ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಮನೆಯ ಮುಂದೆ ಹಲವು ಬಗೆಯ ಹಣ್ಣಿನ ಗಿಡವನ್ನು ನೆಡುವ ಮೂಲಕ ಹಸಿರು ಗಿಡ ಬೆಳೆಸಲು ಯುವಕರಿಗೆ ಪ್ರೇರಣೆ ನೀಡಬೇಕು ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಸ್ವಯಂ ಸೇವಕರಿಗೆ ಸಲಹೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತ್ಯಾಗರಾಜನಗರದ ವಿಸ್ಮಯ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡ ನೆಟ್ಟರೆ ಸಾಲದು ಅದನ್ನು ಬೆಳೆಸಿ ಪೋಷಣೆ ಮಾಡಿದರೆ ಸಾವಿರಾರು ಜನಕ್ಕೆ ಆಶ್ರಯ ನೀಡುತ್ತದೆ. ಜೊತೆಗೆ ಹಣ್ಣುಗಳು ತಿನ್ನಬಹುದು, ಪಕ್ಷಿಗಳಿಗೂ ಸಹ ಕಣ್ಣು ತಿನ್ನುವುದಕ್ಕೆ ಸಹಕಾರಿಯಾಗುತ್ತದೆ ಎಂದರು.
ಮೊದಲು ಗಿಡ ಬೆಳೆಸಬೇಕು ನಂತರ ಕೊಚ್ಚಿ ಹೋಗುವ ಮಣ್ಣನ್ನು ತಡೆಯುವಂತೆ ಮಾಡಿ, ಬೀಳುವ ನೀರನ್ನು ಇಂಗುವಂತೆ ಮಾಡಬೇಕು. ಇಂಗಿದ ನೀರು ಅಂತರ್ಜಲ ಮಟ್ಟಕ್ಕೆ ಅನುಕೂಲವಾಗುವಂತೆ ಮಾಡಿಕೊಳ್ಳಬೇಕು. ಮನೆಯ ಹಿಂದೆ ಮುಂದುಗಡೆ ಗಿಡ ನೆಟ್ಟರೆ ಅನುಪಯುಕ್ತ ನೀರನ್ನು ಹಾಕಿ ಗಿಡ ಬೆಳೆಸಬಹುದು. ಗಿಡದಿಂದ ಮರ, ಮರದಿಂದ ಆಮ್ಲಜನಕ ಹಲವು ಉಪಯೋಗವಾಗುವಂತಹ ಅನುಕೂಲಗಳನ್ನು ಮರಗಳಿಂದ ನಮಗೆ ಸಿಗುತ್ತದೆ ಎಂದರು.
ಸಂಸ್ಥೆ ಸಂಚಾಲಕಿ ಸವಿತಾ, ಭವಿಷ್ಯದ ಪೀಳಿಗೆಯ ರಕ್ಷಣೆಗಾಗಿ ಗಿಡವನ್ನು ಬೆಳೆಸಬೇಕಾಗಿದೆ. ನಾವು ನಮ್ಮ ಸಂಸ್ಥೆಯಿಂದ ಸುಮಾರು ಪ್ರತಿ ವರ್ಷ ಸಾವಿರ ಗಿಡಗಳನ್ನು ವಿತರಣೆ ಮಾಡುವ ಅಭಿಲಾಷೆ ಹೊಂದಿದ್ದೇವೆ. ಅದರಂತೆ ಇಂದು ಆನೂರು ಹಣ್ಣಿನ ಗಿಡಗಳನ್ನು ಮನೆಮನೆಗೆ ಹೋಗಿ ವಿತರಣೆ ಮಾಡಿದ್ದೇವೆ. ಹಾಗಾಗಿ ಹಸಿರು ಹೆಜ್ಜೆ ಸಂಸ್ಥೆಯಿಂದ ಪ್ರತಿ ಮನೆಗೂ ಒಂದೊಂದು ಹಣ್ಣಿನ ಗಿಡವನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಡಿವೈಎಸ್ಪಿ ಕೆ.ಬಿ. ಶ್ರೀಧರ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟು ಬೆಳೆಸುವುದರ ಮೂಲಕ ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
Also read: ಜೂ.21ರಂದು 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ನಗರಸಭೆ ಸದಸ್ಯ ಎಸ್.ಜಯಣ್ಣ, ಶಾಲಾ-ಕಾಲೇಜಿನಲ್ಲಿ ಪರಿಸರ ಸಂರಕ್ಷೆಯ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಸುಮ ಅಂಜನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್. ಪ್ರಸನ್ನಕುಮಾರ್, ಸಿ.ಎಂ. ವಿಶುಕುಮಾರ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್, ಸಂಸ್ಥೆ ಸಂಘಟಕ ಎಂ. ಶಿವಕುಮಾರ್, ಎಚ್.ವಿ. ಕೃಷ್ಣಮೂರ್ತಿ, ಗಣೇಶ್, ಅಭಿನಂದನ್, ರವಿಕುಮಾರ್ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post