ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರಿಗೆ ಸೋಂಕು ತಗಲುವುದನ್ನು ನಿಯಂತ್ರಿಸಲು ಇಂದು ನಗರದಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿ ಹೇಳಿದರು.
ನಗರದ ಪೋಲೀಸ್ ಉಪಧೀಕ್ಷಕರ ಕಚೇರಿ ಮುಂಬಾಗದಲ್ಲಿ ನಗರಸಭೆ, ಪೋಲೀಸ್ ಇಲಾಖೆ ಹಾಗೂ ಅಗ್ನಿಶಾಮಕದಳ ಸಹಯೋಗದೊಂದಿಗೆ ಕೊರೋನಾ ಸೋಂಕು ನಿವಾರಕ ಸಿಂಪಡಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೋನಾ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಕಚೇರಿ, ಮುಖ್ಯರಸ್ತೆಯ ವಾಲ್ಮೀಕಿ ವೃತ್ತ, ತಾಲ್ಲೂಕು ಪಂಚಾಯಿತಿ ಮಂಭಾಗ, ನಗರಸಭೆ, ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆ. ಆವರಣ, ನೆಹರು ವೃತ್ತ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತಿದೆ ಎಂದರು.
ಕೊರೋನಾ ರೋಗವು ವ್ಯಾಪಕವಾಗಿ ಹರಡುತ್ತಿದ್ದು ತುಂಬ ಕಷ್ಟದ ಪರಿಸ್ಥಿತಿ ತಂದೋಡುತ್ತಿದ್ದೆ. ಇಂದು ನೋಡಿದ ವ್ಯಕ್ತಿ ನಾಳೆ ಪತ್ರಿಕೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾದಿಂದ ಸಾವು ಎಂದು ಬರುತ್ತದೆ. ಇದನ್ನು ನೋಡಿದರೆ ತುಂಬಾ ಭಯವಾಗುತ್ತದೆ. ಇನ್ನಾದರೂ ನಗರದ ಜನತೆ ಎಚೆತ್ತುಕೊಳ್ಳಬೇಕಿದೆ. ಅನಾವಶ್ಯಕವಾಗಿ ಮನೆಯಿಂದ ಹೊರಬರಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ. ನಿಮ್ಮೆಲ್ಲರ ಎಚ್ಚರಿಕೆ ನಿಮ್ಮ ಜೀವನದ ರಕ್ಷೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಡಿವೈಎಸ್‌ಪಿ ಕೆ.ವಿ ಶ್ರೀಧರ್ ಮಾತನಾಡಿ, ಸಾರ್ವಜನಿಕರು ಹೆಚ್ಚಿನ ಜಾಗೃತಿ ವಹಿಸಬೇಕಾಗುತ್ತದೆ. ನಿತ್ಯ ನಾವು ಮಾಧ್ಯಗಳಲ್ಲಿ ನೋಡುತ್ತಿದ್ದೇವೆ ಕೋರೋನಾ ಸೋಂಕಿತರಿಗೆ ಬೇಡ್ ಸಿಗುತ್ತಿಲ್ಲ, ಆಕ್ಸಿಜನ್‌ನ ಕೊರತೆ ಹೀಗೆ ಹಲವಾರು ಸಮಸ್ಯೆಗಳು ಕಣ್ನೇದುರಿಗೆ ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜಾಗೃತರಾಗಬೇಕು. ಕಾರಣವಿಲ್ಲದೆ ಹೋರಬರಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರದಿಂದ ಇದ್ದರೆ ಕೊರೋನಾದಿಂದ ದೂರವಿಬಹುದು ಎಂದರು.
ಈ ಸಮಯದಲ್ಲಿ ನಗರಸಭೆ ಸದಸ್ಯ ರಾಘವೇಂದ್ರ, ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಪೋಲೀಸ್ ಇನ್ಸ್‌ಪೆಕ್ಟರ್ ಜೆ. ತಿಪ್ಪೇಸ್ವಾಮಿ, ಪೌರಯುಕ್ತ ಪಿ.ಪಾಲಯ್ಯ, ಅಗ್ನಿಶಾಮಕ ಠಾಣಾಧಿಕಾರಿ ಬಿ. ಜಯಣ್ಣ, ಮುಖಂಡರಾದ ಕೃಷ್ಣಮೂರ್ತಿ, ಖಾದರ್, ಪಿ.ಸಿ. ಮಹಂತೇಶ ಹಾಗೂ ಅಗ್ನಿಶಾಮಕ ಸಿಬ್ಬಂದಿ, ನಗರಸಭೆ ಕಂದಾಯಾಧಿಕಾರಿ ಈರಮ್ಮ ಹಾಗೂ ನಗರಸಭೆ ಸಿಬ್ಬಂದಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post