ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಟ್ಯಾಬ್‌ಗಳು ಪೂರಕವಾಗಲಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಬಿಸಿನೀರು ಮುದಪ್ಪ ಸರ್ಕಾರಿ ಪ್ರೌಢಶಾಲಾಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರಕಾಶ್ ಸ್ಪಾಂಜ್ ಐರನ್, ಪಬ್ಲಿಕ್ ಟಿವಿಮತ್ತು ರೋಟರಿ ಕ್ಲಬ್ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ ಮಾಡಿ ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕೆ ದೇಣಿಗೆ ದೊಡ್ಡ ಮಟ್ಟದ ನೀಡಿದ್ದು, ತಂತ್ರಜ್ಞಾನ ಕೈಗೆಟುಕದ ಮಕ್ಕಳಿಗೆ ಬಹಳ ಉಪಯೋಗ ಆಗಲಿದೆ. ಹಳ್ಳಿಯ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ, ಮಕ್ಕಳ ಏಳಿಗೆಗಾಗಿ ಕೈಗೊಂಡ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಟ್ಯಾಬ್‌ಗಳು ಪೂರಕವಾಗಲಿ. ಸಮಾಜದಲ್ಲಿ ಯಾರಿಗೆಲ್ಲಾ ಕೊಡುಗೆ ನೀಡಲು ಸಾಧ್ಯವೋ ಅವರು ಈ ಅಭಿಯಾನಕ್ಕೆ ಕೈಜೋಡಿಸಬೇಕು. ಶಾಸಕರ ಅನುದಾನದಲ್ಲಿ ತಾವು ಸಹ ಎರಡು ಲಕ್ಷ ಹಣ ಸಹಾಯಧನ ನೀಡಿದ್ದೇನೆ. ವಿದ್ಯಾದಾನ ಕೆಲಸ ಬಹಳ ಪುಣ್ಯದ ಕಾರ್ಯ ಎಂದರು.
ರೋಟರಿ ಕ್ಲಬ್‌ನ ಮಲ್ಲಿಕಾರ್ಜುನ ಮಾತನಾಡಿ, ಕೊರೋನಾ ಕಾಲದಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಹಳ್ಳಿಯ ಸರಕಾರಿ ಬಡಮಕ್ಕಳಿಗೆ ಆನ್ ಲೈನ್ ತರಗತಿಗಳು ಕೈಗೆಟುಕಲಿಲ್ಲ. ಮೊಬೈಲ್, ಟಿವಿ ಇಲ್ಲದ ಸಾಕಷ್ಟು ಕುಟುಂಬಗಳು ನಮ್ಮ ಜಿಲ್ಲೆಯಲ್ಲಿವೆ. ಸಂಕಷ್ಟದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆ ಸಹಯೋಗದ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ನಗರಸಭೆ ಅಧ್ಯಕ್ಷೆ ಸಿ.ಬಿ ಜಯಲಕ್ಷ್ಮಿ, ನಗರಸಭೆ ಸದಸ್ಯ ವೀರಭದ್ರಯ್ಯ, ಪ್ರಕಾಶ್ ಸ್ಪಂಜ್ ಮತ್ತು ಐರನ್ ಪ್ರವೇಟ್ ಲಿಮಿಟೆಡ್‌ನ ರುದ್ರಪ್ಪ, ರೋಟರಿ ಕ್ಲಬ್‌ನ ರವೀಂದ್ರ, ಪಬ್ಲಿಕ್ ಟಿವಿ ಸ್ಥಳೀಯ ಬ್ಯೂರೊ ಮುಖ್ಯಸ್ಥರು, ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಜಿಲ್ಲಾ ಪಂಚಾಯತ್ ಸದಸ್ಯ ರಾಮ ಪ್ರಕಾಶಮೂರ್ತಿ ಮತ್ತು ಅಧಿಕಾರಿಗಳು, ಹೆಗ್ಗೆರೆ ತಾಯಮ್ಮ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಬಿಎಂಜಿಎಚ್‌ಎಸ್ ಮುಖ್ಯಶಿಕ್ಷಕ ಸಂಪತ್ ಕುಮಾರ್, ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post