ಚಳ್ಳಕೆರೆ: ಬರಪೀಡಿತ ಪ್ರದೇಶವೆಂದು ಹಣೆಪಟ್ಟಿ ಹಚ್ಚಿಕೊಂಡ ಚಳ್ಳಕೆರೆ ಹಲವು ದಿನಗಳ ಹಿಂದೆ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿಯಲ್ಲೂ ಸಹ ಕಷ್ಟಪಟ್ಟು ನಮ್ಮ ರೈತರು ಅಲ್ಪ ನೀರಿನಲ್ಲಿ ದಾಳಿಂಬೆಯನ್ನು ಉಳಿಸಿಕೊಂಡಿರುವುದು ಪ್ರಶಂಸನೀಯ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಬಳ್ಳಾರಿ ರಸ್ತೆಯ ಚಳ್ಳಕೆರೆಮ್ಮ ದೇವಸ್ಥಾನದ ಆರ್ಶೀವಾದ ಕ್ಯಾಂನ್ವೆಟ್ ಹಾಲ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ದಾಳಿಂಬೆ ಬೆಳೆಗಾರರ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಾಳಿಂಬೆ ಬೆಳೆ ಒಂದು ರೀತಿಯಲ್ಲಿ ಲಾಟರಿ ಇದ್ದ ಹಾಗೆ. ಸಿಕ್ಕರೆ ರೈತನಿಗೆ ಕೈ ತುಂಬ ಇಲ್ಲವಾದರೆ ತಿಪ್ಪೆಗುಂಡಿಗೆ ಹಾಕಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ರಫ್ತು ಮಾಡಿಕೊಳ್ಳುವ ಮೂಲಕ ರೈತ ಬೆಳೆದ ಬೆಳೆಗೆ ಉತ್ತೇಜನ ನೀಡಬೇಕು. ಚಳ್ಳಕೆರೆಯಲ್ಲಿ 1030 ಹೆಕ್ಟರ್ ದಾಳಿಂಬೆ ಬೆಳೆಯುತ್ತಾರೆ. ಜಿಲ್ಲೆಯಲ್ಲಿ 5971 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಹೊಸದುರ್ಗ ಮೊದಲ ಸ್ಥಾನದಲ್ಲಿ ಇದೆ ಎಂದರು.
ತೋಟಗಾರಿಕಾ ಅಧಿಕಾರಿ ರವೀಂದ್ರ ಮಾತನಾಡಿ,ರಫ್ತು ಮಾಡುವುದು ಬೆಳೆ ಗುಣಮಟ್ಟದಾಗಿರಬೇಕು. ವಿದೇಶಿಗಳಿಗೆ ಸಾಗಿಸಬೇಕಾದರೆ ಉತ್ತಮ ಗುಣಮಟ್ಟದಾಗಿದ್ದರೆ ಒಳ್ಳೆಯ ಬೆಲೆ ಸಿಗುತ್ತದೆ. ಆದೇ ರೀತಿಯಲ್ಲಿ ನಾವು ಬೇರೆ ದೇಶಗಳ ಬೆಳೆಗಳನ್ನು ಆಮದು ಮಾಡಿಕೊಳ್ಳುವುದು ಕಲಿಯಬೇಕು. ಆಗ ಮಾತ್ರ ಕೊಡುವುದು ಮತ್ತು ಕೊಂಡುಕೊಳ್ಳುವುದು ಸಾಧ್ಯ. ಆಗಉತ್ತಮ ಬೆಳೆಗೆ ಬೆಲೆ ಸಿಗುತ್ತದೆ ಎಂದರು.
ತಾಪಂ ಸದಸ್ಯ ಗದ್ದುಗೆ ತಿಪ್ಪೇಸ್ವಾಮಿ ಮಾತನಾಡಿ, ರೈತ ಕಳೆದ ನಾಲ್ಕು ವರ್ಷಗಳಲ್ಲಿ ಮಳೆಯಿಲ್ಲದೆ ಕಷ್ಟಗಳನ್ನು ಕಂಡಿದ್ದಾನೆ. ಈಗ ಉತ್ತರ ಮಳೆ ಉತ್ತಮವಾಗಿ ವರುಣನ ಕರುಣೆ ತೋರಿದ್ದರಿಂದ ಜಿಲ್ಲೆಯಾದ್ಯಾಂತ ಮಳೆಯಾಗಿ ನಿಂತು ಹೋದ ಬೋರ್’ವೆಲ್’ನಲ್ಲಿ ಅಲ್ಪ ಪ್ರಮಾಣದ ನೀರು ಕಂಡು ರೈತನಿಗೆ ಕೊಂಚ ಜೀವಕಳೆ ಬಂದಿದೆ ಎಂದರು.
ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯ ಸಮರ್ಥರಾಯ್, ಗದ್ದುಗೆ ತಿಪ್ಪೇಸ್ವಾಮಿ, ಉಮಾ, ತಿಪ್ಪೇಸ್ವಾಮಿ, ನಗರಸಭಾ ಸದಸ್ಯ ರಮೇಶ್ ಗೌಡ, ತೋಟಗಾರಿಕೆ ನಿದೇರ್ಶಕ ರವಿಕುಮಾರ್, ಚಳ್ಳಕೆರೆ ಹಿರಿಯ ತೋಟಗಾರಿಕೆ ನಿರ್ದೇಶಕ ವಿರೂಪಾಕ್ಷಪ್ಪ, ಅಧಿಕಾರಿ ಮಧು, ಶ್ರೀನಿವಾಸ್, ವಿಜಯ್ ಕುಮಾರ್, ಚಂದು, ರಾಘವೇಂದ್ರ, ರಪ್ತುದಾರರಾದ ರಾಮಕೃಷ್ಣ, ರಘುನಂದನ್, ಧೀರಾಜ್, ಜಗದೀಶ್, ಅಪ್ಪಾಜಿ, ಜಗದೀಶ್ ಇತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕರೆ)
















