ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಚಳ್ಳಕೆರೆ ತಾಲೂಕು ನಾಯಕ ನೌಕರರ ಸಂಘದ ಅಧ್ಯಕ್ಷ ತೆರವಿನಿಂದಾದ ಸ್ಥಾನಕ್ಕೆ ಮುಖ್ಯಶಿಕ್ಷಕರಾದ ಜಿ.ಟಿ. ವೀರಭದ್ರಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ನಾಯಕ ನೌಕರರ ಸಂಘದ ಕಾರ್ಯದರ್ಶಿ ಸಿ. ಗುರುಸ್ವಾಮಿ ಹೇಳಿದರು.
ನಗರದ ವಿಶ್ವಭಾರತಿ ಪ್ರೌಢಶಾಲೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ನಾಯಕ ನೌಕರರು ಸಂಘ ಹಾಗೂ ವಿವಿಧ ಸ್ಥಳೀಯ ಸಂಘಗಳಿಂದ ಹಮ್ಮಿಕೊಂಡಿದ್ದ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ತಾಲೂಕು ನಾಯಕ ನೌಕರರ ಸಂಘದ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಯಕ ನೌಕರರ ಸಮುದಾಯದಲ್ಲಿ ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದ ತಾಲೂಕು ನಾಯಕ ನೌಕರರ ಸ್ಥಾನಕ್ಕೆ ಒಂದು ವರ್ಷ ಕಳೆದಿದೆ. ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯವರೆಗೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರಲಿಲ್ಲ. ನಾಯಕ ನೌಕರರ ಸಂಘದ ಸರ್ವಸದ್ಯಸರು ಸೇರಿ ಟಿ. ವೀರಭದ್ರಪ್ಪ ಅವರನ್ನು ತಾಲೂಕು ನಾಯಕ ನೌಕರರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ನಾಯಕ ನೌಕರರ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯುವ ಶಕ್ತಿ ಅವರಿಗಿದ್ದು, ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ಭರವಸೆಯಿದೆ ಎಂದರು.
ಎಲ್.ಐ.ಸಿ ಪ್ರತಿನಿಧಿ ದುರ್ಗಾವರ ರಂಗಸ್ವಾಮಿ ಮಾತನಾಡಿ, ಪ್ರತಿಯೊಂದು ಸಮುದಾಯದ ಜೋತೆಗೆ ಅವಿನಾಭಾವ ಸಂಬಂಧದ ಹೊಂದಿರುವ ವೀರಭದ್ರಪ್ಪ, ಎಲ್ಲರ ಜೋತೆಗೆ ಸ್ನೇಹದಿಂದ ಶಿಕ್ಷಣ ಕೊಡುವುದರ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಾಯಕತ್ವ ಗುಣವನ್ನು ಹೊಂದಿದ್ದು, ನಾಯಕ ನೌಕರರ ಸಂಘಕ್ಕೆ ಅಧ್ಯಕ್ಷರಾಗಿರುವುದು ಸಂತಸದ ವಿಷಂಯ ಎಂದರು.
ತಾಲೂಕು ನಾಯಕ ನೌಕರರ ಸಂಘದ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಟಿ. ವೀರಭದ್ರಪ್ಪ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮಾಜ ಸೇವೆ ಮಾಡುವ ಉದ್ದೇಶ ನಮ್ಮ ಹಿರಿಯರು ಹಾಕಿ ಕೊಟ್ಡ ಬುನಾದಿಯಂತೆ ನಗರದ ಎಲ್ಲಾ ಸಮುದಾಯದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿ ಸೇವೆ ಮಾಡಲು ಸ್ಪೂರ್ತಿ ನಮ್ಮ ತಂದೆಯವರು. ಅವರ ಆಶಯದಂತೆ ಕಾರ್ಯನಿರ್ವಹಿಸುತ್ತಿದ್ದು ಹೆಚ್ಚಿನ ಜವಾಬ್ದಾರಿ ಹೊಂದಿದ್ದು, ನಾಯಕ ನೌಕರರ ಸಂಘದ ಅಧ್ಯಕ್ಷರಾಗಿ ಯಾವುದೇ ಅಡ್ಡಿ ಆಂತಕವಿಲ್ಲದೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಆಯ್ಕೆ ಮಾಡಿದ ಸರ್ವರಿಗೂ ನಮಸ್ಕಾರಗಳು. ಎಲ್ಲಾರ ಆಶಯದಂತೆ ನಾಯಕ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ವಹಿಸುತ್ತೇನೆ. ನೌಕರರು ಸಮಸ್ಯೆಗಳಿದ್ದರೆ ನೇರವಾಗಿ ಬಂದರೆ ನೌಕರರ ಜೊತೆಗೆ ಎಲ್ಲಾ ನೌಕರರ ಶ್ರೇಯಾ ಬದ್ದನಾಗಿ ದುಡಿಯುತ್ತೇನೆ ಎಂದರು.
ಈ ಸಮಯದಲ್ಲಿ ತಾಲೂಕು ನಾಯಕ ನೌಕರರ ಸಂಘದ ಸದಸ್ಯ ಹಾಗೂ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಸಿ.ಟಿ. ವೀರೇಶ್, ಸದಸ್ಯ ನಾಗರಾಜ್, ನಗರಸಭೆ ಮಾಜಿ ಸದಸ್ಯ ಹಾಗೂ ವಿಶ್ವಕರ್ಮ ಸಂಘದ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್, ಕೆ.ಜಿ.ಬಿ. ಮುಜೀಬ್, ವಿವಿಧ ಸಂಘ ಸಂಸ್ಥೆಗಳು ಸದಸ್ಯರಾದ ಗೋಪನಹಳ್ಳಿ, ಚಿದಾನಂದ, ಬಾಷಣ್ಣ, ಮಲ್ಲಿಕಾರ್ಜುನ್, ವೆಂಕಟೇಶ, ನಾಗೇಶ, ಸಿಪಿ. ರಂಗನಾಥ, ಬೊಮ್ಮಲಿಂಗಪ್ಪ, ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post