ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಪತ್ರಕರ್ತ ಸುರೇಶ್ ಬೆಳಗೆರೆ ಅವರ ತಂದೆ ಸಣ್ಣಪ್ಪ (77) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೇ ಸ್ವಗ್ರಮದ ಬೆಳಗೆರೆ ಕಾವಲ್‌ನಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿದ್ದಾರೆ.
ಜಮೀನಿಗೆ ರಸ್ತೆ ನಿರ್ಮಾಣ ಸಂಬಂಧ ಉಂಟಾಗಿದ್ದ ವಿವಾದ ಹಾಗೂ ವ್ಯಾಜ್ಯದಿಂದ ಇವರು ನೊಂದಿದ್ದರು ಎಂದು ಹೇಳಲಾಗಿದೆ. ಈ ಹಿಂದೆ ತಹಶೀಲ್ದಾರ್ ಅವರಿಗೆ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಇವರ ನಿಧನಕ್ಕೆ ಶಾಸಕ ಟಿ. ರಘುಮೂರ್ತಿ ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post