ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ತನ್ನ ಗಂಡನ ತಲೆಯಲ್ಲಿ ಕೂದಲು ಇಲ್ಲ ಎಂಬ ಕಾರಣದಿಂದ ಬಾಂಡ್ಲಿ, ಬಾಂಡ್ಲಿ ಎಂದು ಪತ್ನಿ ಅಪಹಾಸ್ಯ ಮಾಡಿದ್ದರಿಂದ ಮನನೊಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಉಡಿಗಾಲದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಪರಶಿವಮೂರ್ತಿ(32) ಎಂದು ಗುರುತಿಸಲಾಗಿದೆ.
Also Read>> ಅರಣ್ಯ ಕಳೆದುಕೊಂಡ ಕೃಷಿಕಾರ್ಯಕ್ಕೆ ಭವಿಷ್ಯವಿಲ್ಲ | ಶ್ರೀಪಾದ ಬಿಚ್ಚುಗತ್ತಿ
ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಅಪಹಾಸ್ಯ ಮಾಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ಪರಶಿವಮೂರ್ತಿ ಮತ್ತು ಮಮತಾ ಮದುವೆಯಾಗಿದ್ದರು. ವೃತ್ತಿಯಲ್ಲಿ ಪರಶಿವಮೂರ್ತಿ ಲಾರಿ ಚಾಲಕನಾಗಿದ್ದರು.
ಮದುವೆ ಬಳಿಕ ಪರಶಿವಮೂರ್ತಿ ಕೂದಲು ಸಂಪೂರ್ಣ ಉದುರಿತ್ತು. ಹೊರಗಡೆ ಹೋದರೆ ನನೆಗೆ ನಾಚಿಕೆಯಾಗುತ್ತೆಂದು ಮಮತಾ ಅಪಹಾಸ್ಯ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ಸಹ ಮಮತಾ ದಾಖಲಿಸಿದ್ದು, ಪರಶಿವಮೂರ್ತಿಯನ್ನು ಜೈಲಿಗೂ ಕಳುಹಿಸಿದ್ದರು.
ಇಷ್ಟೇ ಅಲ್ಲದೆ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದ ಮಮತ, ಮದುವೆಯಾಗಿದ್ದರೂ ತಾಳಿ ಇಲ್ಲದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಇದೇ ವಿಚಾರಕ್ಕೆ ಮನೆಯಲ್ಲಿ ಪದೇಪದೆ ಜಗಳ ಆಗುತ್ತಿತ್ತು. ಹೀಗಾಗಿ ಹೆಂಡತಿಯ ನವರಂಗಿ ಆಟಕ್ಕೆ ರೋಸಿ ಹೋಗಿದ್ದ ಪರಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post