ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲೂಕಿನಲ್ಲಿ ಬಿದ್ದ ಭಾರಿ ಗಾಳಿ ಮಳೆಯಿಂದ ರೈತರ ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ, ಬಾಳೆ, ತೆಂಗು, ಅಡಿಕೆ ಮುಂತಾದ ಬೆಳೆಗಳು ಬಹುತೇಕ ಹಾಳಾಗಿರುವುದರಿಂದ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ನೇರಲಗುಂಟೆ ಮುಮೈನ ಹಟ್ಟಿ, ಇನ್ನು ಇತರ ಗ್ರಾಮದಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು, ರಂಗಮಂದಿರಗಳು, ವಿದ್ಯುತ್ ಕಂಬಗಳು, ಶಾಲೆ ಕೊಠಡಿಯ ಮೇಲ್ಛಾವಣಿಗಳು ಗಳು ಹಾರಿ ಹೋಗಿದ್ದು, ಹಾನಿಯಾಗಿರುವ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ, ಹಾನಿಯ ಸಂಪೂರ್ಣ ಮಾಹಿತಿಯನ್ನು ಪಡೆದು ನಂತರ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಲಾಗುವುದು ಎಂದರು.

ಸಾರ್ವಜನಿಕರು ಮಳೆ-ಗಾಳಿ ಮುಗಿಯುವವರೆಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಮರಗಳ ಕೆಳಗೆ, ಹಳೆ ಗೋಡೆಗಳ ಹಾಗೂ ವಿದ್ಯುತ್ ಪರಿವರ್ತಕಗಳ ಹತ್ತಿರ ನಿಲ್ಲಬಾರದು. ಈ ಸಂಬಂಧ ಪ್ರತಿ ಪಂಚಾಯಿತಿ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲಾಗುವುದು ಎಂದು ತಿಳಿಸಿದರು.
Also read: ಗೊಂಡ ಸಮಾಜದ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಂದ್ರ ಸಚಿವರಿಗೆ ಶಾಸಕ ಖಾಶೆಂಪುರ್ ಮನವಿ

ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕರು ವಿರೂಪಾಕ್ಷಪ್ಪ, ಉಪತಹಶೀಲ್ದಾರ್ ಚೇತನ್ ಕುಮಾರ್ ಹಾಗೂ ಕೃಷಿ ಅಧಿಕಾರಿಗಳು, ರೈತರು ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















