ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ದೊಡ್ಡೇರಿ ರಸ್ತೆಯ ಆದರ್ಶ ಶಾಲೆಯ ಸಮೀಪ ಭತ್ತ ಕಟಾವು ಮಾಡುವು ಯಂತ್ರ ಸುಟ್ಟ ಕರಕಲಾಗಿದೆ.
ತಮಿಳುನಾಡಿನ ಮಾಲೀಕರಿಗೆ ಸೇರಿದ ಭತ್ತ ಕಟಾವು ಮಾಡುವ ಯಂತ್ರ ಟೈರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಬಿಸಿಗೆ ಯಂತ್ರದ ಎಲ್ಲಾ ಟೈರ್ ಹೊತ್ತಿ ಉರಿದಿದೆ.
ಅಗ್ನಿಯ ಶಾಮಕದಳ ಬರುವ ಸಮಯಕ್ಕೆ ಟೈರ್ ಭಸ್ಮವಾಗಿದ್ದು ಯಂತ್ರದ ಭಾಗಗಳು ಸುಟ್ಟಿದೆ. ಬೆಂಕಿ ಬಿಸಿಗೆ ಯಂತ್ರದ ಗಾಜುಗಳು ಸಹ ಪುಡಿಪುಡಿಯಾಗಿದೆ. ಟೈರ್ ಸ್ಪೋಟಗೊಂಡ ತಕ್ಷಣ ಚಾಲಕ ಅಪಘಾತದಿಂದ ಪಾರಾಗಿದ್ದು ಯಾವುದೇ ಪ್ರಾಣಹಾನಿಯಾಗಲ್ಲ ಸ್ಥಳಕ್ಕೆ ಪಿಎಸ್’ಐ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post