ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕೊರೋನಾ ವೈರಸ್ ಲೌಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮನೆಯಲ್ಲೆ ಉಳಿದ ಕೂಲಿಕಾರ್ಮಿಕರು, ನಿರ್ಗತಿಕರು ಉಪವಾಸ ಇರಬಾರದೆಂದು ನಗರಸಭೆ ಸದಸ್ಯ ಮಲ್ಲಿಕಾರ್ಜುನ್ ಆಹಾರ್ ಕಿಟ್’ಗಳನ್ನು ಅಭಿಷೇಕ್ ನಗರದ ಪ್ರತಿ ಮನೆಗಳಿಗೆ ಶಾಸಕ ಟಿ.ರಘುಮೂರ್ತಿಯವರಿಂದ ವಿತರಣೆ ಮಾಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ್, ರಮೇಶಗೌಡ, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನಯ್ಯ, ಪಿಎಸ್‌ಐ ರಾಘವೇಂದ್ರ, ಮುಖಂಡ ಹೊನ್ನೂರಪ್ಪ ಇತರರಿದ್ದರು.
ಮುಸ್ಲಿಂ ಸ್ನೇಹ ಬಳಗ
ನಗರದ ಸ್ನೇಹ ಬಳಗ ಮುಸ್ಲಿಂ ಬಾಂಧವರಿಂದ ನಗರದ ಕೂಲಿ ಕಾರ್ಮಿಕರಿಗರ 300 ಆಹಾರ ಕಿಟ್ ಮತ್ತು ಬಾಳೆಹಣ್ಣು, ಈರುಳಿ ಶಾಸಕ ಟಿ. ರಘುಮೂರ್ತಿಯವರ ಮೂಲಕ ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ್, ರಮೇಶಗೌಡ, ಪ್ರಮೋದ್ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನಯ್ಯ, ಜಿ.ಬಿ. ಮುಜೀಬ್ ಇತರರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post