ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಖಾಸಗಿ ವೈದ್ಯರೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದರೂ ಸಹ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಘಟನೆ ನಗರದಲ್ಲಿ ನಡೆದಿದೆ.
ಶಾಂತಿನಗರದ ಖಾಸಗಿ ಕ್ಲಿನಿಕ್ ವೈದ್ಯರೊಬ್ಬರು ಮಂಗಳವಾರ ಕೋವಿಡ್ ತಪಾಸಣೆ ಮಾಡಿಸಿದ್ದು ಬುಧವಾರ ಬೆಳಗ್ಗೆ 7 ಗಂಟೆಗೆ ಕೋವಿಡ್ ದೃಢವಾಗಿದೆ. ಆದರೂ ಕೂಡ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಕಂಡ ಸಾರ್ವಜನಿಕರ ಮಾಹಿತಿ ಮೇರೆಗೆ ಇಂದು ವೈದ್ಯರನ್ನು ಹೊಂ ಐಸೋಲೇಷನ್’ಗೆ ಸೇರಿಸಿ, ಆಸ್ಪತ್ರೆಯನ್ನು ಶೀಲ್ ಡೌನ್ ಮಾಡಿದ್ದಾರೆ.
ಆರೋಗ್ಯ ಇಲಾಖೆ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಎನ್. ರಘುಮೂರ್ತಿ ಅವರು ವೈದ್ಯರನ್ನು ತರಾಟೆ ತೆಗೆದುಕೊಂಡರು. ಕೋವಿಡ್ ಸೋಂಕು ದೃಢವಾಗಿದರೂ ಯಾಕೆ ಆಸ್ಪತ್ರೆ ಮುಚ್ಚಿಲ್ಲ. ಇದರಿಂದ ತಾಲೂಕಿನಾದ್ಯಂತ ಸೋಂಕು ಹರಡಲು ನೀವೇ ಕಾರಣ ಎಂದು ಕಿಡಿ ಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯ, ಸೋಂಕಿನ ಯಾವುದೇ ಲಕ್ಷಣ ಇಲ್ಲದ ಕಾರಣ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ ಎಂದರು.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅವರು, ನಗರಸಭೆ ಅಧಿಕಾರಿಗಳು ದೂರವಾಣಿ ಮೂಲಕ ಕರೆ ನೀಡಿ ಆಸ್ಪತ್ರೆಗೆ ಸ್ಯಾನಿಟೈಸ್ ಮಾಡಿಸಿ, ಸೀಲ್’ಡೌನ್ ಮಾಡಿಸಿ. ಬೆಳಗಿನಿಂದ ಚಿಕಿತ್ಸೆ ನೀಡಿದ ಪ್ರಾಥಮಿಕ ಸಂಪರ್ಕ ಹಾಗೂ ಸೆಕಂಡರಿ ಕಾಂಟೆಕ್ಟ್ ಇರುವ ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಆರೋಗ್ಯ ತಪಾಸಣೆಗೊಳಿಸಿ ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















