No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 10, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
  • Advertise With Us
  • Grievances
  • About Us
  • Contact Us
Thursday, September 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಕಳ್ಳತನದಂತಹ ಚಾಳಿಯಿಂದ ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಳ್ಳುತ್ತೀರ, ಗೌರವಯುತವಾಗಿ ಬದುಕಿ

ಕಳ್ಳತನದ ಆರೋಪಿಗಳಿಗೆ ಚಿತ್ರದುರ್ಗ ಹೆಚ್ಚುವರಿ ಎಸ್’ಪಿ ಕಿವಿಮಾತು

kalpa News by kalpa News
February 18, 2020
in Small Bytes, ಚಿತ್ರದುರ್ಗ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚಳ್ಳಕೆರೆ: ಕಳ್ಳತನ ಮಾಡುವುದು ಅಪರಾಧ. ಹೀಗಾಗಿ ಇಂತಹ ಕೃತ್ಯಗಳಲ್ಲಿ ತೊಡಗಿದ್ದವರನ್ನು ಸಮಾಜದಲ್ಲಿ ಕೀಳು ಮನೋಭಾವನೆಯಿಂದ ನೋಡುತ್ತಾರೆ. ಹಳೆ ಕಳ್ಳತನ ಚಾಳಿಯನ್ನು ಬಿಟ್ಟು ಹೊಸ ಮನುಷ್ಯರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸಿದರೆ ಅಂತವರನ್ನು ಕಳ್ಳರ ಪಟ್ಟಿಯಿಂದ ಕೈಬಿಡುವುದಾಗಿ ಜಿಲ್ಲಾ ಹೆಚ್ಚುವರಿ ಎಸ್’ಪಿ ಮಹಾಲಿಂಗನಂದಗಾವಿ ಕಿವಿಮಾತು ಹೇಳಿದರು.

ಚಳ್ಳಕೆರೆ ಪೊಲೀಸ್ ಉಪಾಧೀಕ್ಷಕರ ಕಚೇರಿ ವ್ಯಾಪ್ತಿಯ ಚಳ್ಳಕೆರೆ, ನಾಯಕನಹಟ್ಟಿ, ರಾಂಪುರ, ಪರಶುರಾಂಪುರ, ತಳಕು, ಮೊಳಕಾಲ್ಮೂರು ಠಾಣೆ ವ್ಯಾಪ್ತಿಯಲ್ಲಿ ವಿವಿಧ ಕಳ್ಳತನಗಳಲ್ಲಿ ಭಾಗಿಯಾಗಿದ್ದ ಕಳ್ಳರನ್ನು ನಗರದ ಡಿವೈಎಸ್’ಪಿ ಕಚೇರಿ ಆವರಣದಲ್ಲಿ ಭಾನುವಾರ ಪೆರೇಡ್ ನಡೆಸಿ ಮಾತನಾಡಿದರು.

ಕಳ್ಳತನ ಮಾಡುವುದು ಅಪರಾಧ. ಹೀಗಾಗಿ ಇಂತಹ ಕೃತ್ಯಗಳಲ್ಲಿ ತೊಡಗಿದ್ದವರನ್ನು ಸಮಾಜದಲ್ಲಿ ಕೀಳು ಮನೋಭಾವನೆಯಿಂದ ನೋಡುತ್ತಾರೆ. ಪದೇ ಪದೇ ಪೊಲೀಸರು ನಿಮ್ಮ ಮನೆಯ ಬಳಿ ಬಂದರೆ ನಿಮ್ಮ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮಗಳು ಬೀರಿ ನಿಮಗೆ ಪ್ರಶ್ನೆ ಕೇಳುವಂತಾಗುತ್ತವೆ. ನಿಮ್ಮ ನೆಂಟರಿಷ್ಟರು, ಬಂಧು ಬಳಗ ದೂರವಾಗಿ ನಿಮ್ಮ ಮಕ್ಕಳಿಗೆ ವಿವಾಹ ಮಾಡಿಕೊಳ್ಳಲು, ಕೊಡಲು ಯಾರು ಮುಂದೆ ಬರುವುದಿಲ್ಲ ಎಂದರು.

