ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕೊರೋನಾ ಎರಡನೆಯ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗೃತಿಯಿಂದ ಜೀವನ ಸಾಗಿಸಬೇಕು ಎಂದು ಪಿಎಸ್‌ಐ ಮಹೇಶ ಹೊಸಪೇಟೆ ಹೇಳಿದ್ದಾರೆ.
ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದ್ದ ಕೊರೋನಾ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಕೊರೋನಾ ಸಾಂಕ್ರಾಮಿಕ ರೋಗವು ಕಳೆದ ವರ್ಷ ಸಾಕಷ್ಟು ನಷ್ಟವನ್ನು ಉಂಟು ಮಾಡಿತ್ತು. ಹಾಗೂ ಇದರಿಂದಾಗಿ ಸಾಕಷ್ಟು ಜನರ ಬದುಕು ನಾಶವಾಯಿತು. ನಂತರ ಎಲ್ಲರೂ ಜಾಗೃತರಾಗಿ ಕೊರೋನಾ ಕಡಿಮೆಯಾಗಿತ್ತಾದರೂ, ಮತ್ತೆ ಎರಡನೆಯ ಅಲೆ ಆರಂಭವಾಗಿದೆ. ಈ ಬಾರಿ ಸಾರ್ವಜನಿಕರು ಇನ್ನೂ ಹೆಚ್ಚು ಜಾಗೃತಿಯಿಂದ ಇರಬೇಕುಎ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರು ಮಾಸ್ಕ್ ಹಾಕಲೆಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಎಲ್ಲರೂ ಜಾಗೃತರಾದಾಗ ಮಾತ್ರ ಕೋರೋನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಇಂದು ಮಾಸ್ಕ್ ಇಲ್ಲದವರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸುತ್ತೇವೆ. ನಾಳೆಯಿಂದ ದಂಡ ವಿಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post