ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕೊರೋನಾ ವೈರಸ್ ಹರಡದಂತೆ ಬೆಳಗೆರೆ ಪಂಚಾಯ್ತಿಯಲ್ಲಿ ಜಾಗೃತಿ ಕಾರ್ಯಪಡೆ ರಚಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಗ್ರಾಮ ಪಂಚಾಯಿತಿ ಸದಸ್ಯರು, ಅರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರನ್ನು ಒಳಗೊಂಡಂತೆ ಜಾಗೃತಿ ಕಾರ್ಯ ಪಡೆಯನ್ನು ರಚಿಸಿ ಗ್ರಾಮಸ್ಥರಲ್ಲಿ ಕೊರೋನಾ ವೈರಸ್ ಹರಡದಂತೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಬೆಳಗೆರೆ ಪಿಡಿಓ ಎ.ಗುಂಡಪ್ಪ ತಿಳಿಸಿದ್ದಾರೆ.
ಬೆಳಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ಬಾರಬಾರದು ಎಂದು ಗ್ರಾಮಗಳಿಗೆ ಬೇರೆಯವರು ಬರದಂತೆ ಮುಖ್ಯ ರಸ್ತೆಗಳಿಗೆ ಕಳ್ಳೆ ಹಾಕಿ ಬಂದ್ ಮಾಡಿದ್ದರು. ಆದರೆ ತಾಲ್ಲೂಕು ಕಚೇರಿ ಆವರಣದಲ್ಲಿ ನಡದ ಅಧಿಕಾರಿಗಳ ಸಭೆಯಲ್ಲಿ ಗ್ರಾಮಗಳಿಗೆ ಒಳಬಾರದಂತೆ ಹಾಕಿರುವ ರಸ್ತೆ ಬಂದ್ ಗಳನ್ನು ತೆರವುಗೊಳಿಸಿ ಎಂದು ಶಾಸಕ. ರಘುಮೂರ್ತಿ ಮತ್ತು ಪೋಲಿಸ್ ಇಲಾಖೆ ತೀರ್ಮಾನದಂತೆ ಇಂದು ಬೆಳಗೆರ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಎ.ಗುಂಡಪ್ಪ ಬಂದ್ ಮಾಡಿದ ಎಲ್ಲಾ ರಸ್ತೆಗಳನ್ನು ತೆರವು ಮಾಡಿಸಿದರು.
ಬೆಳಗೆರೆ ಪಂಚಾಯ್ತಿಯಲ್ಲಿ ಕೊರೋನಾ ವೈರಸ್ ಜಾಗೃತಿ ಮೂಡಿಸುವ ಸಲುವಾಗಿ ಮುಂಜಾಗ್ರತಾ ಕಾರ್ಯ ಪಡೆಯನ್ನು ಮಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ವೈರಸ್ ಹರಡದಂತೆ ಕ್ರಮಕೈಗೊಳ್ಳಲಾಗುತ್ತಿದೆ.
ಇನ್ನು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ಮಾತ್ರೆಗಳನ್ನು ವಶಪಡಿಸಿಕೊಂಡು ಗ್ರಾಮಸ್ಥರಿಗೆ ಜ್ವರ, ನೆಗಡಿ, ಕೆಮ್ಮು ಕಾಣಿಸಿದ್ದೆಯಾದರೆ ತತಕ್ಷಣ ಪರಶುರಾಂಪುರದ ವೇದವತಿ ಕಾಲೇಜಿನಲ್ಲಿ ಜ್ವರ ಚಿಕಿತ್ಸೆ ಕೇಂದ್ರಕ್ಕೆ ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮಾಹಿತಿ ನೀಡಿದರು.
ಗ್ರಾಮಪಂಚಾಯ್ತಿ ಅಧ್ಯಕ್ಷೆ ತಿಪ್ಪಮ್ಮ ಮಂಜುನಾಥ, ಸದಸ್ಯರಾದ ಕೆ.ಟಿ. ನಿಜಲಿಂಗಪ್ಪ, ಎನ್. ನಾಗಭೂಷಣ್ ರಾವ್, ಗೋಪಾಲಪ್ಪ, ಸುನೇತ್ರ, ಶಿವಣ್ಣ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಪಂಚಾಯ್ತಿ ಸಿಬ್ಬಂದಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post