ನೀವು ಮಾಡುವ ಕೆಟ್ಟ ಕೆಸಲಗಳಿಂದ ನಿಮ್ಮ ಕುಟುಂಬ ಹಾಗೂ ಗ್ರಾಮಕ್ಕೆ ಕೆಟ್ಟ ಹೆಸರು ಬರುವುದು ಬೇಡ. ಕಳ್ಳತನ, ದುಶ್ಚಟ, ದೊಂಬಿ, ಗಲಾಟೆ ಹಾಗೂ ಇತರೆ ಅಪರಾಧ ಕೃತ್ಯಗಳಿಂದ ದೂರ ಉಳಿದು, ಒಳ್ಳೆಯ ನಡತೆ ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸುತ್ತಿರುವ ವ್ಯಕ್ತಿಗಳ ಬಗ್ಗೆ ಗ್ರಾಮಸ್ಥರು, ನೆರೆಹೊರೆ ಹಾಗೂ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ಕಳ್ಳತನ ಪಟ್ಟಿಯಿಂದ ತಾತ್ಕಾಲಿಕವಾಗಿ ಕೈಬಿಡುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ನೀಡಲಾಗುವುದು. ಆದ್ದರಿಂದ ಪೊಲೀಸ್ ಇಲಾಖೆ ನಿಮ್ಮ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನಿಗಾ ವಹಿಸಲಿದೆ. ಮತ್ತೆ ಇಂತಹ ಕೃತ್ಯಗಳನ್ನು ಮಾಡಿರುವುದು ಬೆಳಕಿಗೆ ಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಿಂಗಳು ಠಾಣೆಗೆ ಬಂದು ಹಾಜರಾತಿಗೆ ಸಹಿ ಹಾಕಬೇಕು. ಪೊಲೀಸ್ ಇಲಾಖೆಯಿಂದ ಕರೆ ಮಾಡಿದಾಗ ಅಥವಾ ಕರೆದಾಗ ಬಂದು ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ.

ಪೆರೇಡ್’ನಲ್ಲಿ ಭಾಗವಹಿಸಿ ಆಂಧ್ರದ ರಾಯದುರ್ಗ, ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದ ಕಳ್ಳರು ಒಕ್ಕೊರಲಿನಿಂದ ಸ್ವಾಮಿ, ನಾವು ಇನ್ನು ಮುಂದೆ ಕಳ್ಳತನ ಮಾಡುವುದಿಲ್ಲ. ಕೂಲಿ ಕೆಲಸ ಮಾಡಿಕೊಂಡು ಉತ್ತಮ ಜೀವನ-ಸಂಸಾರ ನಡೆಸುತ್ತೇವೆ. ನಮ್ಮನ್ನು ಕಳಂಕಿತರ ಪಟ್ಟಿಯಿಂದ ಕೈಬಿಡುವಂತೆ ಮನವಿ ಮಾಡಿಕೊಂಡರು.

ಡಿವೈಎಸ್’ಪಿ ರೋಷನ್ ಜಮೀರ್ ಮಾತನಾಡಿ, ಕಳ್ಳತನ ಪ್ರಕರಣಗಳು ಕಂಡು ಬಂದರೆ ಮಾಹಿತಿ ನೀಡಬೇಕು. ಅಲ್ಲದೆ ಇತ್ತೀಚಿಗೆ ಸರಗಳ್ಳತನ, ಬೈಕ್, ಮೊಬೈಲ್, ಮನೆಗಳ್ಳತನಗಳು ನಡೆಯುತ್ತಿದ್ದು, ಕದ್ದ ಮಾಲುಗಳನ್ನು ಮಾರಾಟ ಮಾಡುತ್ತಿರುವ ಅಪರಿತರ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ನಿಮ್ಮ ಗಮನಕ್ಕೆ ಅಂತಹವರ ಮಾಹಿತಿ ಇದ್ದರೆ ತತಕ್ಷಣ ಪೋಲಿಸರಿಗೆ ಮಾಹಿತಿ ನೀಡಬೇಕು ಎಂದರು.

