ಚಳ್ಳಕೆರೆ: ವನ್ಯಪ್ರಾಣಿ ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದ ಇಬ್ಬರನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಾಲೂಕಿನ ಗೊರ್ಲಕಟ್ಟೆ ಗ್ರಾಮದ ಜಗಲೂರಜ್ಜ ದೇವಸ್ಥಾನದ ಹತ್ತಿರ ವನ್ಯಜೀವಿ ಕೃಷ್ಣ ಮೃಗವನ್ನು ಬೇಟೆಯಾಡಿ ಕೊಂದು, ಅದರ ಮಾಂಸದೂಟ ಮಾಡುತ್ತಿದ್ದ ದೊಡ್ಡಬೋರಯ್ಯ(28) ಮತ್ತು ರತ್ನಗಿರಿ ಗ್ರಾಮದ ಬೋರಯ್ಯ(39) ಎಂಬುವವರನ್ನು ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಎಸ್. ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧಕ್ಕೆ ಅವರನ್ನು ವಹಿಸಲಾಗದೆ. ಬಂಧಿತರಿಂದ ಕೃಷ್ಣ ಮೃಗದ ಕೊಂಬು ಚರ್ಮ, ಅಡುಗೆಗೆ ಬಳಸಿದ್ದ ಪಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಪವಲಯ ಅರಣ್ಯ ಅಧಿಕಾರಿ ವಸಂತಕುಮಾರ್, ಅರಣ್ಯ ರಕ್ಷಕರಾದ ಇಮಾಮ್ ಹುಸೇನ್ ಹಾಗೂ ಅರಣ್ಯ ಸಿಬಂದ್ದಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post