ಕಲ್ಪ ಮೀಡಿಯಾ ಹೌಸ್ | ಚಂಡೀಗಢ |
ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು Navajoth Singh Sidhu ಅಲ್ಲಿ ಗುಮಾಸ್ತನ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಪಟಿಯಾಲ ಕೇಂದ್ರ ಕಾರಾಗೃಹದಲ್ಲಿರುವ ಸಿಧು ಅವರನ್ನು ಕೊಠಡಿ ಸಂಖ್ಯೆ 10ರಲ್ಲಿ ಇರಿಸಲಾಗಿದೆ. ಕಾರಾಗೃಹದ ನಿಯಮದ ಅನ್ವಯ ಸಿಧು ಅವರನ್ನು ದಿನಗೂಲಿ ಗುಮಾಸ್ತನ ಕೆಲಸಕ್ಕೆ ನಿಯೋಜಿಸಲಾಗಿದ್ದು, ದಿನಕ್ಕೆ 90 ರೂ. ಸಂಬಳ ನೀಡಲಾಗುತ್ತದೆ. ಮೊದಲ ಮೂರು ತಿಂಗಳು ಹಣ ನೀಡದೇ ಕೇವಲ ತರಬೇತಿ ನೀಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಅವರು ದುಡಿದ ಒಟ್ಟು ಹಣವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ಗಂಟೆಯವರೆಗೆ ಸಿಧು ಕೆಲಸ ಮಾಡುತ್ತಿದ್ದಾರೆ. ನಡುವೆ 2 ಗಂಟೆಗಳ ಕಾಲ ವಿರಾಮವಿರುತ್ತದೆ. ಅವರ ಕೊಠಡಿ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ.
Also read: ಸದ್ಯಕ್ಕೆ ಸ್ಯಾಂಡಲ್’ವುಡ್’ಗೆ ಸಿಗಲ್ಲ ಪ್ರಶಾಂತ್ ನೀಲ್!?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post