ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಟ್ರಾಕ್ಟರ್, ಹೈನುಗಾರಿಕೆ, ದಾಳಿಂಬೆ, ಕುರಿ ಮತ್ತು ಜಮೀನು ಅಭಿವೃದ್ದಿಗಾಗಿ ಸುಮಾರು 50ಲಕ್ಷ ರೂ. ವಿತರಿಸಲಾಗಿದೆ ಎಂದು ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಮಾತೃಶ್ರೀ ಮಂಜುನಾಥ ತಿಳಿಸಿದ್ದಾರೆ.
ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತ ಕಚೇರಿಯಲ್ಲಿ ಆಡಳಿತ ಮಹಾಮಂಡಳಿಯ ಸಭೆಯಲ್ಲಿ ಅವರು ಮಾತನಾಡಿದರು.
ರೈತರ ಕೃಷಿ ಅನುಕೂಲಕ್ಕಾಗಿ ಟ್ರಾಕ್ಟರ್, ಹೈನುಗಾರಿಕೆ, ದಾಳಿಂಬೆ, ಕುರಿ ಮತ್ತು ಜಮೀನು ಅಭಿವೃದ್ದಿ ಇತರೆ ಅಭಿವೃದ್ಧಿಗಾಗಿ 50 ಲಕ್ಷ ರೂ.ಗಳಷ್ಟು ವಿತರಿಸಲಾಗಿದೆ. ಹಾಗೂ ಬ್ಯಾಂಕಿನಲ್ಲಿ ನಿಶ್ಚಿತ ಠೇವಣೆ ಇಡಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಕಳೆದ ವರ್ಷ ಬಡ್ಡಿ ಮನ್ನಾ ಯೋಜನೆ ನೀಡಿದ್ದರೂ, ಕೆಲ ರೈತರು ಸಾಲ ವಸೂಲಾತಿ ಮಾಡದೆ ಇರುವ ರೈತರಿಗೆ ಈ ತಿಂಗಳೊಳಗೆ ಸಾಲ ಮರುಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿ., ಕಟ್ಟಡವನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್, ಉಪವಿಭಾಗ, ಚಳ್ಳಕೆರೆ ಇವರಿಗೆ ಉಪವಿಭಾಗ, ಬಾಡಿಗೆಗೆ ನೀಡಿದ್ದು, ಕಳೆದ 20 ವರ್ಷಗಳಿಂದ ಬಾಡಿಗೆ ನೀಡದೆ ನಿರ್ಲಕ್ಷ್ಯ ತೊರಿದ್ದು, ಅವರ ವಿರುದ್ಧ ದಾವೆ ಹೂಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬ್ಯಾಂಕಿನಲ್ಲಿ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಸಿಬ್ಬಂದಿಯವರಿಗೆ ಕೆಲಸ ಕಾರ್ಯಗಳನ್ನು ನಿಶ್ಚಯ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬ್ಯಾಂಕ್‌ನ ನಿರ್ದೇಶಕ ಜಲ್ದೀರಪ್ಪ ಮಾತನಾಡಿ, ಮಂಜುನಾಥ ಅಧ್ಯಕ್ಷರಾದ ಮೇಲೆ ಬ್ಯಾಂಕ್ ಬದಲಾವಣೆಯತ್ತ ಸಾಗುತ್ತಿದ್ದು, ಈಗ ಹಾಲಿ ಬ್ಯಾಂಕಿನಲ್ಲಿ ಅಧ್ಯಕ್ಷರ ಕೊಠಡಿ ಹಾಗೂ ಪಿಠೋಪಕರಣಗಳನ್ನು ನವೀಕರಣ ಮಾಡಿಸಲಾಗಿದೆ. ಇನ್ನು ಹೆಚ್ಚಿಗೆ ಅಭಿವೃದ್ದಿಯಾಗಿ ಬ್ಯಾಂಕಿನಿಂದ ರೈತರಿಗೆ ಉತ್ತಮ ಸಹಕಾರಿಯಾಗಲಿ ಎಂದರು.
ಮಂಜುನಾಥ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ತಿಪ್ಪಮ್ಮ, ನಿರ್ದೇಶಕರಾದ ಜಲ್ದಿರಪ್ಪ, ಶಿವಣ್ಣ, ಮೈಲನಹಳ್ಳಿ ರಾಜಣ್ಣ, ಸಿದ್ದಿಕ್ ಸಿದ್ದಿಕ್, ಸತೀಶ್ ಬಾಬು, ಜಗನ್ನಾಥ, ನಾಗರಾಜ ಮಂಜುಳ ಹಾಗೂ ವ್ಯವಸ್ಥಾಪಕರಾದ ಪ್ರಭು ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post