ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಅವರ ಮೂಲ ಸ್ಥಳವಾದ ಬೆಳಗೆರೆಯಲ್ಲಿ ಶ್ರದ್ಧಾಂಜಲಿ ಹಾಗೂ ನುಡಿನಮನ ಸಲ್ಲಿಸಲಾಯಿತು.
ಶ್ರೀ ಶಾರದಾ ಮಂದಿರದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಶ್ರೀ ಶಾರದಾ ಮಂದಿರ ವಿದ್ಯಾ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಜಂಟಿ ಕಾರ್ಯದರ್ಶಿ ಶ್ರೀಪಾದ ಪೂಜಾರ್, ರವಿ ಬೆಳಗೆರೆಯವರು ಪತ್ರಿಕೋದ್ಯಮ, ಹಾಗೂ ಸಮಾಜೋಪಯೋಗಿ ಕಾರ್ಯಗಳಲ್ಲಿ ಸದಾ ಅತ್ಯುತ್ಸಾಹದಿಂದ ಧೈರ್ಯವಾಗಿ ಮುನ್ನುಗ್ಗುತ್ತಿದ್ದುದು ಮಾದರಿ ಕಾರ್ಯವಾಗಿತ್ತು ಎಂದು ನೆನೆದರು.
ಶ್ರೀ ಶಾರದಾ ಮಂದಿರ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಕಳೆದೆರೆಡು ದಶಕದಲ್ಲಿ ಅವರು ತನ್ನ ನೈತಿಕ ನಿಷ್ಠೆಯ ಪ್ರತೀಕರಾದ ಪೂಜ್ಯ ಬೆಳಗೆರೆ ಕೃಷ್ಣಶಾಸ್ತಿಗಳ ಉದ್ದೇಶದಂತೆ ಅದನ್ನು ಮುನ್ನೆಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಪೂರ್ಣಪ್ರಭೆಯಿಂದ ಪ್ರಜ್ವಲಿಸುತ್ತಿದ್ದ ಸೂರ್ಯ ಮಧ್ಯಾಹ್ನವೇ ಅಸ್ತಂಗತನಾದ ವಿಪರ್ಯಾಸವನ್ನು ಅನುಭವಿಸುವಂತೆ ಮಾಡಿರುವುದು ರವಿಬೆಳಗೆರೆಯವರ ಅಕಾಲಿಕ ಅವಸಾನ, ತಮ್ಮ ಬಹು ಆಯಾಮಿ ಪ್ರತಿಭೆಯಿಂದ ನಾಡಿನ ಅನೇಕ ಸಾಂಸ್ಕೃತಿಕ ವಲಯಗಳನ್ನು ಶ್ರೀಮಂತಗೊಳಿಸಿ ಬೆಳಗಿಸಿದ ಅವರ ಈ ನಿರ್ಗಮನ ಕೇವಲ ನಾಡಿಗಷ್ಟೇ ಅಲ್ಲ ನಮ್ಮಂತಹ ಸಂಸ್ಥೆಗಳಿಗೆ ಆಧಾರಸ್ತಂಭರಾಗಿದ್ದರು. ಅದರಿಂದ ಚೇತರಿಸಿಕೊಳ್ಳಲಾಗದ ಆಘಾತವನ್ನುಂಟು ಮಾಡಿದೆ ಎಂದರು.
