ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ದೇಶದಲ್ಲಿ ಸೈನಿಕರು ಕಾರ್ಯ ನಿರ್ವಹಿಸುವಂತೆ ಕೊರೋನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ತನ್ನನ್ನ ತಾನು ರಕ್ಷಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಹಾಯಕಿಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸಹ ಸೈನಿಕರೆ ಎಂದು ಮಾದಾರ ಚನ್ನಸ್ವಾಮೀಜಿ ಹೇಳಿದರು.
ಚಳ್ಳಕೆರೆ ಶಾಸಕ ರಘುಮೂರ್ತಿ ವತಿಯಿಂದ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಅಂಗನವಾಡಿ ಮತ್ತು ಆಶಾ ಕಾರ್ತಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಣೆ ಮಾಡಿ ಅವರು ಮಾತನಾಡಿ, ಕೊರೋನಾ ಪ್ರತಿಯೊಬ್ಬರಿಗೂ ಹಲವು ಪಾಠ ಕಲಿಸಿದೆ. ಈಗಾಗಲೇ ಹಲವರು ತಮ್ಮ ತಂದೆ-ತಾಯಿ, ಅಕ್ಕ-ತಮ್ಮ ಬಂಧುಗಳನ್ನು ಕಳೆದುಕೊಂಡಿದ್ದಾರೆ. ಬರುವ ದಿನಗಳಗಳಲಿಯೂ ಸಹ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೊರೋನ ಕಷ್ಟದಲ್ಲೂ ಕಾರ್ಯನಿರ್ವಹಿಸುವ ವಾರಿಯರ್ಸಗಳಿಗೆ ಶಾಸಕರು ಕಳೆದ ಬಾರಿ ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸಿದ್ದರು. ಈ ಬಾರಿಯ ಸಹ ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ತೋರಿಸಿದ್ದಾರೆ ಎಂದು ಹೇಳಿದರು.
ಶಾಸಕ ರಘುಮೂರ್ತಿ ಮಾತನಾಡಿ, ಪತ್ರಿಯೊಬ್ಬರಿಗೂ ಅವರದೇ ಆದ ಜವಾಬ್ದಾರಿಗಳಿರುತ್ತವೆ. ಅಂಗನವಾಡಿಗೆ ಕಳುಹಿಸಿದ ಮಕ್ಕಳನ್ನು ತಮ್ಮ ಮಕ್ಕಳಂತೆ ಜವಾಬ್ದಾರಿ ಯಿಂದ ನೋಡಿಕೊಂಡು ಮತ್ತೆ ಪೋಷಕರಿಗೆ ಒಪ್ಪಿಸುವಂತಹ ಕಾರ್ಯ ಮಾಡುವ ಅಂಗನವಾಡಿ ಕಾರ್ಯಕರ್ತರ ಸೇವೆ ಉತ್ತಮವಾದದು. ಗಡಿಯಲ್ಲಿ ಸೈನಿಕ ಕಾರ್ಯನಿರ್ವಹಿಸುವಂತೆ ಕೊರೋನಾ ವಾರಿಯರ್ಸ್‌ಗಳಾದ ನೀವು ಸಹ ದೇಶದ ಜನ ರಕ್ಷಿಸುವ ಸೈನಿಕರೆ. ಕೊರೋನಾ ಭಯದಲ್ಲೂ ಎದೆಗುಂದದೆ ಜನರ ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿದ್ದೀರಿ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ, ಉಪಾಧ್ಯಕ್ಷೆ ಜೈತುನ್ಬಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಪ್ರಕಾಶ್, ನಗರಸಭೆ ಪೌರಯುಕ್ತ ಪಿ.ಪಾಲಯ್ಯ, ಟಿಎಚ್‌ಓ ಪ್ರೇಮಸುಧ, ಸಿಡಿಪಿಓ ಮೊಹನ್ ಕುಮಾರಿ, ಆರೋಗ್ಯ ಅಧಿಕಾರಿ ತಿಪ್ಪೇಸ್ವಾಮಿ, ಕಾಂಗ್ರೇಸ್ ಮುಖಂಡರಾದ ಶಿವಕುಮಾರ್ ಸ್ವಾಮಿ, ನಾಗರಾಜ್ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post