ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಶುಕ್ರವಾರ ನಗರಸಭೆ ಸಿಬ್ಬಂದಿಯೊಬ್ಬರಿಗೆ ಹಾಗೂ ಕರ್ತವ್ಯ ನಿರತ ಎಎಸ್‘ಐ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಡಿವೈಎಸ್’ಪಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಪಾಸಿಟಿವ್ ಬಂದ ನಗರಸಭೆ ಸಿಬ್ಬಂದಿಯನ್ನು ನಾಯಕನಹಟ್ಟಿಯ ಕೋವಿಡ್19 ಚಿಕಿತ್ಸಾ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ನಗರಸಭೆ ಕಚೇರಿಯನ್ನು ಸೀಲ್ ಡೌನ್ ಮಾಡಿ, ಸ್ಯಾನಿಟೈನ್ ಮಾಡಲಾಗಿದೆ.
ಇನ್ನು, ಡಿವೈಎಸ್’ಪಿ ಕಚೇರಿಯನ್ನೂ ಸಹ ಸೀಲ್ ಡೌನ್ ಮಾಡಲಾಗಿದ್ದು, ಸ್ಯಾನಿಟೈಸ್ ಮಾಡಲಾಗಿದೆ. ಡಿವೈಎಸ್’ಪಿ ಹಾಗೂ ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದ್ದು, ಈ ಕುರಿತಂತೆ ಅಧಿಕೃತವಾಗಿ ಇನ್ನೂ ತಿಳಿದುಬರಬೇಕಿದೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093

