ಬೆಳಗೆರೆಯ ಗ್ರಾಪಂ ಮಾಜಿ ಸದಸ್ಯ ಕೆ.ಟಿ. ನಿಜಲಿಂಗಪ್ಪ ರವಿಯವರ ಭಾವಚಿತ್ರಕ್ಕೆ ಹಾರ ಅರ್ಪಿಸಿ ಮಾತನಾಡಿ, ಕರ್ನಾಟಕ, ಮಾತ್ರವಲ್ಲ ದೇಶದಾದ್ಯಂತ ಚಳ್ಳಕೆರೆ ತಾಲೂಕಿನ ಬೆಳಗೆರೆಯ ಕೀರ್ತಿಯನ್ನು ಬೆಳಗಿದ ರವಿಯವರು ವಿಸ್ತರಿಸಿದರು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಹರಿತವಾದ ಬರವಣಿಗೆ, ಎಲ್ಲರೂ ಮೆಚ್ಚುವಂತಹ ಬುದ್ದಿವಂತಿಕೆ ಮತ್ತು ಧೈರ್ಯಶಾಲಿಯಾಗಿ ಅತೀ ಹೆಚ್ಚು ಜ್ಞಾಪಕಶಕ್ತಿ ಹೊಂದಿದ್ದರು. ಆಳುವ ಸರ್ಕಾರಗಳಿಂದ ಬೆಳಗೆರೆ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಸದಾ ಮುಂಚೂಣಿಯಲ್ಲಿದ್ದರು ಎಂದು ನೆನೆದರು.
ಸಂಸ್ಥೆಯ ಸಂಪರ್ಕಾಧಿಕಾರಿ ಕೆ. ರಾಜಣ್ಣ ಮಾತನಾಡಿ, ಬೆಳಗೆರೆ ಶಿಕ್ಷಣ ಸಂಸ್ಥೆಯ ಊರುಗೋಲಾಗಿದ್ದ ರವಿಯವರು ಬೆಳಗೆರೆಯನ್ನು ಬೆಳಕಾಗಿಸಿದ್ದರು. ತಮ್ಮ ಕೃತಿಗಳ ಮೂಲಕ ವ್ಯಕ್ತಿ ಸಮಾಜಕ್ಕೆ ನೀಡಿದ ಧೀಮಂತ ಅವರು. ಹಾಗಾಗಿ ಅವರು ನೀಡಿದ ಮಾರ್ಗದರ್ಶನದಂತೆ ಮುನ್ನಡೆಯುವ ಹೊಣೆ ಅವರನ್ನು ಪ್ರೀತಿಸಿದ ಎಲ್ಲರ ಮೇಲಿದೆ. ಉಪನ್ಯಾಸಕ ರಾಜಶೇಖರ ಕನ್ನಡ ಸಾಹಿತ್ಯ ಕ್ಷೇತ್ರವೂ ಸೇರಿದಂತೆ ಪತ್ರಿಕೋದ್ಯಮ, ಸಿನೆಮಾ, ಸಂಗೀತಾ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರ ಮಾತಿನ ಮೋಡಿಗೆ ಮರುಳಾಗದವರೇ ಇಲ್ಲ ಎಂದರು.
ಸಂಸ್ಥೆಯ ನಿವೃತ್ತ ನೌಕರ ಎಂ.ವಿ. ರಾಜೀವಲೋಚನ ಮಾತನಾಡಿ, ಜಾತ್ಯಾತೀತ ಭಾವನೆ, ಹಠದ ಸ್ವಭಾವದದವರಾಗಿದ್ದ ಅವರು ಬೆಳಗೆರೆಯ ಕೆರೆ, ಬಾವಿ ಹಳ್ಳ ಕೊಳ್ಳಗಳಲ್ಲೇ ಈಜಾಡಿ ಇಲ್ಲಿಯೇ ತಮ್ಮ ದಿನಗಳನ್ನು ಕಳೆದಿದ್ದರು ಎಂದರು.
ಬಿಎನ್‌ಪುರ ದೇವರಾಜು ಮಾತನಾಡಿ, ಬೆಳಗೆರೆಯ ಕೃಷ್ಣಶಾಸ್ತಿ, ರವಿಬೆಳಗೆರೆ ಅವರ ಪ್ರತಿಮೆಗಳನ್ನು ಬೆಳಗೆರೆಯ ಶಾರದಾ ಮಂದಿರದ ಆವರಣದಲ್ಲೇ ನಿರ್ಮಾಣ ಮಾಡಲು ಅವರ ಅಭಿಮಾನಿಗಳಾದ ನಾವು ಮನಸ್ಸು ಮಾಡಿದ್ದೇವೆ ಎಂದು ವೇದಿಕೆಯಲ್ಲೇ ಹಣಕಾಸಿನ ನೆರವು ನೀಡಲು ಭರವಸೆ ನೀಡಿದರು.
