತ್ತಿ ವಲಯದಲ್ಲಿ ಒಟ್ಟು 321 ಪ್ರಗತಿ ಬಂಧು ಸ್ವ ಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು 2094 ಸದಸ್ಯರು ಒಳಗೊಂಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ಸುಬ್ರಾಯ ನಾಯ್ಕ ಹೇಳಿದರು.
ಚಂದ್ರಗುತ್ತಿ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ಭಾನುವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ). ಸೊರಬ ಹಾಗೂ ಚಂದ್ರಗುತ್ತಿ ವಲಯ ಮಟ್ಟದ ಸಾಧನ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಸಂಘಗಳ ಖಾತೆಯನ್ನು ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ತೆರೆಯಲಾಗಿದ್ದು. ಸಂಘದ ಸದಸ್ಯರು ಅಭಿವೃದ್ಧಿಪರ ಚಟುವಟಿಕೆಗಳಾದ ಕೃಷಿ ಅಭಿವೃದ್ಧಿ, ಸ್ವ ಉದ್ಯೋಗ, ಹೈನುಗಾರಿಕೆ, ಕೋಳಿ ಮತ್ತು ಕುರಿ ಸಾಕಾಣಿಕೆ, ಮನೆ ರಚನೆ, ಮನೆ ರಿಪೇರಿ, ಹಟ್ಟಿ ರಚನೆ, ಬೋರ್ ವೆಲ್ ರಚನೆ, ಪಂಪ್ ಸೆಟ್ ಖರೀದಿ, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ಉದ್ಯಮಗಳಿಗೆ ಪ್ರಸ್ತುತ ವರ್ಷದಲ್ಲಿ ಬ್ಯಾಂಕಿನಿಂದ 4 ಕೋಟಿ 17 ಲಕ್ಷ ಆರ್ಥಿಕ ನೆರವು ಒದಗಿಸಲಾಗಿದೆ. ಪ್ರಸ್ತುತ ಸದಸ್ಯರ ಹೊರಬಾಕಿ ಮೊತ್ತ 6 ಕೋಟಿ ಹತ್ತು 10 ಲಕ್ಷ ಹೊಂದಿದ್ದು, ಶೇಕಡಾ 100% ಮರುಪಾವತಿ ಆಗುತ್ತಿದೆ ಎಂದು ತಿಳಿಸಿದರು.
Also read: ಚರ್ಚ್’ನಲ್ಲಿ ಪ್ರಸಾದ ತಿಂದ 100ಕ್ಕೂ ಅಧಿಕ ಮಂದಿ ಅಸ್ವಸ್ಥ
ಸಂಘದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಪ್ರತಿವರ್ಷ ಸಂಘಗಳ ಲೆಕ್ಕ ಪರಿಶೋಧನೆ ಯನ್ನು ಸಂಘದ ಶ್ರೇಣೀಕರಣ ಮೂಲಕ ಮಾಡಲಾಗುತ್ತಿದೆ. ಸದಸ್ಯರಿಗೆ ಉಳಿತಾಯ ಹಾಗೂ ವಿಮಾ ಅರಿವು ಮೂಡಿಸುವ ಮೂಲಕ ಈ ವರೆಗೆ ಭಾರತೀಯ ಜೀವ ನಿಗಮದ ಸಹಯೋಗದಲ್ಲಿ 500 ಮೈಕ್ರೋಬಚತ್ ಪಾಲಿಸಿ ಮಾಡಲಾಗಿದೆ. ಅಲ್ಲದೇ ಪ್ರಗತಿ ರಕ್ಷಾ ಕವಚ, ಆರೋಗ್ಯ ವಿಮೆ, ನಿರ್ಗತಿಕರ ಮಾಶಾಸನ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಹಾಯಧನ, ಜನಮಂಗಳ ಕಾರ್ಯಕ್ರಮ, ಜ್ಞಾನ ದೀಪ ಶಿಕ್ಷಕರ ವದಗಣೆ, ಶಾಲೆಗಳಿಗೆ ಪೀಠೋಪಕರಣಗಳ ಒದಗಣೆ, ಸುಜ್ಞಾನನಿಧಿ ಶಿಷ್ಯವೇತನ, ನಮ್ಮೂರು ನಮ್ಮ ಕೆರೆ, ವಾತ್ಸಲ್ಯ ಕಾರ್ಯಕ್ರಮ, ಸಿ.ಎಸ್.ಸಿ ಕಾರ್ಯಕ್ರಮ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ, ಸ್ವಚ್ಛತಾ ಕಾರ್ಯಕ್ರಮ, ಅಧ್ಯಯನ ಪ್ರವಾಸ, ನಿರಂತರ ಪತ್ರಿಕೆ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಸೇರಿದಂತೆ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅತ್ಯುತ್ತಮ ಸಂಘ ನಿರ್ವಹಣೆಯ ಸುಮಾರು 52 ಸಂಘಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಂ.ಪಂ. ಅಧ್ಯಕ್ಷೆ ಶಿಲ್ಪಾ ಗಿರಿ ಗೌಡರ್ ವಹಿಸಿದ್ದರು. ರೇಣುಕಾಂಬ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ ಮಾತನಾಡಿದರು, ಗಿರಿಜಾ ವಾಸುದೇವ್ ಶಿಕ್ಷಕರು, ಮೇಲ್ವಿಚಾರಕರಾದ ಮಾರುತಿ, ಸಂಘದ ಸೇವಾ ಪ್ರತಿನಿಧಿ ಲಲಿತಾ ಎಂ.ಶೆಟ್ಟಿ, ಯೋಗೀಶ್, ವಿದ್ಯಾ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post