ಚಳ್ಳಕೆರೆ: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಇಲ್ಲಿನ ಅಜ್ಜನ ಗುಡಿಯಲ್ಲಿ ಶಾಸಕ ಟಿ. ರಘುಮೂರ್ತಿ ಹಾಗೂ ಬೆಂಬಲಿಗರಿಂದ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ್ ಅಜ್ಜನ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರತಿ ಸೋಮವಾರ ಅನ್ನಸಂತರ್ಪಣೆ ಏರ್ಪಡಿಸುತ್ತಿದ್ದು, ಶಾಸಕ ಟಿ. ರಘುಮೂರ್ತಿ ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬು ರೆಡ್ಡಿ, ನಗರಸಭೆ ಸದಸ್ಯರಾದ ವೈ. ಪ್ರಕಾಶ, ಮಲ್ಲಿಕಾರ್ಜುನ , ಬಿ.ಟಿ. ರಮೇಶ, ಮುಖಂಡರಾದ ದಳವಾಯಿ ಮೂರ್ತಿ, ಬೋರಣ್ಣ, ಅಂಜನಪ್ಪ ಮುಖಂಡರು, ಸೂರನ ಅಗಲ ಮಲ್ಲಿಕಾರ್ಜುನ ಪೂಜಾರಿ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093, 94487 22200
Discussion about this post