ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲೂಕಿನ ಯಲಗಟ್ಟೆ ಗ್ರಾಮದ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಲತಾ (28), ಪ್ರಣೀತ, (5) ಮತ್ತು ಜ್ಞಾನೇಶ್ (5) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಎಂದಿನಂತೆ ಮುಂಜಾನೆ ಗಂಡ ತಿಪ್ಪೇಸ್ವಾಮಿ ಹೊಲಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.
ತಾಯಿ ಲತಾ ನೇಣಿಗೆ ಶರಣಾಗಿದ್ದು, ಮನೆಯ ನೀರಿನ ತೊಟ್ಟಿನಲ್ಲಿ ಮಗ ಪ್ರಣೀತನ ಮೃತ ದೇಹ ಹಾಗು ಬಚ್ಚಲ ಮನೆಯ ಪಾತ್ರೆಯಲ್ಲಿ ಒಂದು ವರ್ಷದ ಮಗು ಜ್ಞಾನೇಶ್ ಮೃತ ದೇಹ ಪತ್ತೆಯಾಗಿದೆ.
ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















