ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಆಯ್ಕೆಯಾದ ಬೆಳಗೆರೆ ಕೆ.ಟಿ. ನಿಜಲಿಂಗಪ್ಪ ಇವರನ್ನು ನಗರದ ಹಿರಿಯ ನಾಗರಿಕರು, ನಿವೃತ್ತ ಶಿಕ್ಷಕರು ಹಾಗೂ ಗೊಲ್ಲ ಸಮುದಾಯದ ಮುಖಂಡರು ಸನ್ಮಾನಿಸಿ ಗೌರವಿಸಿದ್ದಾರೆ.
ಚಳ್ಳಕೆರೆ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘ ನೇಮಿತ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿವೃತ್ತ ಮುಖ್ಯ ಶಿಕ್ಷಕ ಮಂಜಪ್ಪ ಕೆ.ಟಿ. ನಿಜಲಿಂಗಪ್ಪ ಎಂ.ಎ. ಪದವೀಧರರಾಗಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಂತರ ಗ್ರಾಮಪಂಚಾಯಿತಿ ಸದಸ್ಯರಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು ಇಂದು ಚಳ್ಳಕೆರೆ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘ ನಿಯಮಿತ ದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.
ಅಧ್ಯಕ್ಷ ಕೆ.ಟಿ. ನಿಜಲಿಂಗಪ್ಪ ಮಾತನಾಡಿ, ಮಾಜಿ ಸಚಿವ ಡಿ. ಸುಧಾಕರ್, ಶಾಸಕ ಟಿ. ರಘುಮೂರ್ತಿ ಹಾಗೂ ಸಂಜೀವಮೂರ್ತಿ, ವೀರಭದ್ರ ಬಾಬು ಹಾಗೂ ಸರ್ವಸದಸ್ಯರ ಸಹಕಾರದಿಂದ ಅಧ್ಯಕ್ಷ ಸ್ಥಾನಕ್ಕೆ ಅವಕಾಶವಾಗಿದೆ. ಈ ಮೂಲಕ ಎಲ್ಲಾರಿಗೂ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಹಿರಿಯ ಸದಸ್ಯರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತ್ತೇನೆ ಎಂದರು.
ಈ ಸಮಯದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಕೆ.ಆರ್. ರಾಜಣ್ಣ, ನಿವೃತ್ತ ಪ್ರಾಂಶುಪಾಲರಾದ ಮೂಡಲಗಿರಿಯಪ್ಪ, ನಿವೃತ್ತ ಸೂಪರ್‌ವೈಸರ್ ಶ್ರೀಕಂಠಪ್ಪ, ಬೆಳಗೆರೆ ಸೇವಾ ಸಹಕಾರ ಸಂಘದ ನಿರ್ದೇಶಕ ಮುದ್ದುವೀರಪ್ಪ ಹಾಗೂ ಟಿಎಪಿಎಂಸಿ ನಿರ್ದೇಶಕರಾದ ಜಿ.ಬಿ. ನಾರಾಯಣ ರೆಡ್ಡಿ, ರುದ್ರಮುನಿ, ವೀರಣ್ಣ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post