ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಜೀವವೈವಿಧ್ಯವು ಒಂದು ನೈಸರ್ಗಿಕ ಕೊಡುಗೆ, ಭೂಮಿಯ ಮೇಲೆ ಜೀವಿಗಳು ಅವುಗಳದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಎಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ಪ್ರೊಫೆಸರ್ ಡಾ. ರಮೇಶ ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಆಶ್ರಯದಲ್ಲಿ ಚಿತ್ರದುರ್ಗ ಸಾಮಾಜಿಕ ಅರಣ್ಯ ವಲಯ ಮತ್ತು ಜಿಲ್ಲಾ ಪಂಚಾಯಿತಿ, ತಾಲೂಕು ಸಾಮಾಜಿಕ ವಲಯ ಅರಣ್ಯ ವಿಭಾಗ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟೀಯ ಜೀವ ವೈವಿಧ್ಯ ಜಾಗೃತಿ ಅಭಿಯಾನದಲ್ಲಿ ತಾ.ಪಂ ಆವರಣದಲ್ಲಿ ಸಸಿನೆಡುವ ಮೂಲಕ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜೀವಿಗಳು ನೈಸರ್ಗಿಕವಾಗಿ ಸಮನಾಗಿದ್ದರೆ ಮಾತ್ರ ಪ್ರಕೃತಿಯು ಸಮತೋಲನವಾಗುವುದು. ನಾವು ಪ್ರಕೃತಿಯ ಸಮತೋಲನ ಕಾಪಾಡಬೇಕಾದರೆ ಮರಗಿಡಗಳನ್ನು ಬೆಳಸಿ ಸಂರಕ್ಷಿಸುವ ಮೂಲಕ ಪ್ರಕೃತಿಯನ್ನು ಕಾಪಾಡಬೇಕು ಎಂದರು.
ಉಪನ್ಯಾಸಕ ವಿರೂಪಾಕ್ಷ ಮಾತನಾಡಿ, ಚಳ್ಳಕೆರೆ ಅನೇಕ ಔಷಧೀಯ ಸಸ್ಯಗಳಿಂದ ಕೂಡಿರುವಂತಹ ಪ್ರದೇಶವಾಗಿದ್ದು, ಇಲ್ಲಿನ ಸಸ್ಯಗಳಲ್ಲಿ ಇರುವಂತಹ ಔಷಧೀಯ ಗುಣ ಮಲೆನಾಡಿನಲ್ಲಿ ಇರುವಂತಹ ಗಿಡಮರಗಳಿಗಿಂತ ಅಧಿಕವಾಗಿದೆ. ನಾವು ಪ್ರಕೃತಿಯನ್ನು ಸೃಷ್ಟಿಯಂತೆಯೇ ಬಿಡಬೇಕು. ಆಗ ಮಾತ್ರ ಮನುಷ್ಯ ಉಳಿಯಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಮನುಷ್ಯ ಸಂಪೂರ್ಣ ಅಳಿವಿಗೆ ಕಾರಣವಾಗುತ್ತದೆ ಎಂದರು.
ಇಓ ಪ್ರಕಾಶ್ ಮಾತನಾಡಿ, ಪ್ರತಿ ವ್ಯಕ್ತಿಯ ಪರಿಸರ ಕಾಳಜಿಯನ್ನು ವಹಿಸಬೇಕಾಗುತ್ತದೆ. ಪ್ರಕೃತಿಯು ನಮಗೆ ಅಗಾಧವಾದ ಜೀವಸಂಕುಲವನ್ನು ಕೊಟ್ಟಿದೆ. ಸಂಕುಲವನ್ನು ನಾವು ಇಟ್ಟುಕೊಂಡು ಜೀವನ ನಡೆಸಬೇಕಿದೆ. ಪ್ರಕೃತಿಯಲ್ಲಿ ಪ್ರತಿ ಜೀವಿಯು ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ ಅವಶ್ಯಕತೆಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಚಳ್ಳಕೆರೆ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್. ಬಾಬು, ಸಾಮಾಜಿಕ ಉಪವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಸಾಮಾಜಿಕ ವಲಯ ಅರಣ್ಯ ಸಿಬ್ಬಂದಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post