ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ : ಮೊದೂರು ಸಮೀಪವಿರುವ ಸರ್ಕಾರಿ ಗೋಮಾಳದಲ್ಲಿ ಅರ್ಜಿ ಸಲ್ಲಿಸದೆ ಅಕ್ರಮವಾಗಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು, ಜಾನುವಾರುಗಳ ಮೇಯಲು ಜಾಗವಿಲ್ಲದಂತೆ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ, ಆ ಜಾಗವನ್ನು ಸರ್ಕಾರದ ಸುಪರ್ದಿಗೆ ಪಡೆಯಬೇಕೆಂದು ಮೊದೂರು ಗ್ರಾಮಸ್ಥರು ಶನಿವಾರ ತಹಶೀಲ್ದಾರ್ ಅವರ ಬಳಿ ಕಚೇರಿಯಲ್ಲಿ ಮನವಿ ಮಾಡಿಕೊಂಡರು.
ಗ್ರಾಮದಲ್ಲಿ ಕುರಿ, ಜಾನುವಾರುಗಳ ಸಾಕಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ, ಆದರೆ ಗ್ರಾಮದ ಬಳಿ ಇರುವ ಸರ್ಕಾರಿ ಗೋಮಾಳ ಜಾಗವನ್ನು ಕುರಿ, ಜಾನುವಾರುಗಳ ಮೇಯಲು ಅವಕಾಶ ನೀಡದಂತೆ ಉಳ್ಳವರು ಆ ಗೋಮಾಳ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರೀತಿಸಿದ ತಹಶೀಲ್ದಾರ್ ಎನ್ . ರಘುಮೂರ್ತಿ ಅವರು ಈಗಾಗಲೇ 4 ಎಕರೆ ಮೇಲೆ ಜಮೀನು ಹೊಂದಿರುವಂತವರು ಸರ್ಕಾರಿ ಜಮೀನು ಅಕ್ರಮವಾಗಿ ಉಳುಮೆ ಮಾಡುವಂತಿಲ್ಲ, ಯಾರಾದರೂ 4 ಎಕರೆ ಜಮೀನು ಇದ್ದು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಲಾಗುವುದು. ಮಂಗಳವಾರ ತಾವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ಗ್ರಾಮಸ್ಥರು ಸರ್ ರಾತ್ರೋರಾತ್ರಿ ಟ್ಯಾಕ್ಟರ್ ಮೂಲಕ ಸರ್ಕಾರಿ ಗೋಮಾಳವನ್ನು ಉಳುಮೆ ಮಾಡಿದ್ದಾರೆ ಎಂದರು. ಆಗ ಪರಶುರಾಂಪುರ ಆರ್ ಐ ಅವರಿಗೆ ಸೂಚನೆ ನೀಡಿದ ತಹಶೀಲ್ದಾರ್ ಅವರು ಮಂಗಳವಾರ ತನಕ ಯಾರು ಕೂಡ ಮೊದೂರು ಗೋಮಾಳದಲ್ಲಿ ಉಳುಮೆ ಮಾಡುವಂತಿಲ್ಲ ಎಂದು ಸ್ಥಳಕ್ಕೆ ಹೋಗಿ ಎಚ್ಚರಿಕೆ ನೀಡಿಬನ್ನಿ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಅವರು ಆರ್ ಐ ಅವರಿಗೆ ಸೂಚನೆ ನೀಡಿದರು

ಈವೇಳೆ ಮೊದೂರು ಗ್ರಾಮಸ್ಥರಾದ ಓಬಳೇಶ, ಅಂಜನೇಯ, ಚಿದಾನಂದ,ಪಟೇಲ್ ರಂಗಪ್ಪ,ರವಿಕುಮಾರ್ , ಗುರಯ್ಯ, ನಾಗರಾಜ್, ರಘು, ಶಿವಣ್ಣ ಸೇರಿದಂತೆ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post