ನುಡಿನಮನದಲ್ಲಿ ಶಿಕ್ಷಕರಾದ ಒ. ಚಿತ್ತಯ್ಯ, ಚಿದಾನಂದ, ಕೆ. ಚಂದ್ರಣ್ಣ, ಪತ್ರಕರ್ತ ಮಂಜುನಾಥ, ಎನ್.ಆರ್. ಕೋಡಪ್ಪ, ವೆಂಕಟಪ್ಪ, ರಂಗನಾಥ, ಗಿರಿಸ್ವಾಮಿ, ಸುರೇಶ ಬೆಳಗೆರೆ, ತಾಪಂ ನೌಕರ ಶ್ರೀನಿವಾಸ, ಉಪನ್ಯಾಸಕ ವೆಂಕಟರಮಣ, ಮಾತನಾಡಿ ನುಡಿನಮನ ಸಲ್ಲಿಸಿದರು.
ಸಂಸ್ಥೆಯ ನಿವೃತ್ತ ನೌಕರ ತಿಪ್ಪೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಚಿತ್ರಾ ಅವರು ರವಿ ಬೆಳಗೆರೆ ಅವರ ಮೆಚ್ಚಿನ ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಡಿದರು. ಪ್ರವೀಣ ಬೆಳಗೆರೆ ಎಂಬ ಯುವಕ ರವಿ ಬೆಳಗೆರೆಯ ಕುರಿತ ಬೆಳಗೆರೆಯ ಬೆಳಗು ಕವನ ವಾಚಿಸಿದರು.
ತಮ್ಮ ಬಾಲ್ಯದಿಂದ ಪ್ರೀತಿಸಿದ ಈ ಭಾಗದ ನೆಲವು ಅವರನ್ನು ಪ್ರೀತಿಸಿದ ಆರಾಧಿಸಿದ ಅನೇಕ ಜೀವಗಳಿಗೆ ಆತ್ಮೀಯರಾದವರು. ಅತಂಹ ನಾವೆಲ್ಲಾ ಇಂದು ಅವರಿಗೆ ಸಲ್ಲಿಸಬಹುದಾದ ಗೌರವವೆಂದರೆ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂಕಲ್ಪ ಮಾಡುವುದು ಅದಕ್ಕೆ ವೇದಿಕೆಯಾಗಲಿ ಎಂಬ ಹಾರೈಕೆಯನ್ನು ನೆರೆದಿದ್ದವರು ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಿದರು.
ಪ್ರಾಚಾರ್ಯೆ ಸರೋಜಮ್ಮ, ಉಪನ್ಯಾಸಕ ರಾಜಶೇಖರ, ಬಿಎನ್‌ಪುರ ದೇವರಾಜು ಶಿಕ್ಷಕರಾದ ಒ ಚಿತ್ತಯ್ಯ, ಚಿದಾನಂದ, ಕೆ. ಚಂದ್ರಣ್ಣ, ಪತ್ರಕರ್ತ ಮಂಜುನಾಥ, ಎನ್.ಆರ್. ಕೋಡಪ್ಪ, ವೆಂಕಟಪ್ಪ, ರಂಗನಾಥ, ಗಿರಿಸ್ವಾಮಿ, ಸುರೇಶ ಬೆಳಗೆರೆ, ತಾಪಂ ನೌಕರ ಶ್ರೀನಿವಾಸ, ಉಪನ್ಯಾಸಕ ವೆಂಕಟರಮಣ, ಮಾತನಾಡಿ ನುಡಿನಮನ ಸಲ್ಲಿಸಿದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post