ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ದ್ವಿಚಕ್ರ ವಾಹನಕ್ಕೆ ಮೈನ್ಸ ಲಾರಿ ಡಿಕ್ಕಿಯಾದ ಪರಿಣಾಮ 12 ವರ್ಷದ ಬಾಲಕ ಸ್ಥಳದಲ್ಲೇ ಸಾವನಪ್ಪಿ, ಬೈಕ್ ಸವಾರನಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ನಗರದ ವಾಲ್ಮೀಕಿ ವೃತ್ತದ ಬಳಿ ನಿನ್ನೆ ನಡೆದಿದೆ.
ಮೃತ ಬಾಲಕ ತಾಲ್ಲೂಕಿನ ನಗರಂಗೆರೆ ಗ್ರಾಮದ ರಾಥೊಡ್ (12) ಸ್ಥಳದಲ್ಲೆ ಮೃತಪಟ್ಟಿದ್ದುಮ ಹಮಾಲಿ ಕೆಲಸ ನಿರ್ವಹಿಸತ್ತಿದ್ದ ರಮೇಶ ( ಭಟ್ಟ)ಗೆ ತೀವ್ರ ಸ್ವರೂಪದ ಗಾಯಗಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ರದುರ್ಗ ಕಡೆಯಿಂದ ಮೈನ್ಸ್ ತುಂಬಿಕೊಂಡು ಬರುತ್ತಿದ್ದ ಲಾರಿ ವಾಲ್ಮೀಕಿ ವೃತ್ತದ ಬಳಿ ತಾಲೂಕು ಪಂಚಾಯಿತಿ ರಸ್ತೆಯಿಂದ ಮುಖ್ಯ ರಸ್ತೆಗೆ ಸೇರುವ ರಸ್ತೆಯಲ್ಲಿ ಈ ಅಫಘಾತ ಸಂಭವಿಸಿದೆ. ಬೈಕ್ ಹಿಂಬದಿಯ ಕುಳಿತ್ತಿದ್ದ ಬಾಲಕನ ತಲೆ ಮೇಲೆ ಲಾರಿಯ ಚಕ್ರ ಹರಿದ ಪರಿಣಾಮವಾಗಿ ಬಾಲಕ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಫಘಾತವಾದ ಸ್ಥಳಕ್ಕೆ ಪೋಲೀಸ್ ಇನ್ಸ್‌ಪೆಕ್ಟರ್ ಜೆ. ತಿಪ್ಪೇಸ್ವಾಮಿ ಹಾಗೂ ಪಿಎಸ್‌ಐ ಮಹೇಶಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















