ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕ್ಷಯ ರೋಗಕ್ಕೆ ಸಮಾರು ನೂರು ವರ್ಷಗಳ ಇತಿಹಾಸವಿದೆ. ಇದು ಸಂಪೂರ್ಣವಾಗಿ ಗುಣಪಡಿಸುಬಹುದಾದ ಕಾಯಿಲೆಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಕ್ಷಯರೋಗ ನಿರ್ಮಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷಯ ರೋಗವು ಮಾರಕ ರೋಗವಾಗಿದ್ದು ದೇಶದಲ್ಲಿ ಕ್ಷಯರೋಗ ದಿಂದ ಸಾವಿರಾರು ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ರೋಗಿಯೊಬ್ಬ ಕೆಮ್ಮಿದಾಗ ಕಫದಲ್ಲಿರುವ ರೋಗಾಣುವಿನಿಂದ ಈ ರೋಗ ಹರಡುತ್ತದೆ. ಕಾಯಿಲೆ ಇರುವವರು ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ತುಂತುರು ಹನಿಗಳ ಮೂಲಕ ಬೇರೊಬ್ಬ ವ್ಯಕ್ತಿಗೆ ರೋಗ ಹರಡಲು ಕಾರಣವಾಗುತ್ತದೆ. ಹೀಗಾಗಿ ಇದು ಗಾಳಿಯ ಮೂಲಕವೂ ಹರಡುತ್ತವೆ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಕ್ಷಯರೋಗ ಸಂಪೂರ್ಣ ನಿರ್ಮೂಲನೆಯಾಗಬೇಕು. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಬಂದರೆ ರಾತ್ರಿ ವೇಳೆ ವಿಪರೀತ ಜ್ವರ ಕಫದಲ್ಲಿ ರಕ್ತ ಬರುವುದು, ತೂಕ ಇಳಿಕೆಯಾಗುವುದು, ಹಸಿವಾಗದೆ ಇರುವುದು ಕಂಡುಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕು. ಕ್ಷಯರೋಗ ನಿರ್ಮಾಲನೆ ಹೇಳಿದರೆ ಆಚರಿಸಿದೆ ಸಾಲದು ಸಂಪೂರ್ಣ ನಿರ್ಣಯವಾಗಬೇಕು ಎಂದರು.
ತಾಲೂಕು ಸರ್ಕಾರಿ ವೈದ್ಯಾಧಿಕಾರಿ ಪ್ರೇಮಸುಧ ಮಾತನಾಡಿ, ಕೊರೋನಾಗಿಂತ ದೊಡ್ಡದಾದ ಕಾಯಿಲೆ ಈ ಬಹಳ ಬೇಗನೆ ಹರಡುತ್ತದೆ. ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗಲಿಸಬಹುದು. ಇದು ಸಾಮಾನ್ಯವಾಗಿ 15ರಿಂದ 45 ವರ್ಷದೊಳಗಿನವರಿಗೆ ಹೆಚ್ಚಾಗಿ ತಗಲುತ್ತವೆ. ಕ್ಷಯರೋಗದ ಪ್ರಮುಖ ಲಕ್ಷಣಗಳು- ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಅಶಕ್ತತೆ, ಕಫದಲ್ಲಿ ರಕ್ತ, ರಾತ್ರಿಯಲ್ಲಿ ಬೆವರು, ಎದೆನೋವು, ಹಸಿವಾಗದಿರುವುದು. ಎಚ್‌ಐವಿ, ಏಡ್ಸ್ ಮತ್ತು ಮಧುಮೇಹ ರೋಗಿಗಳಿಗೂ ಬೇಗನೇ ಸೋಂಕು ತಗಲುವ ಸಾಧ್ಯತೆ ಹೆಚ್ಚಿವೆ. ಹಲವು ಕ್ರಮಗಳಿಂದ ರೋಗ ಹತೋಟಿಗೆ ತರಬಹುದು ಎಂದರು.
ಆರೋಗ್ಯ ಅಧಿಕಾರಿ ಕುದಾಪುರ ತಿಪ್ಪೇಸ್ವಾಮಿ, ತಾಲೂಕು ಹಿರಿಯ ಚಿಕಿತ್ಸಾ ಮೇಲ್ವಿಚಾರಕ ರಾಘವೇಂದ್ರ ಮಾತನಾಡಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಹನುಮಕ್ಕ ಜಯಣ್ಣ, ವೈದ್ಯ ಡಾ.ಮುಸ್ತಪ್ಪ ಮಹಂತೇಶ, ಮುಖಂಡ ಕೃಷ್ಣಮೂರ್ತಿ, ಜಯಣ್ಣ, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post