ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ : ಆಧುನಿಕ ಜೀವನ ಶೈಲಿ ಮನುಷ್ಯನ ಆರೋಗ್ಯಕ್ಕೆ ಕುತ್ತು ತರುತ್ತದೆ ಎಂದು ಪ್ರಾಂಶುಪಾಲ ಪ್ರೊ.ಎಂ. ಶಿವಲಿಂಗಪ್ಪ ಆತಂಕ ವ್ಯಕ್ತಪಡಿಸಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಮಿತಿ, ಬೆಂಗಳೂರು ನಿಮ್ಹಾನ್ ಸಂಸ್ಥೆ ಹಾಗೂ ಯುವ ಸ್ಪಂದನ ಚಿತ್ರದುರ್ಗ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಸಬಲೀಕರಣ ಕುರಿತ ಚಟವಟಿಕೆ ಆಧಾರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಸುರಕ್ಷತೆ, ಸಂವಹನ, ಲಿಂಗ, ಲೈಂಗಿಕತೆ ಹಾಗೂ ಮಾರ್ಗದರ್ಶನದ ಜತೆಗೆ ಸಾಮಾಜಿಕ ಸಂಬಂಧಗಳು ಹಾಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪದವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಐಕ್ಯೂಎಸಿ ಸಂಚಾಲಕ ಪ್ರೊ. ಎಸ್.ಬಿ. ಶಿವಪ್ರಸಾದ್, ಹದಿಹರೆಯದವರ ಸಮಸ್ಯೆ ಎಂದರೆ ಕೇವಲ ಲೈಂಗಿಕ ಸಮಸ್ಯೆ ಎಂದು ಬಿಂಬಿಸುವ ಸಂಸ್ಕೃತಿ ಜನರಿಂದ ದೂರವಾಗಬೇಕು. ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಸ್ಥಾಪಿಸಿದ ನಿಮ್ಹಾನ್ಸ್ ರಾಜ್ಯದ ಅತ್ಯುತ್ತಮ ಆರೋಗ್ಯ ಕೇಂದ್ರ. ಪರಂಪರೆಯ ಬದುಕನ್ನು ಅರ್ಥ ಮಾಡಿಕೊಂಡು ಯುವಜನರು, ಸಮಾಜದಲ್ಲಿ ಮಾದರಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರು ನಿಮ್ಹಾನ್ಸ್ ಸಂಸ್ಥೆ ಕ್ಷೇತ್ರ ಸಂಪರ್ಕ ಅಧಿಕಾರಿ ಸಲೀಂ, ಏನೆಲ್ಲಾ ಕೌಶಲ್ಯಗಳಿಗಿಂತ ವ್ಯಕ್ತಿಗೆ ಜೀವನ ಕೌಶಲ್ಯ ದೊಡ್ಡದು. ನೈತಿಕ ಮತ್ತು ಸಾಮಾಜಿಕ ಶಿಕ್ಷಣ ಪಡೆದ ನಮ್ಮಂಥವರು ಮೊದಲು ನಮ್ಮನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು ಮತ್ತು ಸಬಲೀಕರಣದ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಪ್ರಾಧ್ಯಾಕರಲ್ಲಿ ಮನವಿ ಮಾಡಿದರು.


ಯುವ ಸ್ಪಂದನದ ಜಿಲ್ಲಾ ಯುವ ಪರಿವರ್ತಕಿ ಎಸ್. ಗೀತಾ ಮಾತನಾಡಿ, ನಾವು ಇಂದು ಪ್ರತಿದಿನ ಅನಾರೋಗ್ಯವನ್ನು ತಂದುಕೊಳ್ಳುತ್ತಿದ್ದೇವೆ. ಕಾಲ ಬದಲಾದಂತೆ ನಾವು ಸಹ ಬದಲಾಗುತ್ತಿದ್ದು ಕೆಲಸದ ಒತ್ತಡದಲ್ಲಿ ಸರಿಯಾದ ಸಮಯಕ್ಕೆ ಊಟ, ನಿದ್ರೆ ಮಾಡದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದರು.
ಚಿತ್ರದುರ್ಗ ಯುವ ಸ್ಪಂದನ ಯುವ ಕೌನ್ಸಿಲರ್ ಮಂಜುನಾಥ್, ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಚಿತ್ತಯ್ಯ ಮಾತನಾಡಿದರು.
ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ, ಪ್ರೊ.ಎಂ.ಮುರಳಿ, ರಸಾಯನ ವಿಜ್ಞಾನ ಸಹಾಯಕ ಪ್ರಾಧ್ಯಾಪಕಿ ಪ್ರೊ.ಜೆ. ಮಾನಸ, ಪ್ರೊ.ಎಚ್.ಎಸ್. ಜಮುನಾರಾಣಿ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