ಈ ವೇಳೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಹೆಚ್ಚುವರಿ ಎಸ್‌ಪಿ ಮಹಾಲಿಂಗನಂದಗಾವಿ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ನೆರೆಯ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ವಾಸ ಮಾಡುವ ಆರೋಪಿಗಳು ವಾಸ ಮಾಡುವ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕಣದ ಆರೋಪಿಗಳ ಚಲನ ವಲನದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಚಳ್ಳಕೆರೆ ಉಪನಿರೀಕ್ಷಕರ ಕಚೇರಿ ವ್ಯಾಪ್ತಿಯಲ್ಲಿ ಸುಮಾರು 500 ಜನರು ಕಳ್ಳತನ ಪಟ್ಟಿಯಲ್ಲಿದ್ದು ಸ್ಥಳೀಯ ಠಾಣೆ ವ್ಯಾಪ್ತಿಯಲ್ಲಿ 143 ಕಳ್ಳರಿದ್ದಾರೆ. ನೆರೆ ರಾಜ್ಯ, ಜಿಲ್ಲೆಯ ಹಾಗೂ ಬೇರೆ ಠಾಣೆ ವ್ಯಾಪ್ತಿಯ ನಿವಾಸಿಗಳು ಸ್ಥಳೀಯವಾಗಿ ಕಳ್ಳತನ ಮಾಡಿದವರು 357 ಜನ ಆರೋಪಿಗಳಿದ್ದಾರೆ. ಸತ್ತವರನ್ನು ಹಾಗೂ 60 ವರ್ಷ ವಯೋವೃದ್ದರನ್ನು, ಕಳ್ಳತನ ಮಾಡಲು ಶಕ್ತಿ ಇಲ್ಲದ ರೋಗಿಗಳಿಗೆ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಮಾಹಿತಿ ನೀಡಿದರು.

ಪೆರೇಡ್ ಕಾರ್ಯಕ್ರಮದಲ್ಲಿ ಚಳ್ಳಕೆರೆ ವೃತ್ತ ನಿರೀಕ್ಷ ಈ. ಆನಂದ್, ಮೊಳಕಾಲ್ಮೂರು ವೃತ್ತ ನಿರೀಕ್ಷಕ ಗೋಪಾಲನಾಯ್ಕ, ಪಿಎಸ್’ಐಗಳಾದ ನೂರ್ ಆಹ್ಮದ್, ಸತೀಶ್ ನಾಯ್ಕ, ರಘುನಾಥ್, ಶಿವಕುಮಾರ್, ಗುಡ್ಡಪ್ಪ, ಬಸವರಾಜ್ ಇತರರಿದ್ದರಿದ್ದರು.

(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)

Get in Touch With Us info@kalpa.news Whatsapp: 9481252093

Tags: Anti Social ElementsBayalu Seeme NewsChallakereChallakere PoliceChitradurgaKalpa News Digital MediaKannada News WebsiteTheftಕಳ್ಳತನಚಳ್ಳಕೆರೆಚಿತ್ರದುರ್ಗಮೊಳಕಾಲ್ಮೂರು
Share210Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಖೈದಿಗಳ ಮನಃಪರಿವರ್ತನೆಗೆ ಶಿಕ್ಷಣ ಅಸ್ತ್ರ ಪ್ರಯೋಗಿಸುವ ಈ ಕಾರಾಗೃಹ ಮುಖ್ಯ ಅಧೀಕ್ಷಕರ ಕಾರ್ಯ ಪ್ರಶಂಸನೀಯ

Next Post

ಭದ್ರಾವತಿ ಅಭಿವೃದ್ಧಿಗೆ 100 ಕೋಟಿ ರೂ. ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಸಚಿವರಿಗೆ ಮನವಿ

kalpa News

kalpa News

Next Post

ಭದ್ರಾವತಿ ಅಭಿವೃದ್ಧಿಗೆ 100 ಕೋಟಿ ರೂ. ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಸಚಿವರಿಗೆ ಮನವಿ

Leave a Reply Cancel reply

Your email address will not be published. Required fields are marked *

No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 10, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL