ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಶುದ್ಧ ಕುಡಿಯುವ ನೀರು ಪೂರೈಕೆ 10ಲಕ್ಷ ರೂ., ಕಟ್ಟಡ ನಿರ್ಮಾಣ 1 ಕೋಟಿ ರೂ., ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ನಿರ್ವಹಣೆ 1.75ಲಕ್ಷ ರೂ., ಉದ್ಯಾಯನವನ ಅಭಿವೃದ್ಧಿಗೆ 50ಲಕ್ಷ ರೂ. ಸೇರಿದಂತೆ 60 ಲಕ್ಷರೂ. ಉಳಿತಾಯದ ಆಯ-ವ್ಯಯವನ್ನು ಮಂಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮೀ ಹೇಳಿದರು.
ನಗರಸಭಾ ಕಚೇರಿಯಲ್ಲಿ ನಡೆದ 2021-22ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ಮಾತನಾಡಿದ ಅವರು, 1ಕೋಟಿ ರೂ. ವೆಚ್ಚದಲ್ಲಿ ನಗರದ ಮುಖ್ಯರಸ್ತೆಯ ಬದಿಗೆ ಗ್ರಿಲ್ ಅಳವಡಿಸಲಾಗುವುದು, ಹಾಗೂ ರಸ್ತೆ ವಿಭಜಕ ನಿರ್ಮಾಣಕ್ಕೆ 15 ಲಕ್ಷ ರೂ. ಮತ್ತು ಅಗತ್ಯವಿರುವ ಕಡೆ ಶೌಚಾಲಯ ಮತ್ತು ಸ್ಮಶಾನವನ್ನು ಅಭಿವೃದ್ಧಿಪಡಿಸಲು 18 ಲಕ್ಷ ರೂ. ಹಣವನ್ನು ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ ಎಂದು ಹೇಳಿದರು.
ಪೌರಾಯುಕ್ತ ಪಾಲಯ್ಯ ಮಾತನಾಡಿ, ನಗರ ವ್ಯಾಪ್ತಿಯ ನೆರಳು ಇರುವ ಕಡೆಗೆ ಅಲ್ಲಲ್ಲಿ ಸಿಮೆಂಟ್ ಬೆಂಚ್ ಅಳಡಿಕೆಗೆ 15 ಲಕ್ಷ, ರೂ., ಆರೋಗ್ಯ ಶಿಬಿರ ನಡೆಸಲು 10 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.
ಸದಸ್ಯರ ಅಸಮದಾನ:
ಕೆಲ ವಿಷಯವನ್ನು ಸದಸ್ಯರ ಗಮನಕ್ಕೆ ತರದೆ ಅಯವ್ಯಯಕ್ಕೆ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಸಭೆಯಿಂದ ಹೊರ ನಡೆದರು. ನಂತರ ಅಧ್ಯಕ್ಷರು ಮತ್ತು ಅಧಿಕಾರಿಗಳು ಅಸಮದಾನಗೊಂಡ ಸದಸ್ಯರ ಮನವೊಲಿಸಿ ಅವರನ್ನು ಕರೆತಂದು ಅಯವ್ಯಯದ ಸಭೆ ನಡೆಸಿದರು.
ಉಪಾಧ್ಯಕ್ಷೆ ಜೈತುನ್ಬಿ, ಸಾಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‌ಗೌಡ, ಸದಸ್ಯ ಕೆ.ವೀರಭದ್ರಯ್ಯ, ವೈ.ಪ್ರಕಾಶ್, ಆರ್.ರಾಘವೇಂದ್ರ, ಸದಸ್ಯೆ ಮಂಜುಳಾ ಪ್ರಸನ್ನಕುಮಾರ್, ಸುಮಾ ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post