ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಶಂಕರಪುರ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನವಮಿ Shri Ramanavami ಪಟ್ಟಾಭಿಷೇಕದ ಅಂಗವಾಗಿ ಇಂದು ಶ್ರೀ ಸೀತಾ ಕಲ್ಯಾಣ ಮಹೋತ್ಸವ Shri Sitha Kalyana Mahothsava ನೂರಾರು ಸಂಖ್ಯೆಯ ಭಕ್ತರು ಭಾಗವಹಿಸಿ ಸೀತಾರಾಮರ ಆಶೀರ್ವಾದವನ್ನು ಪಡೆದರು.
ಪ್ರಧಾನ ಪುರೋಹಿತರಾದ ವೇದ ಬ್ರಹ್ಮಶ್ರೀ ಜಯರಾಮ್ ಶಾಸ್ತಿç ರವರು ಸೀತಾ ಕಲ್ಯಾಣ ಮಹೋತ್ಸವ , ಶ್ರೀರಾಮ ಪಟ್ಟಾಭಿಷೇಕ , ಶ್ರೀ ಆಂಜನೇಯ ಉತ್ಸವಗಳು ಊರಿನ ಕಲ್ಯಾಣಕ್ಕಾಗಿ, ಲೋಕಕಲ್ಯಾಣಕ್ಕಾಗಿ ಹಾಗೂ ಸರ್ವರ ಆರೋಗ್ಯ ಐಶ್ವರ್ಯಾ ಅಭಿವೃದ್ಧಿ ಯಾಗಿ ಸರ್ವರಿಗೂ ಶಾಂತಿ ನೆಮ್ಮದಿ ದೊರಕುವಂತೆ ಆಗಲಿ ಎಂದು ಪ್ರಾರ್ಥಿಸುತ್ತಾ ಸೀತಾ ಮತ್ತು ಶ್ರೀ ರಾಮರ ಆದರ್ಶಗಳು ನಮ್ಮ ಬದುಕಿನಲ್ಲಿ ಉಳಿಯಲಿ ಎಂದರು.
ದಂಪತಿಗಳು ಸೀತಾರಾಮರ ವಿಗ್ರಹಕ್ಕೆ ಧಾರೆ ಎರೆಯುವ ಮೂಲಕ ಸಂತೃಪ್ತರಾದರು
ಶ್ರೀರಾಮ ಮಂದಿರದ ಪ್ರತಾಪ್, ಸತೀಶ್, ಪಾರ್ವತಿಸುದರ್ಶನ್, ಸುರೇಶ್ ಎನ್ ಋಗ್ವೇದಿ, ವತ್ಸಲ ರಾಜಗೋಪಾಲ, ರಾಜೇಶ್ವರಿ ಶ್ರೀಧರ್, ರಾಜೇಂದ್ರಪ್ರಸಾದ್, ಅಂಬಿಕಾ ಶ್ವೇತಾದ್ರಿ, ಗಾಯತ್ರಿ ರಾಮಮೂರ್ತಿ, ರಾಧಾಕೃಷ್ಣ, ರಂಗನಾಥ್ ಸತ್ಯನಾರಾಯಣ ರಾಘವ, ಹಾಗೂ ಭಕ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















