ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ವಾಲ್ಮೀಕಿ ಸಮುದಾಯದ ಜನಪ್ರತಿನಿಧಿಗಳನ್ನು ನಿಂಧಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಿಡಿಗೇಡಿಯನ್ನು ಬಂಧಿಸುವಂತೆ ಸಮುದಾಯದ ಮುಖಂಡರು ವಾಲ್ಮೀಕಿ ವೃತ್ತದಲ್ಲಿ ಧರಣಿ ನಡೆಸಿ, ಡಿವೈಎಸ್‌ಪಿ ಕೆ.ವಿ. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ವಾಲ್ಮೀಕಿ ಸಮುದಾಯ ಸಚಿವರಾದ ಬಿ. ಶ್ರೀರಾಮುಲು ಹಾಗು ಶಾಸಕ ಟಿ. ರಘುಮೂರ್ತಿ ಅವರನ್ನು ಅವಾಚ್ಯಶಬ್ದಗಳಿಂದ ನಿಂದಿಸಿ, ಸಾಮಾಜಿಕಜಾಲತಾಣದಲ್ಲಿ ಹರಿಬಿಟ್ಟರುವ ಕಿಡಿಗೇಡಿಯನ್ನು ಬಂಧಿಸುವಂತೆ ಹಾಗೂ ಈ ಕುರಿತು ಪ್ರಕರಣ ದಾಖಲಿಸಲು ಠಾಣೆಗೆ ಹೋದ ಸಮುದಾಯ ಮುಖಂಡರಿಗೆ ಸ್ಪಂಧಿಸದ ಪಿಎಸ್‌ಐ ಮಹೇಶ್ ಗೌಡ ಕ್ಷೆಮೆಯಾಚನೆ ಮಾಡುವಂತೆ ಪಟ್ಟುಹಿಡಿದು ಘೋಷಣೆಗಳು ಕೂಗಿ ಪ್ರತಿಭಟಸಿದರು.
ವಾಲ್ಮೀಕಿ ಸಮುದಾಯ ಸಚಿವರಾದ ಬಿ. ಶ್ರೀರಾಮುಲು ಹಾಗು ಶಾಸಕ ಟಿ. ರಘುಮೂರ್ತಿ ಅವರನ್ನು ಅವಾಚ್ಯಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ವಾಲ್ಮೀಕಿ ಸಮುದಾಯವನ್ನು ಅಮಾನಿಸಿದಂತೆಯಾಗಿದೆ. ಇದರಿಂದ ಸ ಸಮುದಾಯತ ತಲೆ ತಗ್ಗಿಸಬೇಕಾಗಿದೆ. ವಾಲ್ಮೀಕಿ ಸಮುದಾಯದ ಜನಪ್ರತಿನಿಧಿಗಳ ಮೇಲೆ ನಿಂದಿಸಿರುವ ಕಿಡಿಗೇಡಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸಮುದಾಯದ ಮುಖಂಡರು ಬೀಡಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದರು.
ಮನವಿ ಸ್ವೀಕರಿಸಿ ಮಾತನಾಡಿ, ಡಿವೈಎಸ್‌ಪಿ ಕೆ.ವಿ. ಶ್ರೀಧರ್ ವಾಲ್ಮೀಕಿ ಸಮುದಾಯದ ಮೇಲೆ ಅವಾಚ್ಯಶಬ್ದಗಳಿಂದ ನಿಂಧಿಸಿದ ವ್ಯಕ್ತಿಯನ್ನು ಬಂಧಿಸಿ ಕಾನೂನೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಈ ವೇಳೆ ಸಿಪಿಐ ಜೆ.ಎಸ್. ತಿಪ್ಪೇಸ್ವಾಮಿ, ಸಮುದಾಯದ ಮುಖಂಡರಗಳಾಧ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗೌಡ, ಸದಸ್ಯರಾದ ಆರ್. ರುದ್ರನಾಯಕ, ಶ್ರೀನಿವಾಸ್, ಹೆಚ್. ವಿರೂಪಾಕ್ಷಿ, ವಕೀಲರಾದ ಅಶ್ವಥ್ ನಾಯಕ, ಟಿ.ಜೆ, ವೆಂಕಟೇಶ್, ಕೆ. ಶಿವಲಿಂಗಪ್ಪ, ಚೇತನಕುಮಾರ್, ಟಿ.ಜೆ. ತಿಪ್ಪೇಸ್ವಾಮಿ, ರಾಜಣ್ಗ, ಸುರೇಶ್, ಮಹಿಳಾಮುಖಂಡರಾದ ಸ್ವಪ್ನ ಸೇರಿದಂತೆ ಇತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post