ಕಲ್ಪ ಮೀಡಿಯಾ ಹೌಸ್ | ಚಂಡೀಗಢ |
ಪಾಕಿಸ್ಥಾನದ ನಿಷೇಧಿತ ಉಗ್ರ ಸಂಘಟನೆಗಳಾದ ಇಂಟರ್ ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್ ಮುಖ್ಯಸ್ಥ, ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡೆ Khalistan Terrorist Lakbhir Singh ಹೃದಯಾಘಾತದಿಂದ ನಿಧನ ಹೊಂದಿದ್ದಾನೆ ಎಂದು ಹೇಳಲಾಗಿದೆ.
ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಲಖ್ಬೀರ್, ಖಲಿಸ್ತಾನಿ ಪ್ರತ್ಯೇಕತಾವಾದಿ ಚಳವಳಿಯ ಮಾಸ್ಟರ್ ಆಗಿದ್ದ ಭಿಂದ್ರನ್ವಾಲೆ ಸಾವಿನ ನಂತರ ಈತ ಪಾಕಿಸ್ತಾನ ಪರಾರಿಯಾಗಿ ಲಾಹೋರ್’ನಲ್ಲಿ ನೆಲೆಸಿದ್ದ ಎಂದು ವರದಿಯಾಗಿದೆ.
ಖಲಿಸ್ತಾನಿ ಚಳವಳಿಯ ಹಿಂದಿನ ಮಾಸ್ಟರ್ ಮೈಂಡ್ ಜರ್ನೈಲ್ ಸಿಂಗ್ ಭಿಂದ್ರನ್ವಾಲೆಯ ಸೋದರಳಿಯನಾಗಿದ್ದ ಲಖ್ಬೀರ್, ಭಾರತದ `ಮೋಸ್ಟ್ ವಾಂಟೆಡ್’ ಉಗ್ರರಲ್ಲಿ ಒಬ್ಬನಾಗಿದ್ದ. ಲಖ್ಬೀರ್ ಸಿಂಗ್ ರೋಡೆ ನಿಧನದ ಸುದ್ದಿಯನ್ನು ಅವರ ಸಹೋದರ ಮತ್ತು ಮಾಜಿ ಅಕಲ್ ತಖ್ತ್ ಜತೇದಾರ್ ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.
Also read: ಡ್ರೋಣ್ ದಾಳಿಯಲ್ಲಿ ನೈಜೀರಿಯಾ ಸೇನೆಯ ಸಣ್ಣ ಎಡವಟ್ಟಿಗೆ ಬಲಿಯಾಗಿದ್ದು ಎಷ್ಟು ಮಂದಿ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post