ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಅಂಗನವಾಡಿ ನೌಕರರಿಗೆ ನೀಡಲಾಗಿರುವ ಸೌಲಭ್ಯಗಳಿಗೆ ಹೊಂದಿಕೊಂಡು, ಯಾವುದೇ ಸಂದರ್ಭದಲ್ಲಿ ಸೂಚನೆ ನೀಡಿದ ತಕ್ಷಣ ಶರತ್ತುಗಳಿಲ್ಲದೇ ಕಾರ್ಯನಿರ್ವಹಿಸುತ್ತಿದ್ದರೂ ಬಜೆಟ್‌ನಲ್ಲಿ ಅಂಗನವಾಡಿ ನೌಕರರನ್ನು ಸರ್ಕಾರ ಕಡೆಗಣಿಸಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ನಗರದ ತಾಲ್ಲೂಕು ಕಚೇರಿ ಹಾಗೂ ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿ, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್ ಹಾಗೂ ಸಿಡಿಪಿಓ ಮೋಹನ್ ಕುಮಾರಿ ಇವರಿಗೆ ಮನವಿ ಸಲ್ಲಿಸಲಾಯಿತು.

ಬಜೆಟ್ ಅಂತಿಮಗೊಳಿಸುವಾಗ ನಮ್ಮ ಬೇಡಿಕಗಳನ್ನು ಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಹೆಚ್ಚುವರಿ ಕೆಲಸಗಳಾದ ಇ ಸರ್ವೆ, ಆರ್‌ಡಿಪಿನಿಂದ ಕೊಟ್ಟಿರುವ ಸರ್ವೆಕಾರ್ಯ, ಬಿಪಿಎಲ್ ಕಾರ್ಡ್, ಆರ್‌ಸಿ ಹೆಚ್ ಸರ್ವೆ, ಭಾಗ್ಯ ಲಕ್ಷ್ಮಿ ಸರ್ವೆ, ಮಾತೃವಂದನಾ, ಮಾತೃಶ್ರೀ. ಸ್ತ್ರೀಶಕ್ತಿ ಚುನಾವಣೆ ಮುಂತಾದ ಕೆಲಸಗಳನ್ನು ಬಹಿಷ್ಕರಿಸಲು ಸಂಘಟನೆ ಕರೆಕೊಟ್ಟಿದೆ. ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯನ್ನು ಕೊಡುವ ತನಕ ಅಡುಗೆ ತಯಾರು ಮಾಡುವುದಿಲ್ಲಾ ಎಂದು ತೀರ್ಮಾನಿಸಲಾಗಿದೆ. ಇದನ್ನು ಮನಗಂಡು ಸರ್ಕಾರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ಉಳ್ಳಾರ್ತಿ ಕರಿಯಣ್ಣ, ಹಾಗೂ ಅಂಗನವಾಡಿ ನೌಕರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post