ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ವ್ಯಕ್ತಿ ಎಂದರೆ ಸ್ವಾಮಿವಿವೇಕಾನಂದರು. 36 ವರ್ಷದಲ್ಲಿ 130 ದೇಶ ಸುತ್ತಿ ಭಾರತೀಯ ಸಂಸ್ಕೃತಿಯನ್ನು ಅವರು ವಿಶ್ವಕ್ಕೆ ಪರಿಚಯಿಸಿದರು ಎಂದು ತಹಶೀಲ್ದಾರ್ ಎಂ ರಘುಮೂರ್ತಿ ಹೇಳಿದರು.
ನಗರದ ಜನತಾ ಕಾಲೋನಿ ಹೊರಭಾಗದಲ್ಲಿರುವ ಹೊಂಗಿರಣ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ 159ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ ನೀಡಿದ ಸಂದೇಶ ಇಂದು ಸಮಸ್ತ ರಾಷ್ಟ್ರದ ಯುವಕರಿಗೆ ಮಾರ್ಗದರ್ಶನವಾಗಿದೆ. ಸ್ವಾಮಿ ವಿವೇಕಾನಂದರ ಸ್ಪೂರ್ತಿ ಮತ್ತು ಆದರ್ಶಗಳು ಸರ್ವಕಾಲಕ್ಕೂ ಎಲ್ಲರಿಗೂ ಮಾರ್ಗದರ್ಶಕವಾಗಿವೆ. ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಪರೀಕ್ಷಿಸಿದ ನಂತರ ಇಡೀ ವಿಶ್ವವೇ ಭಾರತದಂತಹ ಮಹಾನ್ ವ್ಯಕ್ತಿ ಎಂದರೆ ಸ್ವಾಮಿ ವಿವೇಕಾನಂದರು ಎಂದರು.
ಈ ಸಂದರ್ಭದಲ್ಲಿ ಹೊಂಗಿರಣ ವಿದ್ಯಾಸಂಸ್ಥೆಯ ಮುಖ್ಯಸ್ಥ ದಯಾನಂದ್ ಶಿವಕುಮಾರ್, ಇಂಡಸ್ ವ್ಯಾಲಿ ಮುಖ್ಯಸ್ಥ ಇಂಡಸ್ ಚಿಕ್ಕಣ್ಣ ಸ್ವಾಮಿ ವಿವೇಕಾನಂದರನ್ನು ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಶಾಲಾ ಸಿಬ್ಬಂದಿ ಮಕ್ಕಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post