ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಗ್ರಾಮದ ಕಡೆಗೆ ಅಧಿಕಾರಿಗಳ ನಡಿಗೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್. ರಘುಮೂರ್ತಿ ಚಾಲನೆ ನೀಡಿದರು.
ಪೋಡಿ, ಪೌತಿ, ದಾರಿ ಒತ್ತುವರಿ ಮುಂತಾದ ಸಮಸ್ಯೆಗಳ 80 ಅಹವಾಲುಗಳನ್ನು ಈ ಸಂದರ್ಭದಲ್ಲಿ ಜನರಿಂದ ಸ್ವೀಕರಿಸಲಾಯಿತು.
ಮೂರನೇ ಅಲೆಯನ್ನು ತಡೆಯಲು ಕೋವಿಡ್‌ಗೆ ಸಿಲುಕಿದ್ದ ಕುಟುಂಬದ ಮಕ್ಕಳ ಗಣತಿಯನ್ನು ನಡೆಸಲು ಆರೋಗ್ಯ ಅಧಿಕಾರಿಗಳೊಂದಿಗೆ ತಾಲ್ಲೂಕಿನ ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಲಾಗುವುದು. ಮತ್ತು ತಾಲ್ಲೂಕಿನಲ್ಲಿ ನಾಯಕನಹಟ್ಟಿ, ತಳಕು, ಪರಶುರಾಂಪುರ ಹಾಗೂ ಚಳ್ಳಕೆರೆ ಕಸಬಾ ಸೇರಿದಂತೆ ನಾಲ್ಕು ಹೋಬಳಿಗಳಿವೆ. ಹಾಗಾಗಿ ವಾರಕ್ಕೊಮ್ಮೆ ಪ್ರತಿ ಹೋಬಳಿ ವ್ಯಾಪ್ತಿಯ ಒಂದೊಂದು ಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ತಪ್ಪದೇ ನಡೆಸಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಶಿಶು ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿ ಮೋಹನ ಕುಮಾರಿ ಮಾತನಾಡಿದರು.
ತಳಕು ರಾಜಸ್ವ ನಿರೀಕ್ಷ ರಫಿಕ್, ಅಜಿಜ್, ಪಿಎಸ್‌ಐ ತಿಮ್ಮಣ್ಣ, ಕಂದಾಯ ಅಧಿಕಾರಿ ನಿಂಗೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಮ್ಮ, ಗ್ರಾಮದ ಮುಖಂಡ ಮಂಜುನಾಥ, ತಿಪ್ಪೇಸ್ವಾಮಿ, ರಂಗಸ್ವಾಮಿ, ಓಬಣ್ಣ, ಮಲ್ಲಿಕಾರ್ಜುನ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post