ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಅಗ್ರಗಣ್ಯ ಮಹಾನ್ ನಾಯಕ ಸುಭಾಷ್ ಚಂದ್ರಬೋಸ್ ಒಬ್ಬರು. ಸ್ವಾಮಿ ವಿವೇಕಾನಂದರ ಆದರ್ಶ, ಜೀವನದ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ ಸ್ವಾತಂತ್ರ್ಯ ಅಮರ ಪ್ರೇಮಿ ಹಾಗೂ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ವೀರ ಮೇಧಾವಿ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ಸುರಕ್ಷಾ ಪಾಲಿಕ್ಲಿನಿಕ್ ಮತ್ತು ನೇತಾಜಿ ಸ್ನೇಹ ಬಳಗದ ವತಿಯಿಂದ ನಡೆದ ಸುಭಾಷ್ ಚಂದ್ರ ಬೋಸ್ ಮತ್ತು ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಮಯದಲ್ಲಿ ನಗರಸಭೆ ಅಧ್ಯಕ್ಷರಾದ ಸುಮಕ್ಕ, ಉಪಾಧ್ಯಕ್ಷರಾದ ಮಂಜುಳಾ ಪ್ರಸನ್ನಕುಮಾರ, ನಗರಸಭಾ ಸದಸ್ಯರುಗಳಾದ ಸುಮಕ್ಕ ಬರಮಯ್ಯ , ಸುಜಾತ ಪಾಲಯ್ಯ ಮತ್ತು ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಮುಖಂಡರಾದ ಪ್ರಸನ್ನಕುಮಾರ್ ದೊಡ್ಡರಂಗಪ್ಪ, ಗಿರಿಯಪ್ಪ ಅಶೋಕ ಕುಮಾರ, ನೇತಾಜಿ ಸ್ನೇಹಬಳಗದ ಪ್ರಸನ್ನಕುಮಾರ್, ಪರಿದ್ ಖಾನ್ ಮತ್ತು ವೈದ್ಯಾಧಿಕಾರಿಗಳು ತಿಪ್ಪಮ್ಮ, ರಕ್ಷ ಸಮಿತಿಯ ಮಾಜಿ ಸದಸ್ಯೆ ಭಾಗ್ಯಮ್ಮ, ಇನ್ನಿತರರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post